ಹೊಸದಿಲ್ಲಿ: ಬಿಸಿಲಿನ ಧಗೆಯಿಂದ ಬೇಯುತ್ತಿದ್ದ ರಾಷ್ಟ್ರ ರಾಜಧಾನಿ ಹೊಸದಿಲ್ಲಿಗೆ ಸೋಮವಾರ ವರುಣ ಕೃಪೆ ತೋರಿದ್ದಾನೆ.
ದಿಲ್ಲಿ ಮತ್ತು ಸುತ್ತಮುತ್ತ ಧಾರಾಕಾರ ಮಳೆಯಾಗಿದೆ. ಅಲ್ಲದೆ ಗರಿಷ್ಠ ತಾಪಮಾನ 26.1 ಡಿಗ್ರಿ ಸೆಲಿÏಯಸ್ ದಾಖಲಾಗಿದೆ. ಇದು ಈ ವರ್ಷದ ಬೇಸಗೆಯಲ್ಲಿ ದಾಖಲಾದ ಸರಾಸರಿ ತಾಪಮಾನಕ್ಕಿಂತ 13 ಡಿಗ್ರಿ ಸೆಲಿÏಯಸ್ ಕಡಿಮೆ.
ಇನ್ನೊಂದೆಡೆ ಇದು ಕಳೆದ 13 ವರ್ಷಗಳಲ್ಲಿ ಮೇ ತಿಂಗಳಲ್ಲಿ ದಾಖಲಾದ ಎರಡನೇ ತಂಪಾದ ದಿನವಾಗಿದೆ.
ಇದೇ ವಾತಾವರಣ ಇನ್ನೂ ಎರಡು-ಮೂರು ದಿನಗಳು ಮುಂದುವರಿಯಲಿದೆ. ದೆಹಲಿಯಲ್ಲಿ ಸೋಮವಾರ 14.8 ಮಿಮೀ ಮಳೆ ದಾಖಲಾಗಿದೆ. ಅಲ್ಲದೆ ಕನಿಷ್ಠ ತಾಪಮಾನ 19.6 ಡಿಗ್ರಿ ಸೆಲಿÏಯಸ್ ದಾಖಲಾಗಿದೆ. ಇದು ಸಾಮಾನ್ಯ ತಾಪಮಾನಕ್ಕಿಂತ 5 ಡಿಗ್ರಿ ಸೆಲಿÏಯಸ್ ಕಡಿಮೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಇದೇ ರೀತಿ ಸೋಮವಾರ ಹೈದರಾಬಾದ್ ಮತ್ತು ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಮಳೆಯಾಗಿದೆ.
ನಾಗರಿಕರು ಮಳೆಯಿಂದ ತಂಪಿನ ಅನುಭವ ಪಡೆದರು. ಆದರೆ ಕೆಲವು ಭಾಗಗಳಲ್ಲಿ ರಸ್ತೆಯಲ್ಲಿ ನೀರು ನಿಂತಿದ್ದರಿಂದ ವಾಹನ ಸವಾರರು ಸಂಕಷ್ಟ ಅನುಭವಿಸಿದರು.