ಹೆಬ್ರಿ: ಕಳೆದ 57 ವರ್ಷಗಳಿಂದ ಹೋರಾಟ ನಡೆಸುತ್ತಿರುವ ಬೌಗೋಳಿಕವಾಗಿ ಸೇರಿದಂತೆ ಸಂಪೂರ್ಣ ಅರ್ಹತೆಯಿರುವ ಹೆಬ್ರಿ ತಾಲೂಕು ರಚನೆ ವಿಚಾರದಲ್ಲಿ ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಅವರು ಸಂಪೂರ್ಣ ನಿರ್ಲಕ್ಷ್ಯ ತೋರಿದ ಪ್ರತಿಫಲವಾಗಿ ಇಂದು ಹೆಬ್ರಿ ತಾಲೂಕು ರಚನೆ ಕೈಬಿಟ್ಟಿದೆ.
ಈ ಬಾರಿಯ ಬಜೆಟ್‌ನಲ್ಲಿ 49 ತಾಲೂಕುಗಳು ಘೋಷಣೆಯಾಗಿರುವುದು ಕೇವಲ ಹೋರಾಟದಿಂದ ಅಲ್ಲ. ಆ ಭಾಗದ ಶಾಸಕರ ಪ್ರಯತ್ನ ಕಾರಣವಾಗಿದೆ. ಈ ಭಾಗದ ಜನರ ಮತಪಡೆದು ಅಧಿಕಾರಕ್ಕೆ ಬಂದ ಎಲ್ಲ ಜನಪ್ರತಿನಿಧಿಗಳು ಬಿಜೆಪಿಯವರಾಗಿದ್ದೂ ಹೆಬ್ರಿ ತಾಲೂಕು ರಚನೆ ವಿಚಾರದಲ್ಲಿ ಯಾವುದೇ ಧ್ವನಿ ಎತ್ತದೆ ಮತ ನೀಡಿದ ಜನರಿಗೆ ಅನ್ಯಾಯ ಮಾಡಿದ್ದಾರೆ ಎಂದು ಹೆಬ್ರಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಉಡುಪಿ ಜಿ.ಪಂ. ಮಾಜಿ ಸದಸ್ಯ ಎಂ. ಮಂಜುನಾಥ ಪೂಜಾರಿ ಅವರು ಹೇಳಿದ್ದಾರೆ.
ಅವರು ಮಾ. 16ರಂದು ಹೆಬ್ರಿ ನಾರಾಯಣ ಗುರು ಸಭಾಭವನದಲ್ಲಿ ನಡೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದರು. ಕೇವಲ ಪತ್ರಕಾ ಹೇಳಿಕೆಯನ್ನು ಮಾತ್ರ ನೀಡುತ್ತಿರುವ ಈ ಭಾಗದ ಶಾಸಕರು ಮೋರಿ ರಚನೆಯಾದಲ್ಲಿ ತನ್ನ ಪ್ರಯತ್ನ ದಿಂದ ಆಗಿದೆ ಎಂದು ಬೃಹತ್ ಬ್ಯಾನರನ್ನು ಹಾಕುತ್ತಿರುವವರು ಹೆಬ್ರಿ ತಾಲೂಕು ರಚನೆ ವಿಚಾರದಲ್ಲಿ ಏಕೆ ಮೌನವಾಗಿದ್ದಾರೆ. ಜನರ ಪರವಾಗಿ ಕೆಲಸ ಮಾಡುತ್ತೇನೆ ಎಂಬ ಆಶ್ವಾಸನೆಗಳನ್ನು ನೀಡುತ್ತಾ ವಿಪಕ್ಷದ ಮುಖ್ಯ ಸಚೇತಕರಾಗಿಯೂ ಪ್ರಭಾವವಿರುವ ಹಾಗೂ ಕಂದಾಯ ಮಂತ್ರಿಗಳಾದ ಕಾಗೋಡು ತಿಮ್ಮಪ್ಪ ಅವರ ಸಂಬಂಧಿಯಾದ ಕಾರ್ಕಳ ಶಾಸಕರು ಹೆಬ್ರಿ ತಾಲೂಕು ರಚನೆಯ ಬಗ್ಗೆ ಪ್ರಯತ್ನಿಸಿದರೆ ಆರ್ಹತೆಯಿರುವ ಹೆಬ್ರಿ ತಾಲೂಕು ರಚನೆ ಸಾಧ್ಯವಿತ್ತು ಎಂದು ಅವರು ಹೇಳಿದರು.
ಮುಖ್ಯಮಂತ್ರಿ ಬಳಿ ನಿಯೋಗ: ಈಗ ಕೇವಲ ತಾಲೂಕು ರಚನೆ ಮಂಡನೆ ಮಾತ್ರ ಆಗದೆ ಆದರೆ ಅನುಮàದನೆಯಾಗಲು ಇನ್ನೂ ಹತ್ತು ದಿನ ಕಾಲಾವಕಾಶವಿದೆ. ಈ ಬಗ್ಗೆ ಮಾಜಿ ಶಾಸಕರಾದ ಎಚ್. ಗೋಪಾಲ ಭಂಡಾರಿಯವರ ನೇತೃತ್ವದಲ್ಲಿ ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿಗಳು ಹಾಗೂ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಲಿ ಅವರಲ್ಲಿ ಮನವಿ ಸಲ್ಲಿಸಿ ತಾಲೂಕು ಘೋಷಣೆ ಮಾಡುವಂತೆ ಹೋರಾಟ ನಡೆಸಲಾಗುವುದು ಎಂದರು. ಈ ಸಂದರ್ಭದಲ್ಲಿ ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಸುಜಾತಾ ಲಕ್ಷ್ಮಣ, ಮುದ್ರಾಡಿ ಗ್ರಾ.ಪಂ. ಅಧ್ಯಕ್ಷೆ ಶಶಿಕಲಾ ಪೂಜಾರಿ, ಕಾಂಗ್ರೆಸ್ ಪಕ್ಷದ ಮುಖಂಡರಾದ ಗುಳಿಬೆಟ್ಟು ಸುರೇಶ್ ಶೆಟ್ಟಿ, ಸಂತೋಷ ಕುಮಾರ್ ಶೆಟ್ಟಿ, ಬಿಲ್Éಬೈಲು ಸುರೇಶ್ ಶೆಟ್ಟಿ, ಭೋಜ ಪೂಜಾರಿ, ಸುರೇಶ್ ಭಂಡಾರಿ, ಶಶಿಕಲಾ ಪೂಜಾರಿ, ಜನಾರ್ದನ, ಸದಾಶಿವ ಪ್ರಭು ಮೊದಲಾದವರಿದ್ದರು.