Advertisement

ಇಶಾ ಪೌಂಡೇಷನ್‌ಗೆ ಇಂದು ರಾಷ್ಟ್ರಪತಿ ಪ್ರವಾಸ; ಬಿಗಿ ಭದ್ರತೆ ನಿಯೋಜನೆ

09:42 PM Feb 17, 2023 | Team Udayavani |

ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಫೆ.18 ಮತ್ತು ಫೆ.19ರಂದು ತಮಿಳುನಾಡು ಪ್ರವಾಸ ಕೈಗೊಳ್ಳಲಿದ್ದಾರೆ.

Advertisement

ವಿಶೇಷವಾಗಿ ಅವರು ಶನಿವಾರ ಕೊಯಮತ್ತೂರಿನಲ್ಲಿ ಈಶ ಫೌಂಡೇಷನ್‌ ಆಯೋಜಿಸಿರುವ ಶಿವರಾತ್ರಿಯ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.

ಫೆ.19ರಂದು ನೀಲಗಿರಿ ಜಿಲ್ಲೆಯಲ್ಲಿ ಇರುವ ವೆಲ್ಲಿಗ್ಟನ್‌ನಲ್ಲಿ ಇರುವ ಡಿಫೆನ್ಸ್‌ ಸರ್ವಿಸಸ್‌ ಸ್ಟಾಫ್ ಕಾಲೇಜಿನ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಈ ಹಿನ್ನೆಲೆಯಲ್ಲಿ ಎರಡೂ ಜಿಲ್ಲೆಗಳಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next