ಕಾರ್ಕಳ: ಉಡುಪಿ ಜಿಲ್ಲೆಯಲ್ಲಿ 5 ಜನ ಮಂದಿ ಬಿಜೆಪಿ ಶಾಸಕರಿದ್ದಾರೆ ಇವರಲ್ಲಿ ಯಾರಿಗೂ ಸಚಿವರಾಗುವ ಆರ್ಹತೆ ಇಲ್ಲವೆ? ಎಂದು ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಪೂಜಾರಿ ಪ್ರಶ್ನಿಸಿದ್ದಾರೆ.
ಕಾರ್ಕಳದಲ್ಲಿ ಬುಧವಾರ ಕೇಂದ್ರ ರಾಜ್ಯ ಸರಕಾರದ ಕೋವಿಡ್ ನಿರ್ವಹಣೆ ವೈಪಲ್ಯ ಖಂಡಿಸಿ ಹೆಬ್ರಿ ಕಾರ್ಕಳ ಬ್ಲಾಕ್ ಕಾಂಗ್ರೆಸ್ ವತಿಯಿಂದ ನಡೆದ ಪ್ರತಿಭಟನೆ ಸಭೆಯಲ್ಲಿ ಅವರು ಬಿಜೆಪಿಯನ್ನು ಪ್ರಶ್ನಿಸಿದರು.
ಸಚಿವರಾಗುವ ಅರ್ಹತೆ ಇವರಿಗಿಲ್ಲ ಎನ್ನುವುದು ಸಾಬಿತಾದ ವಿಷಯ. ಅಗತ್ಯವಿಲ್ಲದ 5 ಮಂದಿ ಶಾಸಕರೂ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದರು.
ಕಾರ್ಕಳದಲ್ಲಿ ಕಾಂಗ್ರೆಸ್ ಬೇಕಾದಷ್ಟು ಆಸ್ಪತ್ರೆಯನ್ನು ಕಟ್ಟಿಸಿದೆ.ಅದನ್ನು ಸರಿಯಾಗಿ ಬಳಸಿಕೊಂಡಿಲ್ಲ. ಕೋವಿಡ್ ಸೋಂಕಿತರ ಅಂಕಿಸಂಖ್ಯೆ ನೀಡಲಾಗಿದೆ. ಅದರಲ್ಲಿ ಮೃತರಾದವರ ಮತ್ತು ಪರಿಹಾರ ವಿತರಣೆ ಬಗ್ಗೆ ಮಾಹಿತಿಯೇ ಇಲ್ಲ.ಯಾವುದೇ ಕಾಯಿಲೆಯಿಂದ ಮೃತ ಪಟ್ಟರೂ ಸಹ ಕೋರೋನಾದಿಂದ ಸತ್ತಿದ್ದಾರೆಂಬ ಅಂಕಿ ಸಂಖ್ಯೆ ನೀಡುತ್ತಿದ್ದಾರೆ. ಅನ್ಯ ಕಾಯಿಲೆಗಳಿಗೆ ಚಿಕಿತ್ಸೆ ದೊರೆಯುತ್ತಿಲ್ಲ.ಖಾಸಗಿ ಆಸ್ಪತ್ರೆಗಳಿಗೆ ಕರೆದೊಯ್ಯುವ ಪರಿಸ್ಥಿತಿ ಬಂದಿದೆ ಎಂದರು.
ಶಾಸಕರ ಖರೀದಿಗೆ ಹಣ ಇದೆ.ಪರಿಹಾರ ವಿತರಣೆಗೆ ಹಣ ಇಲ್ಲ.ಕೋಟ್ಯಾಂತರ ರೂಗಳ ಕಿಂಡಿ ಅಣೆಕಟ್ಟು, ಸಾವಿರಾರು ರಸ್ತೆ ನಿರ್ಮಾಣ ಮಾಡಿದ ಕಾರ್ಕಳ ಶಾಸಕರು ಆಕ್ಸಿಜನ್ ಪ್ಲಾಂಟ್ ನಿರ್ಮಾಣ ಮಾಡಲು ದಾನಿಗಳ ಜತೆ ಬೇಡಲು ನಾಚಿಕೆಯಾಗಲಿಲ್ವಾ?ವ್ಯಾಕ್ಸಿನ್ ಇದೆ ಎಂದು ಹೇಳುತ್ತಾರೆ.ಆಸ್ಪತ್ರೆಗೆ ಹೋಗಿ ನೋಡುವಾಗ ಇರುವುದಿಲ್ಲ ಎಂದರು.
ಕರ್ನಾಟಕದ 25 ಸಂಸದರು ಏನು ಮಾಡುತ್ತಿದ್ದಾರೆ. ಅಂದು ಕೊರೋನಾ ಬಂದಾಗ ಬಂದಿದ್ದ ಶೋಭಾ ಕರಂದ್ಲಾಜೆಯವರು ಮೊನ್ನೆ ಬಂದು ಹೋಗಿದ್ದಾರೆ. ಸರಕಾರ ನಡೆಸಲು ಆಗದಿದ್ದರೆ ಕಾಂಗ್ರೆಸ್ ಕಾರ್ಯಕ್ರಮ ಮುಂದುವರಿಸಲು ಆಗದಿದ್ದರೆ ಬಿಜೆಪಿಗರು ತತ್ ಕ್ಷಣ ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದರು.
ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ದೇವಾಡಿಗ, ಜಿಲ್ಲಾ ಕಾಂಗ್ರೆಸ್ ಪಕ್ಷಮಾಧ್ಯಮ ವಕ್ತಾರ ಬಿಪಿನ್ ಚಂದ್ರಪಾಲ್ ನಕ್ರೆ.ನಗರಾಧ್ಯಕ್ಷ ಮಧುಕರ ಶೆಟ್ಟಿ ಮೊದಲಾದವರಿದ್ದರು.