Advertisement

Heavy Rains ರಾಜ್ಯದ 13 ಜಿಲ್ಲೆಗಳಲ್ಲಿ ಭಾರೀ ಮಳೆ: ಇಬ್ಬರು ಸಾವು

12:11 AM Jun 10, 2024 | Team Udayavani |

ಹುಬ್ಬಳ್ಳಿ/ಬೆಂಗಳೂರು: ಉತ್ತರ ಕರ್ನಾಟಕದ 9 ಜಿಲ್ಲೆಗಳು ಸೇರಿ ರಾಜ್ಯದ 13 ಜಿಲ್ಲೆಗಳಲ್ಲಿ ಮುಂಗಾರು ಮಳೆ ಆರ್ಭಟಿಸಿದ್ದು, ಮಳೆ ಸಂಬಂಧಿ ಅನಾಹುತದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. 8 ನದಿಗಳಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದ್ದು, ಡೋಣಿ ನದಿ ಅಪಾಯದ ಮಟ್ಟ ಮೀರಿವೆ. ಹಲವೆಡೆ ಮನೆ, ಮರಗಳು ಧರೆಗುರುಳಿವೆ. ಅಪಾರ ಪ್ರಮಾಣದ ಹಾನಿಯಾಗಿದೆ.

Advertisement

ಬೆಳಗಾವಿ ತಾಲೂಕಿನ ಬೆಳಕಗುಂದಿ-ಕರ್ಲೆ ರಸ್ತೆಯಲ್ಲಿ ದ್ವಿಚಕ್ರ ವಾಹನದ ಮೇಲೆ ಮರ ಬಿದ್ದು ಸೋಮನಾಥ ಮುಚ್ಚಂಡಿಕರ (20) ಮೃತಪಟ್ಟಿದ್ದು, ಇನ್ನೋರ್ವ ಸವಾರ ಗಾಯಗೊಂಡಿದ್ದಾನೆ. ಮೂಡಲಗಿ ತಾಲೂಕಿನ ಅವರಾದಿ-ನಂದಗಾಂವ್‌ಗೆ ಸಂಪರ್ಕ ಕಲ್ಪಿಸುವ ಸೇತುವೆ ಬಳಿ ಘಟಪ್ರಭಾ ನದಿಯಲ್ಲಿ ಟ್ರ್ಯಾಕ್ಟರ್‌ ಬಿದ್ದು ಓರ್ವ ಕೊಚ್ಚಿ ಹೋಗಿದ್ದು, 9 ಜನರನ್ನು ರಕ್ಷಿಸಲಾಗಿದೆ. ಕೊಚ್ಚಿ ಹೋದ ವ್ಯಕ್ತಿಗಾಗಿ ಶೋಧ ನಡೆದಿದೆ.

ಸೇಡಂ ತಾಲೂಕಿನ ತೊಟ್ನಳ್ಳಿಯಲ್ಲಿ ಭಾರೀ ಮಳೆಗೆ ಗ್ರಾಮದ ಕೆಲವು ಮನೆಗಳಿಗೆ ನೀರು ನುಗ್ಗಿದೆ. ಬಾಗಲಕೋಟೆ ಜಿಲ್ಲೆ ರಬಕವಿ-ಬನಹಟ್ಟಿ ಬಳಿ ಮಹಿಷವಾಡಗಿ ಸೇತುವೆ ಮುಳುಗುವ ಭೀತಿ ಎದುರಾಗಿದೆ. ಬಾಳೆಹೊನ್ನೂರು, ಕುಮಟಾ, ಅಂಕೋಲಾ, ಶಿರಸಿ, ಕಾರವಾರದಲ್ಲಿ ನಿರಂತರ ಮಳೆಯಾಗುತ್ತಿದೆ. ವಿಜಯಪುರ ಜಿಲ್ಲೆ ತಾಳಿಕೋಟಿಯಲ್ಲಿ ಡೋಣಿ ನದಿ ಪ್ರವಾಹದಿಂದ ವಿಜಯಪುರ ರಸ್ತೆಯ ಕೆಳಮಟ್ಟದ ಸೇತುವೆ, ಮೂಕಿಹಾಳ ಮೂಲಕ ತಾಳಿಕೋಟೆ ಸಂಪರ್ಕಿಸುವ ಸೇತುವೆ ಸಂಪೂರ್ಣ ಜಲಾವೃತಗೊಂಡಿವೆ.

 

Advertisement

Udayavani is now on Telegram. Click here to join our channel and stay updated with the latest news.

Next