Advertisement
ದಕ್ಷಿಣ ಕನ್ನಡ, ಬೆಳಗಾವಿ, ವಿಜಯಪುರ, ಬಾಗಲಕೋಟೆ, ಕೊಪ್ಪಳ, ಕಲಬುರಗಿ, ಯಾದಗಿರಿ, ರಾಯಚೂರು, ಶಿವಮೊಗ್ಗ, ಹಾಸನ, ಬಳ್ಳಾರಿ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳ ಕೆಲವು ಕಡೆ ಭಾರಿ ಮಳೆಯಾಗುವ ಸಾಧ್ಯತೆಗಳಿವೆ. ಜೂ.7ರ ವರೆಗೆ ಹಳದಿ ಅಲರ್ಟ್ ಘೋಷಿಸಲಾಗಿದೆ.
ಮಂಗಳೂರು/ಉಡುಪಿ: ಕರಾವಳಿ ಭಾಗದಲ್ಲಿ ಮುಂದಿನ ದಿನಗಳಲ್ಲಿ ಮುಂಗಾರು ಬಿರುಸು ಪಡೆಯುವ ಸಾಧ್ಯತೆ ಇದ್ದು, ಜೂ. 6ರಿಂದ 8ರ ವರೆಗೆ ಎಲ್ಲೋ ಅಲರ್ಟ್ ಮತ್ತು ಜೂ. 9ರಂದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಈ ವೇಳೆ ಉತ್ತಮ ಗಾಳಿ-ಮಳೆಯಾಗುವ ನಿರೀಕ್ಷೆ ಇದೆ.
Related Articles
Advertisement
ಸಿಡಿಲು ಬಡಿದು ಹಸು ಸಾವುಉಡುಪಿ ಜಿಲ್ಲೆಯಲ್ಲಿ ಬುಧವಾರ ಇಡೀ ದಿನ ಬಿಸಿಲು-ಮೋಡ ಕವಿದ ವಾತಾವರಣ ನಡುವೆ ಹನಿಹನಿ ಮಳೆಯಾಗಿದೆ. ಸಂಜೆ ಅನಂತರ ರಾತ್ರಿವರೆಗೂ ಉಡುಪಿ, ಮಣಿಪಾಲ, ಮಲ್ಪೆ ಭಾಗದಲ್ಲಿ ಬಿಟ್ಟುಬಿಟ್ಟು ಕೆಲಕಾಲ ಧಾರಾಕಾರ ಮಳೆ ಸುರಿದಿದೆ. ಬ್ರಹ್ಮಾವರ, ಹೆಬ್ರಿ ಪರಿಸರದಲ್ಲಿಯೂ ಉತ್ತಮ ಗುಡುಗು ಸಹಿತ ಉತ್ತಮ ಮಳೆಯಾಗಿದೆ. ಜೂ. 4ರಂದು ಸಿಡಿಲು ಬಡಿದು ಕಾರ್ಕಳ ತಾಲೂಕಿನ ಶಿರ್ಲಾಲು ಗ್ರಾಮದ ಉಷಾ ದೇವಾಡಿಗ ಅವರ ಹಸು ಮೃತಪಟ್ಟಿದೆ.