Advertisement
ಭೀಮಾ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆ ಸುರಿಯುತ್ತಿರುವ ಕಾರಣ, ವಿವಿಧ ಜಲಾಶಯ, ಬಾಂದಾರುಗಳಿಂದ ಭಾರಿ ಪ್ರಮಾಣದಲ್ಲಿ ನದಿಗೆ ನೀರು ಹೊರ ಬಿಡಲಾಗಿದೆ. ಪರಿಣಾಮ ಆಲಮೇಲ ತಾಲೂಕಿನ ಬಗಲೂರ ಗ್ರಾಮದ ಸೇತುವೆ ಮುಳುಗಡೆ ಆಗಿದ್ದು, ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಅಲ್ಲದೇ ನದಿಯಲ್ಲಿ ಪ್ರವಾಹ ಗಂಭೀರವಾಗಿರುವ ಕಾರಣ ಸಾರ್ವಜನಿಕರು ನದಿ ತೀರಕ್ಕೆ ಹೋಗದಂತೆ ತಾಲೂಕು ಆಡಳಿತ ಕಟ್ಟುನಿಟ್ಟಿನ ಸೂಚನೆ ನೀಡಿದೆ.
Related Articles
Advertisement
ಅಪ್ಸರಾ ಟಾಕೀಸ್ ಸಂಪೂರ್ಣ ಜಲಾವೃತವಾಗಿದ್ದು, ಚಿತ್ರವೀಕ್ಷಣೆಗೆ ಬಂದಿದ್ದ ಪ್ರೇಕ್ಷಕರು ನಿಲುಗಡೆ ಮಾಡಿದ್ದ ವಾಹನಗಳು ಮಳೆ ನೀರಿನಲ್ಲಿ ಮುಳಗಿ ಹೋಗಿದೆ.
ನಗರದ ಬಹುತೇಕ ರಸ್ತೆಗಳಲ್ಲಿ ಭಾರಿ ಮಳೆಗೆ 3-4 ಅಡಿ ನೀರು ಹರಿಯಲು ಆರಂಭಿಸಿ, ನೆಲ ಮಾಳಿಗೆಯಲ್ಲಿದ್ದ ಬಹುತೇಕ ವ್ಯಾಪಾರ ಮಳಿಗೆ ಮಳೆ ನೀರು ನುಗ್ಗಿ ಅಪಾರ ಹಾನಿ ಸಂಭವಿಸಿದೆ.
ಇತ್ತ ನಾಗಠಾಣ ಶಾಸಕ ದೇವಾನಂದ ಚವ್ಹಾಣ ಜೊತೆ ಜಿಲ್ಲಾಧಿಕಾರಿ ಡಾ.ವಿ.ಬಿ.ದಾನಮ್ಮನವರ ಮಳೆಯಿಂದ ಬಾಧಿತ ಶಿಖರಖಾನೆ, ಗಾಂಧಿನಗರ ಮತ್ತು ಕಾವಿ ಪ್ಲಾಟ್ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮನೆಗಳಿಗೆ ಮಳೆ ನೀರು ನುಗ್ಗಿದ ಬಾಧಿತರ ಅಹವಾಲು ಆಲಿಸಿ, ಪರಿಶೀಲಿಸಿದರು.
ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಿಕಿ, ವಿಜಯಪುರ ತಹಶೀಲ್ದಾರ ಸಿದರಾಯ ಭೊಸಗಿ ಇತರರು ಉಪಸ್ಥಿತರಿದ್ದರು.