ಹೊಸನಗರ: ಶಿವಮೊಗ್ಗ ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಗುತ್ತಿದೆ, ಅದರಲ್ಲೂ ಹೊಸನಗರ ತಾಲೂಕಿನ ನಗರ ಹೋಬಳಿಯಲ್ಲಿ ಕಳೆದೆರಡು ದಿನದಿಂದ ಬಾರೀ ಮಳೆಯಾಗುತ್ತಿದೆ. ಅಲ್ಲದೆ ತೀವ್ರ ಗಾಳಿ ಬೀಸುತ್ತಿದೆ.
ಜೂನ್ ಮತ್ತು ಜುಲೈಯಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದು ಕೋವಿಡ್-19 ಸೋಂಕಿನ ಜೊತೆಜೊತೆಗೆ ಮಳೆ ಇಲ್ಲದೆ ರೈತರು ಆತಂಕಕ್ಕೆ ಒಳಗಾಗಿದ್ದರು.
ಆದರೆ ಆಗಸ್ಟ್ ಮೊದಲ ದಿನದಿಂದಲೇ ಮಳೆಯ ತೀವ್ರತೆ ಹೆಚ್ಚಿದ್ದು ರೈತರನ್ನು ಕೊಂಚ ನಿರಾಳ ಮಾಡಿದೆ. ಆದರೆ ಕಳೆದ ಮಳೆ ಸೃಷ್ಟಿಸಿದ ಅವಾಂತರ ಮರುಕಳಿಸದಿರಲಿ ಎಂಬ ಆಶಯ ಹೊಂದಿದ್ದಾರೆ.
ಸೋಮವಾರ ಬೆಳಿಗ್ಗೆಯಿಂದ ಮಂಗಳವಾರ ಬೆಳಿಗ್ಗೆವರೆಗೆ ನಗರ ಹೋಬಳಿಯಲ್ಲಿ ಸುರಿದ ಮಳೆ ವಿವರ ಇಲ್ಲಿದೆ.
ಮಾಸ್ತಿಕಟ್ಟೆ185 ಮಿಮೀ, ಸಾವೇಹಕ್ಲು ಜಲಾಶಯ 180 ಮಿಮೀ, ಚಕ್ರಾ ಜಲಾಶಯ176 ಮಿಮೀ, ಹುಲಿಕಲ್ 176 ಮಿಮೀ, ಯಡೂರು 172 ಮಿಮೀ, ಮಾಣಿ ಜಲಾಶಯ 170 ಮಿಮೀ.