Advertisement
ಕಾಸರಗೋಡು: ಅಚ್ಚಾಂತುರ್ತಿ ದ್ವೀಪ ನಿವಾಸಿಗಳನ್ನು ದಡಕ್ಕೆ ಸೇರಿಸುವ ಅಚ್ಚಾಂತುರ್ತಿ – ಕೋಟ್ಟಪ್ಪುರಂ ಕಾಲ್ಸೇತುವೆ ಅಪಾಯದ ಭೀತಿಯಲ್ಲಿದೆ. ಅಚ್ಚಾಂತುರ್ತಿ – ಕೋಟ್ಟಪ್ಪುರಂ ಕಾಲ್ಸೇತುವೆ ನಡು ಭಾಗ ಕೆಳಕ್ಕೆ ಕುಸಿದಿದೆ.
ನೂತನ ಸೇತುವೆ ನಿರ್ಮಾಣ ಸಂದರ್ಭದಲ್ಲಿ ಸೇತುವೆ ಕಾಮಗಾರಿಗೆ ತಂದಿದ್ದ ಜಂಕರ್ ನೀರಿನಲ್ಲಿ ಹರಿದು ಹೋಗಿ ಕಾಲ್ಸೇತುವೆಯ ಕಂಬಗಳಿಗೆ ಈ ಹಿಂದೆ ಬಡಿದು ಸೇತುವೆಯ ಒಂದು ಭಾಗ ಪಕ್ಕಕ್ಕೆ ವಾಲಿತ್ತು. ಈ ಹಿನ್ನೆಲೆಯಲ್ಲಿ ಅಂದು ಈ ಕಾಲ್ಸೇತುವೆ ಮುರಿದು ಬೀಳದಂತೆ ತೆಂಗಿನ ಕಂಬವನ್ನು ಜೋಡಿಸಿ ಬಲಪಡಿಸಲಾಗಿತ್ತು. ಆದರೆ ಈ ತೆಂಗಿನ ಕಂಬ ಯಾವುದೇ ಸಂದರ್ಭದಲ್ಲೂ ಜೋಡಣೆ ಬಿಡುವ ಸಾಧ್ಯತೆಯಿದೆ.
Related Articles
Advertisement
ಸ್ಮಾರಕವಾಗಿ ಉಳಿಸಿಕೊಳ್ಳಲು ಆಗ್ರಹ ಕೇರಳ ರಾಜ್ಯದ ಅತ್ಯಂತ ನೀಳದ ಕಾಲ್ಸೇತುವೆಯನ್ನು ಸ್ಮಾರಕವಾಗಿ ಉಳಿಸಿ ಕೊಳ್ಳಬೇಕೆಂದು ಸ್ಥಳೀಯರು ಈ ಹಿಂದೆ ಸಂಬಂಧಪಟ್ಟವರನ್ನು ಆಗ್ರಹಿಸಿದ್ದರು. ಈ ಸೇತುವೆಯಿಂದ ಕೆಲವೇ ದೂರದಲ್ಲಿ ನೂತನ ಸೇತುವೆಯನ್ನು ನಿರ್ಮಿಸಿರುವ ಕಾರಣದಿಂದ ಹಳೆಯ ಸೇತುವೆ ಬಳಕೆ ಕಡಿಮೆಯಾದರೂ, 2000ನೇ ಇಸವಿಯಲ್ಲಿ ಸ್ಥಾಪಿಸಲಾಗಿದ್ದ ರಾಜ್ಯದಲ್ಲೇ ಅತ್ಯಂತ ನೀಳದ ಕಾಲ್ಸೇತುವೆಯನ್ನು ಉಳಿಸಿಕೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದರು. 310 ಮೀಟರ್ ಉದ್ದದ ಕಾಲ್ಸೇತುವೆ ಹೊಸ ಸೇತುವೆ ನಿರ್ಮಾಣಕ್ಕೆ ಮುನ್ನ ಅಚ್ಚಾಂತುರ್ತಿ – ಕೋಟ್ಟಪ್ಪುರಂವನ್ನು ಪರಸ್ಪರ ಸಂಪರ್ಕಿಸುತ್ತಿತ್ತು. ಆ ಹಳೆಯ ನೆನಪು ಮಾಸದಂತೆ ಕಾಲ್ಸೇತುವೆಯನ್ನು ಉಳಿಸಿಕೊಳ್ಳಬೇಕೆಂಬುದು ಸ್ಥಳೀಯರ ಸಂಕಲ್ಪವಾಗಿದೆ.