ಹಣ ಪೋಲಾಗದಿರಲಿ: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನಾ ಪ್ರಾಧಿಕಾರದಿಂದ 1.25 ಕೋಟಿ ರೂ. ಬಿಡುಗಡೆ ಮಾಡಿ ಕಾಲೇಜಿನಲ್ಲಿ ಆಡಿಟೋರಿಯಂ ನಿರ್ಮಾಣ ಮಾಡಲಾಗಿದೆ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಜಿಎಸ್‌ಟಿಯನ್ನು ಸರ್ಕಾರಕ್ಕೆ ತಾವು ಕಟ್ಟುತ್ತೇವೆ. ಅದರಿಂದ ಅಭಿವೃದ್ಧಿ ಕೆಲಸಗಳು ಮಾಡುತ್ತಾರೆ. ಸಾರ್ವಜನಿಕರ ಒಂದು ರೂಪಾಯಿ ಹಣ ಪೋಲಾಗದಂತೆ ನೋಡಿಕೊಳ್ಳಬೇಕು ಎಂದು ವಿವರಿಸಿದರು. ನೀರು ಮಿತವಾಗಿ ಬಳಸಿ: ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು
ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ರಮೇಶ್ ಮಾತನಾಡಿ, ವಿಶ್ವದಲ್ಲಿ ನೀರನ್ನು ಬಹಳ ನಿಕೃಷ್ಟವಾಗಿ ನೋಡು ತ್ತಿದ್ದೇವೆ. ಆದರೆ, ಮುಂದೊಂದುದಿನ ನೀರಿಗಾಗಿ ಯುದ್ಧ ಮಾಡುವ ಕಾಲ ಬಹಳ ದಿನಗಳಿಲ್ಲ. ಹಿಂದೆ ನೀರು ಸಂಗ್ರಹಿಸುವ ಪರಿಪಾಠ ಇರಲಿಲ್ಲ. ಆದರೆ, ಇತ್ತೀಚಿನ ದಿನಗಳಲ್ಲಿ ಕಾಂಕ್ರೀಟ್ ಕಾಡುಗಳು ಹೆಚ್ಚಾದಂತೆ ಮನೆಯಲ್ಲಿ ನೀರಿನ ತೊಟ್ಟಿಗಳಲ್ಲಿ ನೀರನ್ನು ಸಂಗ್ರಹಿಸುವುದು ಹೆಚ್ಚಾಗಿದೆ. ಪ್ರತಿಯೊಬ್ಬರು ಮಿತವಾಗಿ ನೀರನ್ನು ಬಳಸಬೇಕು ಎಂದು ಹೇಳಿದರು. ವಾರ್ಷಿಕ ಸಾಧನೆ ವಿವರ: ಪ್ರಥಮ ದರ್ಜೆ
ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಚಂದ್ರಶೇಖರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾಲೇಜಿನಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸ್ಮಾರ್ಟ್ ತರಗತಿ ನಡೆಸಲಾಗುತ್ತಿದೆ. ನೀರಿಗೆ ತೊಂದರೆಯಾದ ಸಮಯದಲ್ಲಿ ಶಾಸಕರು ಬೋರ್‌ವೆಲ್ ಕೊರೆಸಿದ್ದರೂ ನೀರಿನ ಪ್ರಮಾಣ ಕಡಿಮೆಯಾದಾಗ ರೀಬೋರ್‌ವೆಲ್ ಮಾಡಿಸಲಾಗಿದೆ. ಕಾಲೇಜಿನ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ಕ್ಯಾಂಟಿನ್ ಮಾಡಿ, ಕಡಿಮೆ ದರದಲ್ಲಿ ಊಟ ಸಿಗುವಂತೆ ಮಾಡಲಾಗಿದೆ. ಆಡಿಟೋರಿಯಂ, ಸೆಮಿನಾರ್ ಹಾಲ್ ಅವಶ್ಯಕತೆ ಇದೆ. ಕಳೆದ ಸಾಲಿನ ಫಲಿತಾಂಶದಲ್ಲಿ ಶೇ.90ಕ್ಕಿಂತಲೂ ಹೆಚ್ಚು ಅಂಕ ವಿದ್ಯಾರ್ಥಿಗಳು ಪಡೆದಿದ್ದಾರೆ ಎಂದು ವಿವರಿಸಿದರು. ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಗೋಪಾಲ್, ಸದಸ್ಯ ಗೋಪಾಲಕೃಷ್ಣ, ತಾಲೂಕು ಸೊಸೈಟಿ ನಿರ್ದೇಶಕ ಡೈರಿ ನಾಗೇಶ್ ಬಾಬು, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಆರ್.ಭರತ್, ಬಿ.ಪಿಳ್ಳರಾಜು, ಜಿ.ಸುನಿಲ್, ಆರ್. ಮುತ್ತುಕುಮಾರ್, ಕ್ರೀಡಾಪಟು ಮಂಜುನಾಥ್,
ಸಾಂಸ್ಕೃತಿಕ ವೇದಿಕೆ ಸಂಚಾಲಕ ಡಾ.ಕೃಷ್ಣಮೂರ್ತಿ, ಕ್ರೀಡಾ, ಎನ್‌ಎಸ್‌ಎಸ್ ಘಟಕ ಸಂಚಾಲಕ ರವಿಚಂದ್ರ, ರೆಡ್‌ಕ್ರಾಸ್ ಸಂಚಾಲಕ ಡಾ.ಸಜ್ಜದ್ ಪಾಷ, ಡಾ.ರವಿಕುಮಾರ್ ಇದ್ದರು.
Advertisement