Advertisement
ದ.ಕ., ಉಡುಪಿ ಜಿಲ್ಲೆಗಳಲ್ಲಿ ಗುರುವಾರ ಉತ್ತಮ ಮಳೆಯಾಗಿದೆ.
Related Articles
ಮಳೆಯಿಂದಾಗಿ ಕಾರ್ಕಳದ ಎಳ್ಳಾರೆ ಗ್ರಾಮದ ಶಾಂತಾ ಬಾಯಿ ಅವರ ಮನೆ ಭಾಗಶಃ ಹಾನಿಯಾಗಿ 50,000 ರೂ. ನಷ್ಟ ಸಂಭವಿಸಿದೆ. ಅದೇ ಗ್ರಾಮದ ಕೃಷ್ಣ ನಾಯಕ ಅವರ ಬೆಳೆ ಹಾನಿಯಾಗಿದ್ದು, 31,000 ರೂ. ನಷ್ಟ ಅಂದಾಜಿಸಲಾಗಿದೆ.
Advertisement
ಆಗುಂಬೆ: 14 ಸೆಂ.ಮೀ. ಮಳೆಗುರುವಾರ ಬೆಳಗ್ಗೆ 8.30ಕ್ಕೆ ಅಂತ್ಯಗೊಂಡ 24 ತಾಸುಗಳ ಅವಧಿಯಲ್ಲಿ ರಾಜ್ಯದ ಉತ್ತರ ಒಳನಾಡಿನಲ್ಲಿ ಮುಂಗಾರು ಬಿರುಸಾಗಿದ್ದರೆ ದಕ್ಷಿಣ ಒಳನಾಡಿನಲ್ಲಿ ಸಕ್ರಿಯವಾಗಿತ್ತು. ಈ ಅವಧಿಯಲ್ಲಿ ರಾಜ್ಯದೆಲ್ಲೆಡೆ ಉತ್ತಮ ಮಳೆಯಾಯಿತು. ಆಗುಂಬೆಯಲ್ಲಿ 14 ಸೆಂ.ಮೀ. ಮಳೆಯಾಗಿದ್ದು, ಇದು ರಾಜ್ಯದ ಅತ್ಯಧಿಕವಾಗಿತ್ತು. ಈ ಅವಧಿಯಲ್ಲಿ ವಿವಿಧೆಡೆ ಸುರಿದ ಮಳೆ ಪ್ರಮಾಣ ಹೀಗಿದೆ (ಸೆಂ.ಮೀ.ಗಳಲ್ಲಿ):
ಕಲಬುರಗಿ 11, ಕಾರ್ಕಳ 10, ಶಿರಾಲಿ, ಉಡುಪಿ 9, ಕುಂದಾಪುರ, ಕೊಲ್ಲೂರು, ಕೋಟ, ಹೊನ್ನಾವರ, ಭಾಗಮಂಡಲ ತಲಾ 8, ಮಾಣಿ, ಪಣಂಬೂರು, ಮಂಗಳೂರು ವಿಮಾನ ನಿಲ್ದಾಣ, ಶೃಂಗೇರಿ, ಮಡಿಕೇರಿ ತಲಾ 7, ಉಪ್ಪಿನಂಗಡಿ, ಬೆಳ್ತಂಗಡಿ, ಮೂಡುಬಿದಿರೆ, ಸಿದ್ದಾಪುರ, ಹೊಸನಗರ, ಮೂರ್ನಾಡು ತಲಾ 6, ಸುಬ್ರಹ್ಮಣ್ಯ, ಪುತ್ತೂರು, ಧರ್ಮಸ್ಥಳ, ಜಯಪುರ ತಲಾ 5, ತಾಳಗುಪ್ಪ, ತಲಾ 4, ಮೂಲ್ಕಿ, ವಿರಾಜಪೇಟೆ, ಸೋಮವಾರಪೇಟೆ ತಲಾ 3, ಹಾರಂಗಿ, ಚಿಂತಾಮಣಿ, ಯಗಟಿ ತಲಾ 2, ಕುಶಾಲನಗರ, ಚಿಕ್ಕಮಗಳೂರು, ಭದ್ರಾವತಿ, ಕಡೂರು ತಲಾ 1. ಶನಿವಾರ ಮುಂಜಾನೆಯ ವರೆಗಿನ 48 ತಾಸುಗಳ ಅವಧಿಯಲ್ಲಿ ಕರಾವಳಿಯ ಬಹುತೇಕ ಎಲ್ಲೆಡೆ, ದಕ್ಷಿಣ ಒಳನಾಡಿನ ಹಲವೆಡೆ ಮತ್ತು ಉತ್ತರ ಒಳನಾಡಿನ ಕೆಲವು ಕಡೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಕೇಂದ್ರ ತಿಳಿಸಿದೆ. ಕರಾವಳಿಯಲ್ಲಿ ಜು.17 ಮತ್ತು 18ರಂದು ಎಲ್ಲೊ, ಜು. 19 ಮತ್ತು 20ರಂದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಸಮುದ್ರ ಪ್ರಕ್ಷುಬ್ಧವಿರಲಿದ್ದು, ಮೀನುಗಾರರು ಸಮುದ್ರಕ್ಕಿಳಿಯಬಾರದು ಎಂದು ಎಚ್ಚರಿಸಿದೆ. ನೆರೆಯ ಕಾಸರಗೋಡು ಜಿಲ್ಲೆಯಲ್ಲೂ ಜು. 16ರಂದು ಎಲ್ಲೋ ಅಲರ್ಟ್ ಘೋಷಿಸಲಾಗಿದೆ.