Advertisement

ಅಡಕೆ ನೇರ ಖರೀದಿ ಪ್ರಕ್ರಿಯೆ ವಾಪಸ್‌ಗೆ ಮನವಿ

03:03 PM Jan 02, 2018 | |

ಸಾಗರ: ತಾಲೂಕಿನ ಸಮಗ್ರ ಅಭಿವೃದ್ಧಿಗೆ ಪೂರಕವಾದ ಮನವಿಯನ್ನು ಜ.6ರಂದು ಸಾಗರಕ್ಕೆ ಭೇಟಿ ನೀಡುವ ಮುಖ್ಯಮಂತ್ರಿಗಳಿಗೆ
ಸಲ್ಲಿಸಲಾಗುವುದು. ಪ್ರಮುಖವಾಗಿ ಪ್ರವಾಸೋದ್ಯಮ ಹಾಗೂ ಕ್ಯಾಂಪ್ಕೋ ಮಾಡುತ್ತಿರುವ ನೇರ ಖರೀದಿ ಅಡಿಕೆ ಪ್ರಕ್ರಿಯೆಯನ್ನು ವಾಪಾಸ್‌ ಪಡೆಯುವಂತೆ ಮನವಿಯಲ್ಲಿ ಸೇರಿಸಲಾಗಿದೆ ಎಂದು ತಾಪಂ ಅಧ್ಯಕ್ಷ ಬಿ.ಎಚ್‌.ಮಲ್ಲಿಕಾರ್ಜುನ ಹಕ್ರೆ ತಿಳಿಸಿದರು.

Advertisement

ನಗರದ ಸಾಮರ್ಥ್ಯಸೌಧದಲ್ಲಿ ಸೋಮವಾರ ಮುಖ್ಯಮಂತ್ರಿಗಳ ಭೇಟಿ ಹಿನ್ನೆಲೆಯಲ್ಲಿ ನಡೆದ ಪಿಡಿಒ ಹಾಗೂ ಕಾರ್ಯದರ್ಶಿಗಳ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಪಿಎಂಸಿಯಲ್ಲಿ ಕ್ಯಾಂಪ್ಕೋ ಸಂಸ್ಥೆ ನೇರ ಅಡಿಕೆ ಖರೀದಿ ಮಾಡುತ್ತಿದ್ದು, ಇದರಿಂದ ಬೆಳೆಗಾರರಿಗೆ ನಷ್ಟವಾಗುತ್ತಿದೆ. ರಾಜ್ಯಾದ್ಯಂತ ಈ ಟೆಂಡರ್‌ ವ್ಯವಸ್ಥೆ ಜಾರಿಯಲ್ಲಿದ್ದರೂ, ಕ್ಯಾಂಪ್ಕೋ ಸಂಸ್ಥೆ ತನ್ನದೇ ರೀತಿಯಲ್ಲಿ ಟೆಂಡರ್‌ ಪ್ರಕ್ರಿಯೆ ನಡೆಸುತ್ತಿದೆ. ಇದು ಎಪಿಎಂಸಿ ಕಾಯ್ದೆ 172ಎ ಪ್ರಕಾರ ಕಾನೂನು ಬಾಹಿರವಾಗಿದೆ. ಬೆಳೆಗಾರರಿಗೆ ಸ್ಪರ್ಧಾತ್ಮಕ ದರ ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕ್ಯಾಂಪ್ಕೋಗೆ ನೀಡಿರುವ ನೇರ ಖರೀದಿ ವ್ಯವಹಾರ ಹಿಂದಕ್ಕೆ ಪಡೆಯುವಂತೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಸಾಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಇರುವ ಬಹುತೇಕ ಮುಳುಗಡೆ ಸಂತ್ರಸ್ತರಾಗಿದ್ದು, ಅವರಿಗೆ ರಿಯಾಯಿತಿ ದರದಲ್ಲಿ ದಿನದ 24 ಗಂಟೆ ವಿದ್ಯುತ್‌ ಪೂರೈಕೆ ಮಾಡಲು ಸರ್ಕಾರ ಕ್ರಮ ತೆಗೆದುಕೊಳ್ಳಬೇಕು. ರಬ್ಬರ್‌ ಬೆಳೆಗಾರರು ತೀವ್ರ ಸಂಕಷ್ಟದಲ್ಲಿದ್ದು, 
ಕಾಳುಮೆಣಸು ಮಾದರಿಯಲ್ಲಿ ರಬ್ಬರ್‌ ಬೆಳೆಗೆ ಆಮದು ಶುಲ್ಕ ಹೆಚ್ಚಿಸಲು ಮನವಿ ಮೂಲಕ ಒತ್ತಾಯಿಸಲಾಗುತ್ತಿದೆ ಎಂದರು.

ಲಿಂಗನಮಕ್ಕಿ ಆಣೆಕಟ್ಟಿನಲ್ಲಿ 160 ಟಿಎಂಸಿ ನೀರು ಸಂಗ್ರಹವಾಗುತ್ತಿದ್ದು, ಅದು ಸಮುದ್ರಕ್ಕೆ ಹರಿದು ಹೋಗಿ ಅಪವ್ಯಯಗೊಳ್ಳುತ್ತಿದೆ.
ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಶರಾವತಿ ನದಿ ನೀರು ಅಪವ್ಯಯವಾಗಿ ಹರಿದು ಹೋಗುವುದನ್ನು ತಿರುಗಿಸಿ, ಜಿಲ್ಲೆಯ ಕೆರೆಗಳನ್ನು ಭರ್ತಿ ಮಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುತ್ತದೆ ಎಂದು ತಿಳಿಸಿದರು. 

ಗೋಮಾಳ, 94ಸಿ, 94ಸಿಸಿ, ಅರಣ್ಯಭೂಮಿ, ಗಾಂವ್‌ಠಾಣಾ, ಬಗರ್‌ಹುಕುಂ ಹಕ್ಕುಪತ್ರ ವಿತರಿಸುತ್ತಿದ್ದು, ಈ ನಿಟ್ಟಿನಲ್ಲಿ ಹಕ್ಕುಪತ್ರ
ಸಿದ್ಧªಗೊಳಿಸಲಾಗುತ್ತಿದೆ. 94ಸಿ ಅಡಿಯಲ್ಲಿ ನಿವೇಶನಕ್ಕೆ ಹಕ್ಕುಪತ್ರ ಮಾಡಿಸಿಕೊಳ್ಳಲು ಹಣ ಕಟ್ಟಲು ಕೆಲವರು ಹಿಂದೇಟು ಹಾಕುತ್ತಿದ್ದಾರೆ. ಈಗಾಗಲೇ 94ಸಿ ಕಾಯ್ದೆಯ ಮೇಲೆ ತಡೆಯಾಜ್ಞೆ ತರುವ ಪ್ರಯತ್ನ ಕೆಲವರು ಮಾಡುತ್ತಿದ್ದು, ಫಲಾನುಭವಿಗಳು ತಕ್ಷಣ ಹಣ ಪಾವತಿಸಿ, ಹಕ್ಕುಪತ್ರ ಪಡೆದುಕೊಳ್ಳಬೇಕು ಎಂದರು. ತಾಪಂ ಇಒ ಡಾ| ಎಸ್‌.ಕಲ್ಲಪ್ಪ , ಕಂದಾಯ ಇಲಾಖೆಯ ಅ ಕಾರಿಗಳು
ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next