Advertisement

ಹೆಬ್ರಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ, ಕೃತಜ್ಞತಾ ಸಭೆ

01:00 AM Mar 13, 2019 | Team Udayavani |

ಹೆಬ್ರಿ: ಹೆಬ್ರಿ ತಾಲೂಕಾಗಿ ಘೋಷಣೆಗೊಂಡ  ಬಳಿಕ ಅಸ್ಥಿತ್ವಕ್ಕೆ ಬಂದ ಹೆಬ್ರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ಆಶ್ರಯದಲ್ಲಿ ನಡೆದ ಮೊದಲ ಹೆಬ್ರಿ ತಾಲೂಕು ಸಾಹಿತ್ಯ ಸಮ್ಮೇಳನ ಎಲ್ಲರ ಸಹಕಾರದೊಂದಿಗೆ ಯಶಸ್ವಿಯಾಗಿದೆ ಎಂದು  ಹೆಬ್ರಿ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಹರಿದಾಸ ಬಿ.ಸಿ. ರಾವ್‌ ಶಿವಪುರ ಹೇಳಿದರು.

Advertisement

ಅವರ ಮಾ. 10ರಂದು  ಅನಂತ ಪದ್ಮನಾಭ ಸನ್ನಿಧಿ ಸಭಾಭವನದಲ್ಲಿ ನಡೆದ ಹೆಬ್ರಿ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳದ ಕೃತಜ್ಞತಾ ಸಭೆಯಲ್ಲಿ ಮಾತನಾಡಿದರು. ಬದುಕು ಮತ್ತು ಬರಹದ ಸಮಕಾಲಿನ ಹಿರಿಯ ಸಾಹಿತಿ ಅಂಬಾತನಯ ಅವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮದ ಯಶಸ್ವಿಯ ರುವಾರಿಗಳಾದ ಯೋಗಿಶ್‌ ಭಟ್‌,ಭಾಸ್ಕರ್‌ ಜೋಯಿಸ್‌ ಅವರ ವಿಶೇಷ ಮುತುವರ್ಜಿಯಲ್ಲಿ ಯುವ ತಂಡದ ಸಂಘಟನೆ ಹಾಗೂ ಶಿಕ್ಷಕರ ವಿಶೇಷ ಸಹಭಾಗಿತ್ವದಲ್ಲಿ ಕಾರ್ಯಕ್ರಮ ಇತಿಹಾಸ ಸೃಷ್ಠಿಸಿದೆ ಎಂದರು. ಹಿರಿಯ ಸಾಹಿತಿ ಅಂಬಾತನಯ ಮುದ್ರಾಡಿ  ಮಾತನಾಡಿ ಹಿಂದೆ ನಡೆದುಹೋದ ಘಟನೆಗಳ ಬಗ್ಗೆ ಚಿಂತಿಸಿದೆ ಮುಂದೆ ಎಲ್ಲರನ್ನೂ ಒಗ್ಗೂಡಿಸಿಕೊಂಡು ಉತ್ತಮ ಕಾರ್ಯಕ್ರಮಗಳು ಹೆಬ್ರಿ ಘಟಕದಿಂದ ಆಗಲಿ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಹೆಬ್ರಿ ತಾಲೂಕು ಘಟಕ ಕ.ಸಾ.ಪ. ಅಧ್ಯಕ್ಷ ಪಿ.ವಿ. ಆನಂದ ಸಾಲಿಗ್ರಾಮ ಮಾತನಾಡಿ ಕಾರ್ಯಕ್ರಮದ ಯಶಸ್ಸಿಗೆ ಸಹಕಾರಿ ಆದವರಿಗೆ ಕೃತಜ್ಞತೆ ಸಲ್ಲಿಸಿದರು. ಸಭೆಯಲ್ಲಿ ಸ್ವಾಗತ ಸಮಿತಿಯ ಅಧ್ಯಕ್ಷ ಯೋಗಿಶ್‌ ಭಟ್‌, ಲಯನ್ಸ್‌ ಪ್ರಾಂತೀಯ ಅಧ್ಯಕ್ಷ ಟಿ.ಜಿ.ಆಚಾರ್ಯ ಮೊದಲಾದವರಿದ್ದರು. ಹೆಬ್ರಿ ತಾ| ಕಸಾಪದ ಗೌರವ ಕಾರ್ಯದರ್ಶಿ ಬಲ್ಲಾಡಿ ಚಂದ್ರಶೇಖರ್‌ ಭಟ್‌ ಸ್ವಾಗತಿಸಿ,ಕಾರ್ಯಕ್ರಮ ನಿರೂಪಿಸಿ,ಪ್ರವೀಣ್‌ ವಂದಿಸಿದರು.

ಉದಯವಾಣಿ ಬಗ್ಗೆ ಮೆಚ್ಚುಗೆ
ಹೆಬ್ರಿಯ ಇತಿಹಾಸದಲ್ಲಿ ನಡೆದ ಮೊದಲ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ವಿದೇಶ ಪ್ರಚಾರವನ್ನು ಉದಯವಾಣಿ ಪತ್ರಿಕೆ ಕೊಟ್ಟಿದೆ ಎಂದು  ಸಾಹಿತ್ಯ ಸಮ್ಮೇಳನದ‌ ಸ್ವಾಗತ ಸಮಿತಿಯ ಕಾರ್ಯಧ್ಯಕ್ಷ ಎಚ್‌.ಭಾಸ್ಕರ್‌ ಜೋಯಿಸ್‌ ಮೆಚ್ಚುಗೆ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next