Advertisement

ಕೊನೆಗೂ ಹೆಬ್ರಿ ತಾಲೂಕು ಕಚೇರಿ ಆರಂಭಕ್ಕೆ ಸಿದ್ಧತೆ

12:19 AM May 23, 2019 | sudhir |

ಹೆಬ್ರಿ: ತಾಲೂಕು ಘೋಷಣೆಗೊಂಡು ಒಂದೂವರೆ ವರ್ಷ ಕಳೆದ ಬಳಿಕ ಹೆಬ್ರಿ ತಾಲೂಕು ಕಚೇರಿ ಕೆಲಸ ಆರಂಭಕ್ಕೆ ಸಿದ್ಧತೆಗಳು ನಡೆಯುತ್ತಿದೆ.

Advertisement

ನೂತನ ತಾಲೂಕು ಕಚೇರಿ ನಿರ್ಮಾಣ ಆಗುವ ವರೆಗೆ ಹೆಬ್ರಿ ಸಮುದಾಯ ಆರೋಗ್ಯ ಕೇಂದ್ರವನ್ನು ತಾತ್ಕಾಲಿಕ ಕಚೇರಿಯನ್ನಾಗಿ ಮಾಡಲಾಯಿತಾದರೂ ಇದುವರೆಗೆ ಯಾವುದೇ ಮೂಲಸೌಕರ್ಯಗಳಿರಲಿಲ್ಲ. ಇದೀಗ ಪಿಠೊಪಕರಣಗಳು ಹಾಗೂ ಮುಖ್ಯವಾಗಿ ಕಂಪ್ಯೂಟರಗಳನ್ನು ಅಳವಡಿಸುವ ಕಾರ್ಯ ನಡೆಯುತ್ತಿದೆ.

ಕಾರ್ಕಳ ತಾಲೂಕಿನ 12 ಗ್ರಾಮಗಳು ಹಾಗೂ ಕುಂದಾಪುರ ತಾಲೂಕಿನ 4 ಗ್ರಾಮಗಳ ದಾಖಲೆಗಳು ಇನ್ನೂ ಆಯಾ ತಾಲೂಕು ಕೇಂದ್ರಗಳಲ್ಲಿ ಇದ್ದು ಇದೀಗ ಭೂಮಿ ಆ್ಯಪ್‌ ಮೂಲಕ ಹೆಬ್ರಿ ತಾಲೂಕಿಗೆ ಸೇರಿಸುವ ಕೆಲಸಕಾರ್ಯಗಳು ನಡೆದಿದೆ. ಮೇ 27ರ ಅನಂತರ ಎಲ್ಲ ದಾಖಲೆಗಳು ಹೆಬ್ರಿಗೆ ವರ್ಗಾವಣೆಯಾಗಲಿದ್ದು ಜೂ. 1ರಿಂದ ಪಹಣಿ ಪತ್ರ ಹಾಗೂ ಇತರ ಕಡತಗಳು ಹೆಬ್ರಿ ತಾಲೂಕು ಕಚೇರಿಯಲ್ಲಿಯೇ ಸಿಗುವಂತೆ ಮಾಡಲಾ ಗುವುದೆಂದು ಕಂದಾಯ ಅಧಿಕಾರಿಗಳು ತಿಳಿಸಿದ್ದಾರೆ.

ಹೆಬ್ರಿ ತಾಲೂಕಿಗೆ ಸಂಬಂಧ ಪಟ್ಟಂತಹ ಎಲ್ಲ ದಾಖಲೆಗಳು ಇನ್ನೂ ಕೂಡ ಕಾರ್ಕಳ ಹಾಗೂ ಕುಂದಾಪುರ ತಾಲೂಕು ಕಚೇರಿಯಲ್ಲಿಯೇ ಇದೆ. ಹೆಬ್ರಿ ತಾಲೂಕು ಕಚೇರಿಯಲ್ಲಿ ತಹಸೀಲ್ದಾರ್‌ ಮಾತ್ರ ಲಭ್ಯವಿದ್ದರೆ ಜನರಿಗೆ ಏನು ಪ್ರಯೋಜನ ಎಂದು ಗ್ರಾಮಸ್ಥರು ಪ್ರಶ್ನಿಸಿದ್ದಾರೆ.

ಶೀಘ್ರ ಕಚೇರಿ ಕಾರ್ಯಾರಂಭ
ಲೋಕಸಭಾ ಚುನಾವಣೆ ಬಂದ ಕಾರಣ ವಿಳಂಬವಾಗಿದೆ. ಮೇ 27ರನಂತರ ಎಲ್ಲಾ ಕೆಲಸಕಾರ್ಯಗಳು ಆರಂಭಗೊಳ್ಳಲಿದೆ. ಈಗಾಗಲೇ ಹೆಬ್ರಿ ತಾಲೂಕಿಗೆ ನೂತನ ಸಿಬಂದಿ ನೇಮಕವಾಗಿದ್ದು ಇನ್ನರೆಡು ದಿನಗಳಿÉ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ. ಕುಂದಾಪುರ ಹಾಗೂ ಕಾರ್ಕಳ ತಾಲೂಕು ಕಚೇರಿಯಲ್ಲಿರುವ ಹೆಬ್ರಿ ತಾಲೂಕಿಗೆ ಸಂಬಂಧಿಸಿದೆ ದಾಖಲೆಗಳು ಇನ್ನು ಎರಡು ದಿನಗಳಲ್ಲಿ ಹೆಬ್ರಿ ತಾಲೂಕಿಗೆ ವರ್ಗಾವಣೆಯಾಗಲಿವೆ.
– ಮಹೇಶ್ಚಂದ್ರ, ತಹಶೀಲ್ದಾರ್‌, ಹೆಬ್ರಿ

Advertisement
Advertisement

Udayavani is now on Telegram. Click here to join our channel and stay updated with the latest news.

Next