ಹೆಬ್ರಿ: ಕಳೆದ 40 ವರ್ಷಗಳ ನಿರಂತರ ಹೋರಾಟದ ಫಲವಾಗಿ ಹೆಬ್ರಿ ತಾಲೂಕು ರೂಪುಗೊಂಡಿದೆ. ಇದಕ್ಕೆ ಹಲವರು ಶ್ರಮಿಸಿದ್ದಾರೆ. ಈಗ ಕಂದಾಯ ಕೆಲಸವನ್ನು ಮಾತ್ರ ನಿರ್ವಹಿಸುತ್ತಿದೆ. ಪೂರ್ಣ ಪ್ರಮಾಣದ ತಾಲೂಕಾಗಿ ಜನರಿಗೆ ಉತ್ತಮ ಸೇವೆ ನೀಡಬೇಕು ಎನ್ನುವುದು ನಮ್ಮ ಧ್ಯೇಯ. ಈ ನಿಟ್ಟಿನಲ್ಲಿ ದಾನಿಗಳ ನೆರವಿನಿಂದ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಹೆಬ್ರಿ ತಾಲೂಕಿನ ಮೊದಲ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ಉತ್ತಮವಾಗಿ ನೆರವೇರಿದೆ ಎಂದು ಹೆಬ್ರಿ ತಾಲೂಕು ತಹಶೀಲ್ದಾರ್ ಕೆ. ಮಹೇಶ್ಚಂದ್ರ ಹೇಳಿದರು.
ಹೆಬ್ರಿ ತಾಲೂಕು ಆಡಳಿತ ನೇತೃತ್ವ ದೊಂದಿಗೆ ಸ್ವಾತಂತ್ರ್ಯೋತ್ಸವ ಸಮಿತಿ ಆಶ್ರಯ ದಲ್ಲಿ ಆ. 15ರಂದು ಹೆಬ್ರಿ ಸರಕಾರಿ ಪ.ಪೂ. ಕಾಲೇಜು ಮೈದಾನದಲ್ಲಿ ನಡೆದ 73ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.ಬಳಿಕ ನಡೆದ ಸಾಂಸ್ಕೃತಿಕ ಕಾರ್ಯ ಕ್ರಮವನ್ನು ಜಿ.ಪಂ. ಸದಸ್ಯೆ ಜ್ಯೋತಿ ಹರೀಶ್ ಉದ್ಘಾಟಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ, ಹೆಬ್ರಿ ಗ್ರಾ.ಪಂ. ಅಧ್ಯಕ್ಷ ಎಚ್.ಕೆ. ಸುಧಾಕರ್ ಮಾತನಾಡಿ, ಕೇವಲ ಹೆಬ್ರಿ ತಾಲೂಕು ರಚನೆಯಾದರೆ ಸಾಲದು. ಜನರು ಇನ್ನೂ ದೂರದ ಕಾರ್ಕಳ ಕುಂದಾಪುರಗಳಿಗೆ ಅಲೆದಾಡುತ್ತಿದ್ದಾರೆ. ಈ ಸಮಸ್ಯೆಗೆ ಪೂರ್ಣ ಪ್ರಮಾಣದ ಮುಕ್ತಿ ಸಿಗಬೇಕಾದರೆ ಎಲ್ಲ ಇಲಾಖೆಗಳು ಹೆಬ್ರಿಗೆ ಬಂದು ಕಾರ್ಯನಿರ್ವಹಿಸಬೇಕು ಎಂದರು.
ಧ್ವಜಾರೋಹಣ ಮೊದಲು ವಿವಿಧ ಶಾಲಾ ವಿದ್ಯಾರ್ಥಿಗಳು, ಸಂಘ ಸಂಸ್ಥೆ ಹಾಗೂ ಇಲಾಖೆಗಳಿಂದ ಪಥಸಂಚಲನ ನಡೆಯಿತು.ಪಥಸಂಚಲನದಲ್ಲಿ ಜೆಎನ್‌ವಿ ಚಾರ ಪ್ರಥಮ, ಅಮೃತಭಾರತಿ ದ್ವಿತೀಯ, ಹೆಬ್ರಿ ಸರಕಾರಿ ಪ್ರೌಢಶಾಲೆ ತೃತೀಯ ಸ್ಥಾನ ಪಡೆದವು.
ಈ ಸಂದರ್ಭ ತಾ.ಪಂ. ಸದಸ್ಯರಾದ ಚಂದ್ರಶೇಖರ್ ಶೆಟ್ಟಿ, ಅಮೃತ್‌ಕುಮಾರ್ ಶೆಟ್ಟಿ, ಹೆಬ್ರಿ ತಾ. ಹೋರಾಟ ಸಮಿತಿ ಅಧ್ಯಕ್ಷ ಭಾಸ್ಕರ್ ಜೋಯಿಸ್, ಡಿವೈಎಸ್‌ಪಿ ಗಣೇಶ್ ಹೆಗ್ಡೆ, ಹೆಬ್ರಿ ಪೊಲೀಸ್ ಠಾಣಾಧಿಕಾರಿ ಮಹಾಬಲ ಶೆಟ್ಟಿ, ಪೊಲೀಸ್ ಅಧಿಕಾರಿ ಬಿ.ಆರ್. ಕಡಗೇರಿ, ಎಂ.ಆರ್. ಮಂಜುನಾಥ, ಪಳನಿವೇಲು, ಸುಬ್ರಹ್ಮಣ್ಯ ಆಚಾರ್ಯ, ವಾಣಿಶ್ರೀ ಹೆಗ್ಡೆ, ಸುಧಾ ವೈ.ಎಂ., ಬಿ.ಎಸ್. ವಗ್ಗೆ, ಪ್ರಕಾಶ್ ಪೂಜಾರಿ ಉಪಸ್ಥಿತರಿದ್ದರು.
ಉಡುಪಿ ಜಿಲ್ಲಾ ನಿವೃತ್ತ ದೈಹಿಕ ಶಿಕ್ಷಣಾಧಿಕಾರಿ ಸೀತಾನದಿ ವಿಟuಲ ಶೆಟ್ಟಿ ಸ್ವಾಗತಿಸಿ, ಹೆರ್ಗ ವಿಟuಲ ಶೆಟ್ಟಿ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ನಿತ್ಯಾನಂದ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಹೆಬ್ರಿ ಪ್ರೌಢಶಾಲಾ ಮುಖ್ಯ ಶಿಕ್ಷಕ ದಿವಾಕರ್ ಎಂ. ಮರಕಾಲ ವಂದಿಸಿದರು.
ಸಮ್ಮಾನ
ನಿವೃತ್ತ ಸೈನಿಕರಾದ ಯಶವಂತ ಕಾಮತ್, ಭಾಸ್ಕರ ಪೂಜಾರಿ, ಶ್ರೀಧರ್ ಶೆಟ್ಟಿ ಅವರನ್ನು ಸಮ್ಮಾನಿಸಲಾಯಿತು. ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಗೌರವ ಹಾಗೂ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.