Advertisement
ಅವರು ಜು. 25ರಂದು ಶ್ರೀ. ಕ್ಷೇ.ಧ.ಗ್ರಾ.ಯೋಜನೆ (ರಿ.) ಹಾಗೂ ಜನಜಾಗೃತಿ ವೇದಿಕೆ ಹೆಬ್ರಿ ವಲಯ ಇವರ ವತಿಯಿಂದ ನಡೆದ ರಾಜ್ಯದಲ್ಲಿ ಮದ್ಯಪಾನ ನಿಷೇಧಿಸಬೇಕು ಹಾಗೂ ನೂತನ ಮದ್ಯದಂಗಡಿಗಳಿಗೆ ಪರವಾನಿಗೆ ನೀಡದಂತೆ ಹೆಬ್ರಿ ಅನಂತಪದ್ಮನಾಭ ಸನ್ನಿಧಿ ಸಭಾಭವನದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.
Related Articles
Advertisement
ಜನಜಾಗೃತಿ ವೇದಿಕೆಯ ತಾ| ಅಧ್ಯಕ್ಷ ಕಮಲಾಕ್ಷ ನಾಯಕ್, ಹೆಬ್ರಿ ಗ್ರಾ.ಪಂ. ಉಪಾಧ್ಯಕ್ಷೆ ವೀಣಾ ಪ್ರಭು, ತಾ.ಪಂ. ಸದಸ್ಯ ರಮೇಶ್ ಕುಮಾರ್, ನೇತ್ರಾವತಿ ಶೆಟ್ಟಿ , ಜಗನ್ನಾಥ ಕುಲಾಲ್, ಇಂದಿರಾ ನಾಯ್ಕ, ಕೃಷ್ಣ, ಸುಧಾಕರ ಶೆಟ್ಟಿ, ಭೋಜ ನಾಯ್ಕ ಮೊದಲಾದವರಿದ್ದರು.
ಹರೀಶ್ ಆಚಾರ್ಯ ಸ್ವಾಗತಿಸಿ, ಸಹದೇವ ಕಾರ್ಯಕ್ರಮ ನಿರೂಪಿಸಿ, ಗಿರೀಶ್ ವಂದಿಸಿದರು.
ಮೆಹೆಂದಿಗೆ ಸಾಲ
ಮದುವೆ ಆನ್ನುವ ಪವಿತ್ರ ಕಾರ್ಯಕ್ರಮದ ಸಂಭ್ರಮ ಇಂದು ಮರೆಯಾಗಿದ್ದು ಮೆಹೆಂದಿ ಎನ್ನುವ ಅದ್ದೂರಿಯ ಸಂಭ್ರಮ ಎಲ್ಲರಲ್ಲಿ ಮನೆ ಮಾಡಿದೆ. ಇದಕ್ಕೆ ಕಾರಣ ಮದ್ಯಪಾನದಂತಹ ದುಶ್ಚಟಕ್ಕೆ ಯುವ ಜನತೆ ಬಲಿಯಾಗಿರುವುದು.
ಬಡತನವಿದ್ದರೂ ಇಂದು ಮೆಹೆಂದಿ ಕಾರ್ಯಕ್ರಮಕ್ಕೆ ಬ್ಯಾಂಕ್‌ಗಳಲ್ಲಿ ಸಾಲ ಮಾಡಿ ಅದ್ದೂರಿ ಖರ್ಚು ಮಾಡುವ ಮೂಲಕ ಸಮಾಜದ ಶಾಂತಿ ನೆಮ್ಮದಿ ಕೆಡಿಸುವವರು ತುಂಬಿದ್ದಾರೆ. ನಾವು ಬದಲಾದಾಗ ಮಾತ್ರ ನಮ್ಮ ಸಮಾಜವನ್ನು ಬದಲಿಸಬಹುದು. ಪ್ರತಿಯೊಬ್ಬರೂ ಕೂಡ ಮದ್ಯಪಾನ ನಿಷೇಧಿಸುವಲ್ಲಿ ಸಂಘಟಿತರಾಗಬೇಕು.– ನೀರೆ ಕೃಷ್ಣ ಶೆಟ್ಟಿ