ಉಡುಪಿ: ಜಿಲ್ಲೆಯಲ್ಲಿ ಬುಧವಾರ ಬೆಳಗ್ಗಿನಿಂದ ಭಾರೀ ಮಳೆಯಾಗುತ್ತಿದ್ದು, ರಾತ್ರಿ ಸುರಿದ ಭರ್ಜರಿ ಮಳೆ ಹಲವು ಅವಾಂತರಗಳನ್ನು ಸೃಷ್ಟಿಸಿದೆ. ಬಲವಾದ ಗಾಳಿ ಸಹಿತ ಸುರಿದ ಮಳೆಗೆ,ಮಣಿಪಾಲದ ಪ್ರಮುಖ ರಸ್ತೆಯಲ್ಲಿ ಮರಗಳು , ವಿದ್ಯುತ್ ಕಂಬಗಳು ಧರಾಶಾಹಿಯಾಗಿವೆ.
ಹಲವೆಡೆ ಮಳೆಯಿಂದಾಗಿ ರಸ್ತೆಗಳಲ್ಲಿ ನೀರು ತುಂಬಿಕೊಂಡಿದ್ದು ವಾಹನ ಸವಾರರು ಪರದಾಡಬೇಕಾಗಿದೆ.
ಉಡುಪಿಯಲ್ಲಿ ಭರ್ಜರಿ ಮಳೆ ಸುರಿದ ಕಾರಣ ಕೃಷ್ಣ ಮಠ ಮತ್ತು ನೂರಾನಿ ಮಸೀದಿ ಒಳಗೆ ನೀರು ನುಗ್ಗಿದೆ.
ನೀರಿಲ್ಲದೆ ಕಂಗೆಟ್ಟಿದ್ದ ಉಡುಪಿ ಜಿಲ್ಲೆಯ ಜನತೆಯಲ್ಲಿ ಭರ್ಜರಿ ಮಳೆ ಹರ್ಷ ತಂದಿದ್ದು, ಬಾವಿಗಳಲ್ಲಿ, ಕೆರೆ ಕಟ್ಟೆಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ.
ಮಂಗಳೂರು ನಗರದಲ್ಲೂ ಗುರುವಾರ ಬೆಳಗ್ಗೆ ಭರ್ಜರಿ ಮಳೆಯಾಗುತ್ತಿದ್ದು ರಸ್ತೆಗಳಲ್ಲಿ ನೀರು ತುಂಬಿಕೊಂಡಿದೆ.
ಕರಾವಳಿ ತೀರ ಪ್ರದೇಶದಲ್ಲಿ ಕಡಳು ಅಬ್ಬರಿಸುತ್ತಿದ್ದು,ಕೆಲವು ಮನೆಗಳು ನೀರು ಪಾಲಾಗಿವೆ. ಕಡಲ ತೀರದ ಜನರು ಆತಂಕಿತರಾಗಿದ್ದಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನೇತ್ರಾವತಿ ಸ್ನಾನ ಘಟ್ಟ ಭರ್ತಿಯಾಗಿದೆ.