ಬಸವಕಲ್ಯಾಣ: ಕೃಷಿ ಚಟುವಟಿಕೆಯಲ್ಲಿ ತೊಡಗಿದ ವೇಳೆ ಹೆಬ್ಟಾವು ಪ್ರತ್ಯಕ್ಷವಾದ ಘಟನೆ ತಾಲೂಕಿನ ಆಲಗೂಡ ಗ್ರಾಮದ ವ್ಯಾಪ್ತಿಯ ಜಮೀನಿನಲ್ಲಿ ನಡೆದಿದೆ. ಗ್ರಾಮದ ವಿಠ್ಠಲ ಪೂಜಾರಿ ಎನ್ನುವರ ಜಮೀನಿನಲ್ಲಿ ಪ್ರತ್ಯಕ್ಷವಾದ ಹೆಬ್ಟಾವು ಸುಮಾರು 10 ಅಡಿ ಉದ್ದ ವಿದ್ದು, 40 ಕೆಜಿ ತೂಕ ಹೊಂದಿದೆ. ಆಲಗೂಡ ಗ್ರಾಮದ ವಿಠಲ ಪೂಜಾರಿ ಅವರ ಹೊಲದಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದ ಹಂದ್ರಾಳ ಗ್ರಾಮದ ಅಂಬಾದಾಸ ಮೆಕಾಲೆ ಅವರಿಗೆ ಹಾವು ಕಾಣಿಸಿದೆ. ಹೊಲದಲ್ಲಿ ಹುಲ್ಲು ಮೇಯುತ್ತಿದ್ದ ಆಕಳು ಕರು ಇರುವ ಕಡೆಗೆ ಹಾವು ಬರುತ್ತಿರುವುದನ್ನು ಗಮನಿಸಿದ ಅಂಬಾದಾಸ, ಅಕ್ಕಪಕ್ಕದ ಹೊಲಗಳಲ್ಲಿರುವ ರೈತರ ಸಹಾಯದಿಂದ ಹಾವನ್ನು ಸುರಕ್ಷಿತವಾಗಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ನಂತರ ಅದನ್ನು ಅರಣ್ಯ ಇಲಾಖೆಯವರಿಗೆ ಒಪ್ಪಿಸಲಾಗಿದೆ ಎಂದು ವಿಠಲ ಪೂಜಾರಿ ತಿಳಿಸಿದ್ದಾರೆ. ಸುದ್ದಿ ತಿಳಿದ ಮಂಠಾಳ ಠಾಣೆ ಪಿಎಸ್‌ಐ ಅಮೂಲ ಕಾಳೆ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಹಾವನ್ನು ಅರಣ್ಯ ಪ್ರದೇಶದ ಸುರಕ್ಷಿತ ಸ್ಥಳಕ್ಕೆ ಬಿಡಲಾಗಿದೆ ಎಂದು ಆರ್‌ಎಫ್‌ಒ ಅಲಿಯೋದ್ದಿನ್ ತಿಳಿಸಿದ್ದಾರೆ.