Advertisement

ಉಕ್ರೇನ್ ನಲ್ಲಿ ಸಿಲುಕಿದ್ದ ಉಜಿರೆಯ ಹೀನಾ ಫಾತಿಮಾ ಮಂಗಳೂರಿನತ್ತ

11:10 AM Mar 05, 2022 | Team Udayavani |

ಬೆಳ್ತಂಗಡಿ: ಯುದ್ಧಗ್ರಸ್ಥ ಉಕ್ರೇನ್‌ನ ಖಾರ್ಕಿವ್ ನಲ್ಲಿ ಸಿಲುಕಿದ್ದ ಬೆಳ್ತಂಗಡಿ ತಾಲೂಕಿನ ಉಜಿರೆಯ ವೈದ್ಯ ವಿದ್ಯಾರ್ಥಿನಿ ಹೀನಾ ಫಾತಿಮಾ ಅವರು ಪೋಲಂಡ್ ನಿಂದ ಭಾರತೀಯ ಎಂಬಸಿ ಸಹಾಯಹಸ್ತದಲ್ಲಿ ಇಂದು ದೆಹಲಿಗೆ ಬಂದು ತಲುಪಿದ್ದಾರೆ.

Advertisement

ಕಳೆದ ನಾಲ್ಕು ದಿನಗಳಿಂದ ಹೀನಾ ಫಾತಿಮಾ ಅವರ ಬರುವಿಕೆಗಾಗಿ ಕಾತುರರಾಗಿದ್ದ ಮನೆಮಂದಿಗೆ ಇದೀಗ ಹರ್ಷ ತಂದಿದೆ. ಹೀನಾ ಫಾತಿಮಾ ಸದ್ಯ ದೆಹಲಿಯಲ್ಲಿ ತಂಗಿದ್ದು, ಇಂದು ಸಂಜೆ 4 ಗಂಟೆಗೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ತಲುಪಲಿದ್ದು ಅಲ್ಲಿಂದ ಮಂಗಳೂರಿಗೆ ಪ್ರಯಾಣ ಬೆಳೆಸುವ ಮೂಲಕ ತಾಯ್ನಾಡಿಗೆ ಮರಳುವರು.

ಇದನ್ನೂ ಓದಿ:ರಾಣಿಬೆನ್ನೂರಿನ ನವೀನ್ ಮನೆಗೆ ಭೇಟಿ ಕೊಡುತ್ತೇನೆ: ಸಿಎಂ ಬಸವರಾಜ್ ಬೊಮ್ಮಾಯಿ

ಹೀನಾ ಫಾತಿಮಾ ಸಹಿತ ಅನೇಕರು ಕಾರ್ಕೀವ್ ಪ್ರದೇಶದಲ್ಲಿ ಸಿಲುಕಿದ್ದರು. ಅಲ್ಲಿಂದ ಲಿವಿವ್ ಪ್ರದೇಶಕ್ಕೆ ರೈಲಿನ ಮೂಲಕ ಬಂದು ಅಲ್ಲಿಂದ ಪೋಲಂಡ್ ತಲುಪಿದ್ದರಾದರು. ಯುದ್ಧ ಗ್ರಸ್ತ ಉಕ್ರೇನ್ ನಲ್ಲಿ ಸಿಲುಕಿದ ವಿದ್ಯಾರ್ಥಿಗಳು ಭಯದ ವಾತಾವರಣದಿಂದ ಇನ್ನೂ ಹೊರಬಂದಿಲ್ಲ. ಆದರೆ ಕೇಂದ್ರ ಸರಕಾರ ಅಲ್ಲಿದ್ದವರನ್ನು ಪಾರುಮಾಡುವ ನೆಲೆಯಲ್ಲಿ ಸಂಪೂರ್ಣ ಸಹಕಾರ ಒದಗಿಸುತ್ತಿದೆ. ಜಿಲ್ಲಾಧಿಕಾರಿ ಕಚೇರಿ ತಹಶೀಲ್ದಾರ್, ಉಜಿರೆ ಗ್ರಾ.ಪಂ. ವತಿಯಿಂದ ಮನೆಮಂದಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಧೈರ್ಯ ತುಂಬುತ್ತಿದ್ದಾರೆ ಎಂದು ಹೀನಾ ಅವರ ಮಾವ ಉದ್ಯಮಿ ಆಬಿದ್ ಅಲಿ ಉದಯವಾಣಿಗೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next