Advertisement
ಮುಂಜಾನೆ ಸುಮಾರು 4.20ರ ಹೊತ್ತಿಗೆ ಕಾರಿನಲ್ಲಿ ಬಂದ ಮೂವರ ತಂಡದಲ್ಲಿ ಇಬ್ಬರು ಮುಸುಕುದಾರಿಗಳು ತೆರೆದಿರುವ ಎಟಿಎಂಗೆ ನುಗ್ಗಿ ಶಟರ್‌ನ್ನು ಮುಚ್ಚಿ ದರೋಡೆಗೆ ಮುಂದಾದಾಗ ಬ್ಯಾಂಕ್‌ನ ಸೈರನ್ ಮೊಳಗಿತು. ಕೂಡಲೇ ಸೈರನ್‌ನ ಸಂಪರ್ಕದ ವಯರ್‌ನ್ನು ಕತ್ತರಿಸಿದ ಕಳ್ಳರು ಸುಮಾರು ಅರ್ಧ ಗಂಟೆಗಳ ಕಾಲ ಎಟಿಎಂನ್ನು ಒಡೆಯಲು ಪ್ರಯತ್ನಿಸಿದರು.ಸೈರನ್ ಶಬ್ದವಾಗುತ್ತಿದ್ದಾಧಿಗ ಎಚ್ಚರಗೊಂಡ ಆಸುಪಾಸಿನವರು ಬೊಬ್ಬೆ ಹೊಡೆದರು ಎನ್ನಲಾಗಿದೆ. ದರೋಡೆಕೋರಿಗೆ ಹೊರಗಿನ ಸಂಪೂರ್ಣ ಮಾಹಿತಿಯನ್ನು ಕಾರಿನ ಹತ್ತಿರವಿದ್ದ ಇನ್ನೊಬ್ಬ ಸಹಚರ ನೀಡುತ್ತಿದ್ದ.
Related Articles
ಬ್ಯಾಂಕ್ ಎಟಿಎಂಗೆ ಸೆಕ್ಯೂರಿಟಿ ಗಾರ್ಡ್ ಇಲ್ಲದಿರುವುದನ್ನು ಗಮನಿಸಿಯೇ ದುಷ್ಕರ್ಮಿಗಳು ದರೋಡೆಗೆ ಮುಂದಾಗಿದ್ದರು ಎಂದು ಸ್ಥಳೀಯರು ಹೇಳುತಿದ್ದಾರೆ. ಈ ಬಗ್ಗೆ ಬ್ಯಾಂಕ್ ಅಧಿಕಾರಿಗಳನ್ನು ವಿಚಾರಿಸಿದಾಗ ನಮ್ಮ ಬ್ಯಾಂಕಿನ ಎಟಿಎಂ ಕೇಂದ್ರಗಳಿಗೆ ಸೆಕ್ಯೂರಿಟಿ ಗಾರ್ಡ್‌ನ ನೇಮಕಾತಿ ನಿಲ್ಲಿಸಿದ್ದಾರೆ ಎಂದು ತಿಳಿಸಿದರು.
Advertisement
ಕರೆ ಮೂಲಕ ಅಪರಾಧಿಗಳ ಪತ್ತೆ ಬೆಳಗ್ಗೆ ಸುಮಾರು 4.20ರಿಂದ ಎಟಿಎಂ ಒಳಗಡೆ ಇರುವ ದರೋಡೆ ಕೋರರಿಗೆ ಹೊರಗಡೆ ಇದ್ದ ವ್ಯಕ್ತಿಯೋರ್ವರು ದೂರವಾಣಿ ಕರೆ ಮಾಡುತ್ತಿರುವ ಬಗ್ಗೆ ಸಂಪೂರ್ಣವಾಗಿ ಸಿಸಿ ಕೆಮರಾದಲ್ಲಿ ದಾಖಲಾಗಿದ್ದು, ಟವರ್‌ನ ನೆಟ್‌ವರ್ಕ್‌ನ್ನು ಗಮನಿಸಿ ಕರೆಮಾಡಿದ ನಂಬರ್ ಪತ್ತೆಹಚ್ಚಿ ಕಳ್ಳತನಕ್ಕೆ ಯತ್ನಿಸಿದವರನ್ನು ಹಿಡಿಯಲು ಅನುಕೂಲವಾಗಬಹುದು ಎಂದು ಸ್ಥಳೀಯರೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ.