Advertisement
ಹೆಬ್ರಿ ಉಡುಪಿ ಮುಖ್ಯ ರಸ್ತೆಗೆ ತಾಗಿಕೊಂಡು ಕಾಲೇಜು ಆವರಣದ ಒಳಗೆ ಅತ್ಯಾಕರ್ಷಕವಾಗಿ ನಿರ್ಮಾಣಗೊಂಡ ಎರಡು ಮಹಡಿಯ ತಾಲೂಕು ಆಡಳಿತ ಕಟ್ಟಡ ಜೂ.1ರಂದು ಸಿಎಂ ಬೊಮ್ಮಾಯಿ ಅವರಿಂದ ಉದ್ಘಾಟನೆಗೊಳ್ಳಲಿದ್ದು ಸುಮಾರು 5 ಸಾವಿರಕ್ಕೂ ಮಿಕ್ಕಿ ಜನ ಸೇರುವ ನಿರೀಕ್ಷೆಯಿದೆ.
Related Articles
Advertisement
ಮೊದಲ ಮಹಡಿಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಉಪ ನೋಂದಣಾಧಿಕಾರಿ ಕಾರ್ಯಾಲಯ, ಅಭಿಲೇಖಾಲಯ, ಉಪ ನೋಂದಣಾಧಿಕಾರಿ ಕೊಠಡಿ, ಶಾಸಕರ ಕೊಠಡಿ, ಶಾಸಕರ ಆಪ್ತ ಸಹಾಯಕರ ಕೊಠಡಿ, ತಹಶೀಲ್ದಾರ್ ಅವರ ಕಾರ್ಯಾಲಯದ ಸಭಾಂಗಣ, ಚುನಾವಣ ಶಾಖೆಯ ಕೊಠಡಿ ಮತ್ತು ಅಭಿಲೇಖಾಲಯ ಕೇಸ್ವಾನ್ ಸಿಬಂದಿಯ ಕೊಠಡಿ, ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಾರ್ಯಾಲಯ ಒಳಗೊಂಡಿದೆ. ವಿಶಾಲ ಜಾಗದಲ್ಲಿ ಆಕರ್ಷಕ ಕಟ್ಟಡ ನಿರ್ಮಾಣಗೊಂಡಿದ್ದು ಸುಮಾರು 8 ಜನ ಸಾಮರ್ಥ್ಯದ ಲಿಫ್ಟ್ ವ್ಯವಸ್ಥೆ ಇದೆ. ಕಚೇರಿ ಸಿಬಂದಿ, ಸಾರ್ವಜನಿಕರಿಗೆ, ಅಂಗವಿಕಲರಿಗೆ ಪ್ರತ್ಯೇಕ ಪಾರ್ಕಿಂಗ್‌ಗೆ ವ್ಯವಸ್ಥೆ ಕಲ್ಪಿಸಲಾಗಿದೆ.
2.38 ಕೋಟಿ ರೂ. ವೆಚ್ಚದ ಕಾಮಗಾರಿಗೆ ಪ್ರಸ್ತಾವನೆ ಕಟ್ಟಡದ ಸುತ್ತ ಸುಸಜ್ಜಿತ ಕಾಂಪೌಂಡ್ ವ್ಯವಸ್ಥೆ, ಕಚೇರಿ ಆವರಣದ ಒಳಗೆ ಗಾರ್ಡನ್, ಹೈಮಾಸ್ಟ್ ದೀಪ, ತಹಶೀಲ್ದಾರ್ ಅವರ ವಸತಿ ಗೃಹ ನಿರ್ಮಾಣ ಸೇರಿದಂತೆ ಸುಮಾರು 2.38 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಈಗಾಗಲೇ ಸಂಬಂಧಪಟ್ಟವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಹಶೀಲ್ದಾರ್ ಪುರಂದರ ಕೆ. ತಿಳಿಸಿದ್ದಾರೆ.
ಜನರ ಅಲೆದಾಟ ತಪ್ಪಲಿ
ನೂತನವಾಗಿ ಹೆಬ್ರಿ ತಾಲೂಕು ರಚನೆಯಾಗಿ 5 ವರ್ಷಗಳು ಕಳೆದಿವೆ. ಒಂದು ತಾಲೂಕು ಪೂರ್ಣವಾಗಲು ಸುಮಾರು 30 ಇಲಾಖೆಗಳು ಬೇಕಾಗುತ್ತದೆ. ಆದರೆ ಹೆಬ್ರಿಯಲ್ಲಿ ಇದುವರೆಗೆ ಕೇವಲ 3 ತಾಲೂಕು ಮಟ್ಟದ ಇಲಾಖೆಗಳಿವೆ. ಉಳಿದ ಇಲಾಖೆಗಳು ಶೀಘ್ರ ಕಾರ್ಯಾರಂಭ ಮಾಡುವುದರ ಜತೆ ಜನರಿಗೆ ಅತೀ ಅಗತ್ಯವಾದ ನಾಡಕಚೇರಿ, ಉಪ ನೋಂದಣಾಧಿಕಾರಿ ಕಚೇರಿ ಶೀಘ್ರ ಆರಂಭವಾಗಬೇಕು. ಕೇವಲ ಬೃಹತ್ ಕಟ್ಟಡವಿದ್ದರೆ ಸಾಲದು ಜನರಿಗೆ ಸೇವೆ ಬೇಕು. ಆದಷ್ಟು ಶೀಘ್ರ ಜನರ ಅಲೆದಾಟವನ್ನು ತಪ್ಪಿಸಿ ಪೂರ್ಣ ಪ್ರಮಾಣದ ತಾಲೂಕು ಆಡಳಿತ ಜನರಿಗೆ ಸಿಗುವಂತಾಗಲಿ. -ಕೆರೆಬೆಟ್ಟು ಸಂಜೀವ ಶೆಟ್ಟಿ, ಅಧ್ಯಕ್ಷರು, ಪ್ರಗತಿಪರ ನಾಗರಿಕ ಹೋರಾಟ ಸಮಿತಿ
ಹೆಬ್ರಿ ಉದಯಕುಮಾರ್ ಶೆಟ್ಟಿ