Advertisement

ಮಂಗಳೂರಿನಲ್ಲಿ ಭಾರೀ ಮಳೆ; ಕೆಲವೆಡೆ ಕೃತಕ ನೆರೆ ಸೃಷ್ಟಿ

10:33 PM Sep 19, 2020 | mahesh |

ಮಹಾನಗರ: ನಗರದಲ್ಲಿ ಶನಿವಾರ ದಿನವಿಡೀ ಉತ್ತಮ ಮಳೆಯಾಗಿದೆ. ಶುಕ್ರವಾರ ತಡರಾತ್ರಿ ಆರಂಭಗೊಂಡ ಮಳೆ ಶನಿವಾರ ಕೂಡ ಮುಂದುವರೆದಿತ್ತು. ಬಿಟ್ಟು ಬಿಡದೆ ಸುರಿದ ಮಳೆಗೆ ನಗರದ ಕೆಲವು ತಗ್ಗು ಪ್ರದೇಶಗಳಲ್ಲಿ ನೀರು ನಿಂತು ಕೃತಕ ನೆರೆ ಸೃಷ್ಟಿಯಾಗಿತ್ತು. ಕೊಟ್ಟಾರ, ಕೊಟ್ಟಾರಚೌಕಿ, ಜಪ್ಪಿನಮೊಗರು, ಪಡೀಲ್‌ ಸಹಿತ ತಗ್ಗು ಪ್ರದೇಶಗಳಲ್ಲಿ ನೀರು ನಿಂತಿತ್ತು.

Advertisement

ಭಾರೀ ಮಳೆಯ ಪರಿಣಾಮ ಶನಿವಾರ ಮಧ್ಯಾಹ್ನ ವೇಳೆ ನಗರದ ಎಂ.ಜಿ. ರಸ್ತೆ, ಪಂಪ್‌ವೆಲ್‌, ನಂತೂರು, ಹಂಪನಕಟ್ಟೆ, ಸ್ಟೇಟ್‌ಬ್ಯಾಂಕ್‌ ಸಹಿತ ಕೆಲವೆಡೆ ವಾಹನ ಸಾಲುಗಟ್ಟಿ ನಿಂತಿದ್ದ ದೃಶ್ಯ ಕಂಡುಬಂತು. ಬಹುತೇಕ ಕಡೆ ಒಳಚರಂಡಿ, ರಸ್ತೆ ಅಗೆಯುವ ಕೆಲಸ ನಡೆಯುತ್ತಿದ್ದು, ಮಳೆಯಿಂದಾಗಿ ಸಾರ್ವಜನಿಕರಿಗೆ ತೊಂದರೆಯಾಯಿತು.

ರಥಬೀದಿ, ಪಿ.ವಿ.ಎಸ್‌. ವೃತ್ತ ಸಹಿತ ಕೆಲವು ಕಡೆಗಳಲ್ಲಿ ಫುಟ್‌ಪಾತ್‌ ತೆರೆದಿ ಡಲಾಗಿದೆ. ಇದರಿಂದ ಮಳೆ ನೀರು ಸರಾಗವಾಗಿ ಹರಿಯಲು ಸಾಧ್ಯವಾಗಲಿಲ್ಲ. ಇನ್ನು, ನಗರದ ಅನೇಕ ಕಡೆಗಳಲ್ಲಿ ಫುಟ್‌ಪಾತ್‌ ವ್ಯವಸ್ಥೆ ಸಮರ್ಪಕವಾಗಿ ಇಲ್ಲದ ಕಾರಣ, ನೀರು ರಸ್ತೆಯಲ್ಲೇ ಹರಿಯಿತು.

ತಗ್ಗು ಪ್ರದೇಶಗಳಿಗೆ ನೀರು
ಹಳೆಯಂಗಡಿ: ಶನಿವಾರ ದಿನಪೂರ್ತಿ ಸುರಿದ ಮಳೆಯಿಂದಾಗಿ ಹಳೆಯಂಗಡಿ, ಪಡುಪಣಂಬೂರಿನ ಕೆಲವೊಂದು ತಗ್ಗು ಪ್ರದೇಶಗಳಲ್ಲಿ ನೀರು ಸಂಗ್ರಹಗೊಂಡು ಕೃತಕ ನೆರೆ ಉಂಟಾಗಿದೆ. ರಸ್ತೆ ಸಂಚಾರವೇ ಬಂದ್‌ ಆದ ಘಟನೆ ಸಂಭವಿಸಿದೆ.

ಪಡುಪಣಂಬೂರು ತೋಕೂರಿನ ಮಾಗಂದಡಿಯ ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗಿ ಕೃತಕ ನೆರೆ ಸೃಷ್ಟಿಯಾಯಿತು. ಕಲ್ಲಾಪುವಿನಿಂದ ತೋಕೂರಿಗೆ ಸಂಚರಿಸುವ ರಸ್ತೆಯ ಮೇಲೆಯೇ ಮಳೆ ನೀರು ಹರಿದಿದ್ದುದರಿಂದ ಸಂಚಾರಕ್ಕೆ ಅಡಚಣೆ ಉಂಟಾಯಿತು.

Advertisement

ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಮೂಲಕ ಹಳೆಯಂಗಡಿ ಲೈಟ್‌ಹೌಸ್‌ಗೆ ತೆರಳುವ ರಸ್ತೆಯಲ್ಲಿಯೂ ನೀರು ಹರಿದು, ಸಂಚಾರವೂ ಸಂಪೂರ್ಣವಾಗಿ ಬಂದ್‌ ಆಗಿತ್ತು.

ಮಳೆ ಪ್ರಮಾಣ
ಕೆಎಸ್‌ಎನ್‌ಡಿಎಂಸಿ ಮಾಹಿತಿಯಂತೆ ಶನಿವಾರ ಬೆಳಗ್ಗೆ 8 ಗಂಟೆಯಿಂದ ಸಂಜೆಯವರೆಗೆ ಅಡ್ಯಾರಿನಲ್ಲಿ 53 ಮಿ.ಮೀ., ಕಂದಾವರ 52, ಮುಚ್ಚಾರು 40, ಪಡುಪೆರಾರ 54, ಕುಪ್ಪೆಪದವು 25.5, ಉಳಾಯಿ ಬೆಟ್ಟು 53, ಚೇಳಾçರು 75, ತಲಪಾಡಿ 25, ಹರೇಕಳ 48, ಕಿನ್ಯಾ 24, ಮೂಡುಬಿದಿರೆ 49, ಹೊಸಬೆಟ್ಟು 30, ಪುತ್ತಿಗೆ 42, ಶಿರ್ತಾಡಿ 35, ಮೂಲ್ಕಿ 43, ಬಳುRಂಜ 24, ಕೆಮ್ರಾಲ್‌ 61, ಕಿನ್ನಿಗೋಳಿ 43, ಮೆನ್ನಬೆಟ್ಟು 56, ಪಡುಪಣಂಬೂರು 49, ಸುರತ್ಕಲ್‌ 80, ಬಜಪೆ 71, ಬಾಳ 76, ಮೂಡುಶೆಡ್ಡೆ 59, ಪೆರ್ಮುದೆ 56, ಎಕ್ಕೂರಿನಲ್ಲಿ 51 ಮಿ.ಮೀ. ಮಳೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next