ಪೇಶಾವರ: ಭಾರೀ ಸಿಡಿಲು, ಗುಡುಗುಗಳಿಗೆ ಸಿಲುಕಿದ ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ 14 ಮಂದಿ ದುರ್ಮರಣ ಕ್ಕೊಳಗಾಗಿದ್ದಾರೆ.
ಶನಿವಾರ ರಾತ್ರಿಯಿಂದ ಭಾನುವಾರ ಮುಂಜಾನೆಯವರೆಗೆ ತೋರ್ಘರ ಎಂಬ ಹಳ್ಳಿಯಲ್ಲಿ ಭಾರೀ ಮಳೆ ಸುರಿದಿದೆ.
ಅದೇ ವೇಳೆ ಭೀಕರವಾಗಿ ಸಿಡಿಲು ಹೊಡೆದಿದೆ. ಆದ್ದರಿಂದ ಮೂರು ಮಣ್ಣಿನ ಮನೆಗಳು ನೆಲಕ್ಕುರುಳಿವೆ. ಇದರಡಿಗೆ ಸಿಕ್ಕಿದ ಮಹಿಳೆಯರು, ಮಕ್ಕಳು ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ:ಜಾತಿ ಗಣತಿ ಕೈ ಬಿಡುವಂತೆ ಒತ್ತಡ ಸರಿಯಲ್ಲ: ಕೆ.ಎಸ್.ಈಶ್ವರಪ್ಪ
ಅವಶೇಷಗಳಡಿ ನರಳುತ್ತ ಬಿದ್ದಿದ್ದ ಇಬ್ಬರನ್ನು ಅಬೋಟಬಾದ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಬಹುತೇಕ ಜಿಲ್ಲೆಗಳು ಪರ್ವತಮಯವಾಗಿವೆ.
ಇಲ್ಲಿ ಭಾರೀ ಮಳೆ, ಪ್ರವಾಹ ಬಂದಾಗ ಭೂಕುಸಿತ ಸಾಮಾನ್ಯ. ಆದ್ದರಿಂದ ಅಲ್ಲಿನ ಹಳ್ಳಿಗಳಲ್ಲಿ ಮನೆಗಳನ್ನು ಅದಕ್ಕೆ ತಕ್ಕಂತೆ ನಿರ್ಮಿಸಲಾಗಿರುತ್ತದೆ.