Advertisement
ಪಶ್ಚಿಮ ಗೋದಾವರಿ ಜಿಲ್ಲೆಯ 55 ಗ್ರಾಮಗಳು ಮತ್ತು ಪೂರ್ವ ಗೋದಾವರಿ ಜಿಲ್ಲೆಯ 100ರಷ್ಟು ಗ್ರಾಮಗಳು ಮುಳುಗಡೆಯಾಗಿವೆ. ಈ ಎಲ್ಲ ಗ್ರಾಮಗಳ ವಿದ್ಯುತ್ ಸಂಪರ್ಕವೂ ಕಡಿತಗೊಂಡಿವೆ. ಪ್ರವಾಹಪೀಡಿತ ಗ್ರಾಮಗಳಿಂದ 8 ಸಾವಿರಕ್ಕೂ ಅಧಿಕ ಮಂದಿಯನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸ ಲಾಗಿದೆ. ಗೋದಾವರಿ ನದಿಯ ಉಪನದಿಗಳಾದ ಗೌತಮಿ, ವಸಿಷ್ಠ ಮತ್ತು ವೈನತೇಯ ಕೂಡ ಉಕ್ಕಿ ಹರಿಯುತ್ತಿವೆ. ಆಂಧ್ರ ಮುಖ್ಯಮಂತ್ರಿ ಜಗನ್‌ಮೋಹನ್ ರೆಡ್ಡಿ ಅವರು ಸೋಮವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ಸಮರೋಪಾದಿಯಲ್ಲಿ ಪರಿಹಾರ ಹಾಗೂ ರಕ್ಷಣಾ ಕಾರ್ಯ ಕೈಗೊಳ್ಳುವಂತೆ ಸೂಚಿಸಿದ್ದಾರೆ.
ಪ್ರವಾಹದ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಬರೋಬ್ಬರಿ 12 ಗಂಟೆಗಳ ಕಾಲ ಮರವೊಂದನ್ನು ಹಿಡಿದುಕೊಂಡು ರಕ್ಷಣೆಗಾಗಿ ಕಾಯುತ್ತಿದ್ದ 43 ವರ್ಷದ ವ್ಯಕ್ತಿಯನ್ನು ಕೊನೆಗೂ ವಾಯುಪಡೆಯ ಹೆಲಿಕಾಪ್ಟರ್ ಸಹಾಯದಿಂದ ರಕ್ಷಿಸಲಾಗಿದೆ‡.ಛತ್ತೀಸ್‌ಗಡದ ಬಿಲಾಸ್ಪುರ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ಖುಟಾಘಾಟ್ ಅಣೆಕಟ್ಟಿನ ಸಮೀಪದ ಒಡ್ಡುವಿಗೆ ಭಾನುವಾರ ಜಿತೇಂದ್ರ ಕಶ್ಯಪ್ ಧುಮುಕಿದ್ದರು. ಆದರೆ, ಆ ಸಮಯದಲ್ಲಿ ನೀರಿನ ಹರಿವಿನ ತೀವ್ರತೆ ಅಧಿಕವಾಗಿದ್ದ ಕಾರಣ, ಅವರು ಕೊಚ್ಚಿಕೊಂಡು ಹೋಗಿದ್ದರು. ಆದರೆ, ಅದೃಷ್ಟವಶಾತ್ ಒಂದು ಮರ ಹಾಗೂ ಬಂಡೆ ಅವರಿಗೆ ಜೀವದಾನ ನೀಡಿತ್ತು. ಕಶ್ಯಪ್ ಸತತ 12 ಗಂಟೆಗಳ ಕಾಲ ಮರವನ್ನು ಗಟ್ಟಿಯಾಗಿ ಹಿಡಿದುಕೊಂಡೇ ನಿಂತಿದ್ದರು. ಅವರ ರಕ್ಷಣೆಗೆ ರಾಜ್ಯ ವಿಪತ್ತು ನಿರ್ವಹಣಾ ತಂಡ ಪ್ರಯತ್ನಿಸಿತಾದರೂ, ನೀರಿನ ಭಾರೀ ಹರಿವು ಹಾಗೂ ಪ್ರತಿಕೂಲ ಹವಾಮಾನ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಯಿತು. ಕೊನೆಗೆ ಭಾರತೀಯ ವಾಯುಪಡೆಯ ಸಹಾಯ ಕೋರಲಾಯಿತು. ಅದರಂತೆ, ಸೋಮವಾರ ಬೆಳಗ್ಗೆ 5.49ಕ್ಕೆ ರಾಯು³ರದಿಂದ ಟೇಕ್ ಆಫ್ ಆದ ಎಂಐ-17 ಹೆಲಿಕಾಪ್ಟರ್, 6.37ರ ವೇಳೆಗೆ ಕಶ್ಯಪ್‌ರನ್ನು ಏರ್‌ಲಿಫ್ಟ್ ಮಾಡಿತು. 20 ನಿಮಿಷಗಳ ಕಾಲ ಈ ಕಾರ್ಯಾ ಚರಣೆ ನಡೆಯಿತು.
Related Articles
ಪ್ರವಾಹಪೀಡಿತ ಪ್ರದೇಶಗಳಲ್ಲಿ ನಿರ್ಮಿಸಲಾಗಿರುವ ಪರಿಹಾರ ಶಿಬಿರಗಳಲ್ಲಿ ಕೊರೊನಾ ಮಾರ್ಗಸೂಚಿ ಪಾಲಿಸುವಂತೆ ಸಿಎಂ ಯೋಗಿ ಆದಿತ್ಯನಾಥ್ ಸೂಚಿಸಿದ್ದಾರೆ. ಸಾಮಾಜಿಕ ಅಂತರ ಕಾಯ್ದು ಕೊಳ್ಳುವಿಕೆ, ಮಾಸ್ಕ್ ಧರಿಸುವಿಕೆ ಸೇರಿದಂತೆ ಎಲ್ಲ ಕ್ರಮಗಳೂ ಪಾಲನೆಯಾಗುವಂತೆ ನೋಡಿಕೊಳ್ಳಿ. ಜ್ವರ, ತಲೆನೋವು ಮತ್ತು ನೆಗಡಿ ಇರುವವರು ಪ್ರತ್ಯೇಕವಾಗಿರಿಸಿ, ಅವರಿಗೆ ಕೊರೊನಾ ಪರೀಕ್ಷೆ ನಡೆಸಿಎಂದು ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ. ಪರಿಹಾರ ಶಿಬಿರಗಳ ಸುತ್ತಲೂ ಸೂಕ್ತ ದೀಪದ ವ್ಯವಸ್ಥೆ ಹಾಗೂ ನೈರ್ಮಲ್ಯ ಕಾರ್ಯಗಳನ್ನು ಕೈಗೊಳ್ಳುವ ಮೂಲಕ, ಹಾವು ಕಚ್ಚುವಂಥ ಘಟನೆ ಗಳನ್ನು ತಡೆಯುವಂತೆಯೂ ಸೂಚಿಸಿದ್ದಾರೆ.
Advertisement
15 ಜಿಲ್ಲೆಗಳು ಜಲಾವೃತಉತ್ತರಪ್ರದೇಶದಲ್ಲಿ ಮಳೆ ಮುಂದುವರಿದಿದ್ದು, 15 ಜಿಲ್ಲೆಗಳು ಮುಳುಗಡೆಯಾಗಿವೆ. ಶಾರದಾ ನದಿ, ಸರಯೂ, ಘಾಘ್ರಾ, ತುರ್ತಿಪಾರ್ ನದಿಗಳು ಅಪಾಯದ ಮಟ್ಟ ಮೀರಿ ಹರಿ ಯುತ್ತಿವೆ. 15 ಜಿಲ್ಲೆಗಳ 788 ಗ್ರಾಮಗಳು ಜಲಾವೃತವಾಗಿದ್ದು, ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಮತ್ತು ಪಿಎಸಿಯ 22 ತಂಡಗಳನ್ನು ಈ ಜಿಲ್ಲೆಗಳಲ್ಲಿ ನಿಯೋಜಿಸಲಾಗಿದೆ. 1,046 ದೋಣಿಗಳನ್ನೂ ರಕ್ಷಣಾ ಕಾರ್ಯಾ ಚರಣೆಗೆಂದು ನಿಯೋಜಿಸಲಾಗಿದೆ ಎಂದು ಪರಿಹಾರ ಆಯುಕ್ತ ಸಂಜಯ್ ಗೋಯಲ್ ಹೇಳಿದ್ದಾರೆ.