Advertisement
ಘಟ್ಟ ಪ್ರದೇಶದಲ್ಲಿ ಸುರಿದ ಭಾರೀ ಮಳೆಯಿಂದಾಗಿ ನೀರು ಏರಿಕೆ ಯಾಗಿದೆ. ನೀರಿನ ಮಟ್ಟ 2019ರಲ್ಲಿ ಬಂದ ಪ್ರವಾಹವನ್ನು ಮೀರಿಸುವಂ ತಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ. ಆದರೆ ನೇತ್ರಾವತಿ ಉಗಮ ಸ್ಥಳ ದಿಂದ ನೀರು ದೊಡ್ಡ ಪ್ರಮಾಣದಲ್ಲಿ ಬಾರದ ಕಾರಣ ಹೆಚ್ಚಿನ ಅನಾಹುತ ಆಗಿಲ್ಲ.
Related Articles
Advertisement
ಉಡುಪಿಯಲ್ಲಿ ಉಡುಪಿ: ಜಿಲ್ಲೆಯ ವಿವಿಧೆಡೆ ಸೋಮವಾರ ಉತ್ತಮ ಮಳೆಯಾಗಿದೆ. ಬೆಳಗ್ಗಿನಿಂದಲೇ ಬಿಸಲು-ಮೋಡ ಕವಿದ ವಾತಾವರಣ ಇದ್ದು, ಮಧ್ಯಾಹ್ನ ಅನಂತರ ಪದೇಪದೆ ಮಳೆ ಸುರಿದಿದೆ. ಬೈಂದೂರು, ಕುಂದಾಪುರ, ಅಮಾಸೆಬೈಲು, ಬ್ರಹ್ಮಾವರ, ಹೆಬ್ರಿ, ಕಾರ್ಕಳ, ಪಡುಬಿದ್ರಿ, ಉಡುಪಿ, ಮಣಿಪಾಲ, ಮಲ್ಪೆ ಸುತ್ತಮುತ್ತ ಸಾಧಾರಣ ಮಳೆಯಾಗಿದೆ. ರವಿವಾರ ತಡರಾತ್ರಿಯೂ ಹಲವೆಡೆ ಕೆಲಕಾಲ ಮಳೆಯಾಗಿದೆ. ದಕ್ಷಿಣ ಕನ್ನಡದಲ್ಲಿ ಬಿಸಿಲು, ಮಳೆ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರ ಹಗಲು ವೇಳೆಯಲ್ಲಿ ಬಿಸಿಲ ವಾತಾವರಣವಿತ್ತು. ಸಂಜೆಯಾಗುತ್ತಿದ್ದಂತೆ ಗ್ರಾಮಾಂತರ ಪ್ರದೇಶಗಳು ಸಹಿತ ವಿವಿಧೆಡೆ ಮಳೆ ಮಳೆಯಾಗಿದೆ. ಕೆಲವು ದಿನಗಳಿಂದ ವಾತಾವರಣ ಯಥಾಸ್ಥಿತಿಯಿದ್ದು, ಕ್ಷೀಣವಾಗಿರುವ ಮುಂಗಾರು ಮಳೆ ಬಿರುಸು ಪಡೆದಿಲ್ಲ. ಈ ವಾರಾಂತ್ಯದ ವರೆಗೂ ಮಳೆ ಬಿರುಸಾಗುವ ಸಾಧ್ಯತೆ ಇಲ್ಲ. ಸದ್ಯದ ಮುನ್ಸೂಚನೆಯಂತೆ ಮಂಗಳವಾರಕ್ಕೆ ಕರಾವಳಿಗೆ ಎಲ್ಲೋ ಅಲರ್ಟ್ ಇದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳ ಒಂದೆರಡು ಸ್ಥಳಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದ್ದು, ಬುಧವಾರದಿಂದ ಯಾವುದೇ ಅಲರ್ಟ್ ಇಲ್ಲ. ವ್ಯಾಪಕ ಮಳೆಯ ಸಾಧ್ಯತೆ ಸದ್ಯಕ್ಕಿಲ್ಲ. ಮಂಗಳೂರಿನಲ್ಲಿ ದಿನದ ತಾಪಮಾನ ಗರಿಷ್ಠ 30.8 ಡಿ.ಸೆ. ದಾಖಲಾಗಿದ್ದು, ಕನಿಷ್ಠ 25.1 ಡಿ.ಸೆ.ದಾಖಲಾಗಿದೆ. ಬಿಸಿಲ ಝಳ ಹೆಚ್ಚಾಗುತ್ತಿದ್ದು, ಕೆಲವೊಮ್ಮೆ ಆಕಾಶದಲ್ಲಿ ಮೋಡವೂ ಕಾಣಿಸುವುದರಿಂದ ಉರಿ ಬಿಸಿಲಿನ ಅನುಭವವಾಗುತ್ತಿದ್ದು, ಬೆವರುವಿಕೆಯೂ ಹೆಚ್ಚಾಗಿದೆ.