Advertisement

ಭಾರೀ ಮಳೆ: ಸರ್ಕಾರಿ ಆರೋಗ್ಯ ಕೇಂದ್ರಕ್ಕೆ ನುಗ್ಗಿದ ನೀರು

09:35 PM Oct 23, 2019 | Team Udayavani |

ಕೊಳ್ಳೇಗಾಲ: ಕಳೆದ ಮೂರು ದಿನಗಳಿಂದ ಧಾರಾಕಾರ ಮಹಾಮಳೆಯ ನೀರು ಕಬಿನಿ ನಾಲೆಯ ಮೂಲಕ ಹರಿದು ತಾಲೂಕಿನ ಮಧುವನಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮಲಮಿಶ್ರಿತ ನೀರು ನುಗ್ಗಿದ ಪರಿಣಾಮ ಗ್ರಾಮದ ರೋಗಿಗಳು ಮತ್ತು ವೈದ್ಯರು ಪರದಾಡುವಂತಾಗಿದೆ.

Advertisement

ನಾಲೆಯ ಮಲಮಿಶ್ರಿತ ನೀರು ನುಗ್ಗಿದ ಪರಿಣಾಮ ಆಸ್ಪತ್ರೆ ಆವರಣ ಸಂಪೂರ್ಣ ಗಬ್ಬು ನಾರುತ್ತಿದ್ದು, ಆಸ್ಪತ್ರೆಗೆ ಚಿಕಿತ್ಸೆಗೆಂದು ಬರುವ ರೋಗಿಗಳಿಗೆ ನೀರಿನ ವಾಸನೆಯಿಂದ ಮತ್ತಷ್ಟು ಅನಾರೋಗ್ಯಕ್ಕೆ ತುತ್ತಾಗುವ ಭೀತಿ ಎದುರಾಗಿದೆ.

ನೀರು ಹೊರ ಹಾಕಿದ ಸಿಬ್ಬಂದಿ: ರಾತ್ರಿಯ ವೇಳೆ ಆಸ್ಪತ್ರೆಗೆ ನುಗ್ಗಿದ ಮಲಮಿಶ್ರಿತ ನೀರು ತುಂಬಿಕೊಂಡಿರುವುದನ್ನು ಬೆಳಗ್ಗೆ ಆಸ್ಪತ್ರೆ ಸಿಬ್ಬಂದಿ ಬೀಗ ಬಿಚ್ಚುತ್ತಿದ್ದಂತೆ ನೀರನ್ನು ಕಂಡು ಅಸಹ್ಯಪಟ್ಟು ನಂತರ ಬರುವ ರೋಗಿಗಳಿಗೆ ಅವಕಾಶ ಕಲ್ಪಿಸುವ ಸಲುವಾಗಿ ಆಸ್ಪತ್ರೆಯ ಸಹಾಯಕಿ ನೀರನ್ನು ಹೊರ ಹಾಕುವ ಪ್ರಯತ್ನ ಮಾಡಿದರು.

ಮೂಗು ಹಿಡಿದು ನಿಲ್ಲುವ ಪರಿಸ್ಥಿತಿ: ಕೊಳಚೆ ನೀರನ್ನು ಹೊರ ಚೆಲ್ಲಿದಷ್ಟು ರ್ದುವಾಸನೆಯಿಂದ ಆಸ್ಪತ್ರೆಯ ವೈದ್ಯರು ಸೇರಿದಂತೆ ಆಸ್ಪತ್ರೆಗೆ ಚಿಕಿತ್ಸೆಗೆಂದು ಬಂದ ರೋಗಿಗಳು ಗಬ್ಬುನಾರುವ ವಾಸನೆಯಿಂದ ಮೂಗು ಹಿಡಿದುಕೊಂಡು ಆಸ್ಪತ್ರೆಯ ಹೊರವಲಯದಲ್ಲೇ ನಿಲ್ಲುವ ಸ್ಥಿತಿ ನಿರ್ಮಾಣವಾಗಿತ್ತು.

ಮನವಿ ಮಾಡಿದರೂ ಕ್ರಮ ಕೈಗೊಂಡಿಲ್ಲ: ಸುದ್ದಿಗಾರರೊಂದಿಗೆ ಆಸ್ಪತ್ರೆಯ ಡಾ.ಡಿ.ಸಿದ್ದಪ್ಪಸ್ವಾಮಿ ಮಾತನಾಡಿ, ಪ್ರತಿವರ್ಷ ಮಳೆ ಬಂದ ಸಂದರ್ಭದಲ್ಲಿ ಈ ರೀತಿಯ ಅವ್ಯವಸ್ಥೆ ಕಟ್ಟಿಟ್ಟ ಬುತ್ತಿಯಾಗಿದೆ. ಇದರಿಂದ ಮುಕ್ತಿ ಹೊಂದುವ ಸಲುವಾಗಿ ಆಸ್ಪತ್ರೆಯ ಕೊಠಡಿಯನ್ನು ಬೇರೆಡೆಗೆ ಸ್ಥಳಾಂತರ ಮಾಡಿಸಿಕೊಡುವಂತೆ ತಾಲೂಕು ವೈಧ್ಯಾಧಿಕಾರಿ ಡಾ. ಗೋಪಾಲ್‌ಗೆ ಹಲವಾರು ಬಾರಿ ಮನವಿ ಮಾಡಲಾಗಿದೆ ಆದರೂ ಯಾವುದೇ ಕ್ರಮಕೈಗೊಂಡಿಲ್ಲ ಎಂದರು.

Advertisement

ಆರೋಗ್ಯಾಧಿಕಾರಿಗೆ ಮನವಿ: ಈ ರೀತಿ ಮಳೆಯ ನೀರಿನಿಂದ ರೋಗಿಗಳಿಗೆಂದು ಸರ್ಕಾರದಿಂದ ಬಂದಿರುವ ಔಷಧಿಗಳಿಗೆ ಆಡಚಣೆ ಉಂಟಾಗದಂತೆ ಸುಭದ್ರವಾಗಿ ಸೆಲ್ಪ್ಗಳ ಮೇಲೆ ಇಟ್ಟು ರಕ್ಷಣೆ ಮಾಡಲಾಗಿದೆ. ಆಸ್ಪತ್ರೆಯ ಆರೋಗ್ಯಾಧಿಕಾರಿ ಈಗಾಲಾದರೂ ಸೂಕ್ತ ಕೊಠಡಿಯೊಂದನ್ನು ನೀಡಿ ಗ್ರಾಮಸ್ಥರ ಆರೋಗ್ಯ ನಿವಾರಣೆ ಮಾಡಲು ಸಹಕಾರಿಯಾಗಬೇಕೆಂದು ಮನವಿ ಮಾಡಿದ್ದಾರೆ.

ಶೀಘ್ರ ಆಸ್ಪತ್ರೆ ಸ್ಥಳಾಂತರ: ಮಧುವನಹಳ್ಳಿ ಗ್ರಾಪಂ ಸದಸ್ಯ ಮಹದೇವ ಪ್ರಸಾದ್‌ ಮಾತನಾಡಿ, ಗ್ರಾಪಂ ವತಿಯಿಂದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕೊಠಡಿ ನೀಡಲಾಗಿತ್ತು. ಆಸ್ಪತ್ರೆಗೆ ಕೊಳಚೆ ನೀರು ನುಗ್ಗುವುದನ್ನು ತಪ್ಪಿಸಿಕೊಳ್ಳಬೇಕಾದರೆ ಮತ್ತೂಂದು ಉರ್ದು ಶಾಲೆ ಖಾಲಿ ಇದ್ದು, ಅಲ್ಲಿಗೆ ಸ್ಥಳಾಂತರ ಮಾಡಿಕೊಳ್ಳುವ ಮೂಲಕ ಕೊಳಚೆ ನೀರಿನ ಆವಾಂತರದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತದೆಂದು ಸಲಹೆ ನೀಡಿದ್ಧಾರೆ.

ಆಸ್ಪತ್ರೆಯ ಅವ್ಯವಸ್ಥೆಯನ್ನು ಜನಪ್ರತಿನಿಧಿಗಳು ಮತ್ತು ಆಸ್ಪತ್ರೆಯ ಉನ್ನತ ಅಧಿಕಾರಿಗಳು ಕೊಠಡಿಯ ಅವ್ಯವಸ್ಥೆಯನ್ನು ವೀಕ್ಷಣೆ ಮಾಡಿ ಗ್ರಾಮಸ್ಥರಿಗೆ ಉತ್ತಮ ಆಸ್ಪತ್ರೆ ಮತ್ತು ಗುಣಮಟ್ಟದ ಚಿಕಿತ್ಸೆ ದೊರಕಿಸಿಕೊಡಬೇಕೆಂದು ಗ್ರಾಮಸ್ಥರ ಆಗ್ರಹವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next