ಹೆಬ್ರಿ: ನೂತನ ತಾಲೂಕು ಕಚೇರಿ ನಿರ್ಮಾಣ ಆಗುವ ವರೆಗೆ ಹೆಬ್ರಿ ಸಮುದಾಯ ಆರೋಗ್ಯ ಕೇಂದ್ರವನ್ನು ತಾತ್ಕಾಲಿಕ ಹೆಬ್ರಿ ತಾಲೂಕು ಕಚೇರಿಯನ್ನಾಗಿ ಮಾಡಲಾಗಿದ್ದು ಕಚೇರಿಯ ಒಳಗೆ ನೂತನ ಆರ್‌ಟಿಸಿ ಕೇಂದ್ರವನ್ನು ಜೂ. 3ರಂದು ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್ ಉದ್ಘಾಟಿಸಿದರು.
Advertisement
ಆಧಾರ್ ಸೇವೆಈಗಾಗಲೇ ಭೂಮಿ ಆ್ಯಪ್ ಅಂತಿಮ ಹಂತದಲ್ಲಿದ್ದು ಇನ್ನೂ 10 ದಿನನ ಒಳಗೆ ಹೆಬ್ರಿ ತಾಲೂಕು ಕಚೇರಿಯಲ್ಲಿ ಆಧಾರ್ ಸೇವೆ ಆರಂಭಿಸಲಾಗುವುದು ಎಂದು ಶಾಸಕರು ಹೇಳಿದರು.
ಕಾರ್ಕಳ ತಾಲೂಕಿನ 12 ಗ್ರಾಮಗಳು ಹಾಗೂ ಕುಂದಾಪುರ ತಾಲೂಕಿನ 4 ಗ್ರಾಮಗಳ ದಾಖಲೆಗಳು ಇನ್ನೂ ಅಯಾ ತಾಲೂಕು ಕೇಂದ್ರಗಳಲ್ಲಿ ಇದ್ದು ಇದೀಗ ಭೂಮಿ ಆ್ಯಪ್ ಮೂಲಕ ಹೆಬ್ರಿ ತಾಲೂಕಿಗೆ ಸೇರಿಸುವ ಕೆಲಸಕಾರ್ಯಗಳು ನಡೆಯುತ್ತಿದ್ದು ಶೀಘ್ರದಲ್ಲಿ ಹಸ್ತಾಂತರವಾಗಲಿದೆ. ಪೂರ್ಣ ಪ್ರಮಾಣದ ತಾಲೂಕು ಅಗಲು ಕಾಲಾವಕಾಶ ಬೇಕಾಗಿದ್ದು ಜನರ ಸಹಕಾರ ಅಗತ್ಯ ಎಂದು ಹೆಬ್ರಿ ತಾಲೂಕು ತಹಶೀಲ್ದಾರ್ ಮಹೇಶ್ಚಂದ್ರ ಹೇಳಿದರು. ಈ ಸಂದರ್ಭ ಜಿ.ಪಂ. ಸದಸ್ಯೆ ಜ್ಯೋತಿ ಹರೀಶ್, ತಾ.ಪಂ. ಸದಸ್ಯರಾದ ಅಮೃತಕುಮಾರ್ ಶೆಟ್ಟಿ, ರಮೇಶ್ ಪೂಜಾರಿ, ಚಂದ್ರಶೇಖರ ಶೆಟ್ಟಿ, ಹೆಬ್ರಿ ಗ್ರಾ.ಪಂ. ಅಧ್ಯಕ್ಷ ಎಚ್.ಕೆ. ಸುಧಾಕರ, ಹೆಬ್ರಿ ತಾಲೂಕು ಹೋರಾಟ ಸಮಿತಿಯ ಅಧ್ಯಕ್ಷ ಎಚ್. ಭಾಸ್ಕರ್ ಜೋಯಿಸ್, ಸಂಚಾಲಕ ನೀರೆ ಕೃಷ್ಣ ಶೆಟ್ಟಿ, ಸ್ಥಳೀಯ ಗ್ರಾ.ಪಂ. ಅಧ್ಯಕ್ಷರಾದ ಶಶಿಕಲಾ ಡಿ. ಪೂಜಾರಿ, ರಾಮಣ್ಣ ಪೂಜಾರಿ, ಸುಗಂಧಿ ನಾಯ್ಕ, ಸಂದೀಪ್ ನಾಯ್ಕ, ಸುರೇಂದ್ರ ಶೆಟ್ಟಿ, ಜಲಜಾ ಪೂಜಾರಿ, ಗ್ರಾಮ ಲೆಕ್ಕಿಗ ಗಣೇಶ್ ಉಪಸ್ಥಿತರಿದ್ದರು.
Related Articles
ತಾಲೂಕು ಘೋಷಣೆಯಾಗಿ ಒಂದೂವರೆ ವರ್ಷ ಕಳೆದರೂ ಹೆಬ್ರಿ ತಾಲೂಕಿಗೆ ಸಂಬಂಧ ಪಟ್ಟಂತಹ ಎಲ್ಲ ದಾಖಲೆಗಳು ಇನ್ನೂ ಕಾರ್ಕಳ ಹಾಗೂ ಕುಂದಾಪುರ ತಾಲೂಕು ಕಚೇರಿಯಲ್ಲಿಯೇ ಇವೆೆ. ಈ ಬಗ್ಗೆ ಜಿಲ್ಲಾಧಿಕಾರಿಯನ್ನು ಕೇಳಿದರೆ ಎಲ್ಲ ವರ್ಗಾವಣೆಗೊಂಡಿದೆ. ನೀವು ಅಲ್ಲಿ ವಿಚಾರಿಸಿ ಎನ್ನುತ್ತಾರೆ. ಹಾಗಾದರೆ ಇನ್ನೂ ದಾಖಲೆ ಕಡತಗಳು ಯಾಕೆ ವರ್ಗಾವಣೆ ಗೊಂಡಿಲ್ಲ? ಕೇವಲ ಆರ್‌ಟಿಸಿ ನೀಡಿದರೆ ಸಾಲದು. ಶೀಘ್ರದಲ್ಲಿ ಪೂರ್ಣ ಪ್ರಮಾಣದ ತಾಲೂಕಾಗಿ ಜನರ ಅಲೆದಾಟವನ್ನು ತಪ್ಪಿಸಬೇಕು ಎಂದು ಪ್ರಗತಿಪರ ನಾಗರಿಕ ಸೇವಾ ಸಮಿತಿ ಅಧ್ಯಕ್ಷ ಕೆರೆಬೆಟ್ಟು ಸಂಜೀವ ಶೆಟ್ಟಿ ಅವರು ಆಗ್ರಹಿಸಿದ್ದಾರೆ.
Advertisement
ಸೌಲಭ್ಯಗಳ ವಿತರಣೆಈ ಸಂದರ್ಭ ಇತ್ತಿಚೆಗೆ ಪ್ರಕೃತಿ ವಿಕೋಪದಿಂದ ನೊಂದವರಿಗೆ ಪರಿಹಾರವಾಗಿ ಚೆಕ್ ವಿತರಣೆ, ಪಹಣಿ ಪತ್ರ ವಿತರಣೆ ಹಾಗೂ ಸಮಸ್ಯೆಗಳ ಬಗ್ಗೆ ಅಹವಾಲು ಸ್ವೀಕಾರ ಕಾರ್ಯಕ್ರಮ ನಡೆಯಿತು.