Advertisement

ಮಳೆಗೆ ನಂದಿ ಗಿರಿಧಾಮದಲ್ಲಿ ಗುಡ್ಡ ಕುಸಿತ

03:20 PM Aug 26, 2021 | Team Udayavani |

ಕೋಲಾರ-ಚಿಕ್ಕಬಳ್ಳಾಪುರ ಅವಳಿ ಜಿಲ್ಲೆಗಳಲ್ಲಿ ಕಳೆದ 2-3 ದಿನಗಳಿಂದ ಭರ್ಜರಿ ಮಳೆಯಾಗುತ್ತಿದೆ. ಮಂಗಳವಾರ ರಾತ್ರಿಬಿದ್ದ ಮಳೆಗೆ ಪ್ರಸಿದ್ಧ ನಂದಿಗಿರಿಧಾಮದಲ್ಲಿ ಗುಡ್ಡ ಕುಸಿತ ಉಂಟಾಗಿದ್ದು ರಸ್ತೆ ಸಂಚಾರಬಂದ್‌ ಆಗಿದೆ. ಹಾಗೆಯೇ ಕೆಲವೆಡೆ ಕೆರೆ-ಕಟ್ಟೆಗಳು ಕೋಡಿಬಿದ್ದಿವೆ. ತೋಟಗಾರಿಕೆ ಬೆಳೆಗಳು ನೆಲಕಚ್ಚಿದ್ದು ರಾಗಿ ಹೊಲಗಳಲ್ಲಿ ಮಳೆ ನೀರು ತುಂಬಿಕೊಂಡಿದೆ.

Advertisement

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ ಬಿದ್ದ ಮಳೆಗೆ ಜಿಲ್ಲೆ ಜನ ಬೆಚ್ಚಿಬಿದ್ದಿದ್ದಾರೆ ಮಳೆ ಆರ್ಭಟಕ್ಕೆ ವಿಶ್ವ ವಿಖ್ಯಾತ ನಂದಿಗಿರಿಧಾಮದಲ್ಲಿ ಭೂ ಕುಸಿತದಿಂದ ರಸ್ತೆ ಸಂಪೂರ್ಣವಾಗಿ ಮುಚ್ಚಿ ಹೋಗಿದ್ದು ಪ್ರವಾಸಿಗರಿಗೆ ಪ್ರವೇಶ ನಿಷೇಧಿಸಲಾಗಿದೆ.

ಕಳೆದ 24 ಗಂಟೆಯಲ್ಲಿ ಜಿಲ್ಲಾದ್ಯಂತ 53 ಮಿ.ಮೀದಾಖಲೆಮಳೆಯಾಗಿದ್ದುಜನಜೀವನ ಅಸ್ತವ್ಯಸ್ತಗೊಂಡು ಅಪಾರ ಬೆಳೆ ನಷ್ಟ ಉಂಟಾಗಿದೆ.

ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ ಸುರಿದ ಭಾರಿ ಮಳೆಗೆ ಅಪಾರ ಪ್ರಮಾಣದಲ್ಲಿ ಆಸ್ತಿಪಾಸ್ತಿ ನಷ್ಟ ಉಂಟಾಗಿದ್ದರಲ್ಲದೆ ವಿಶ್ವ ವಿಖ್ಯಾತ ನಂದಿಬೆಟ್ಟದ ಬ್ರಹ್ಮಗಿರಿಯಲ್ಲಿ ಮಣ್ಣುಗುಡ್ಡ ಕುಸಿದಿದ್ದರಿಂದ ಸುಮಾರು 10 ಅಡಿ ಆಳಕ್ಕೆ ಮುಖ್ಯ ರಸ್ತೆ ಕುಸಿದು ಸಂಪೂರ್ಣವಾಗಿ ಮುಚ್ಚಿಹೋಗಿದೆ. ಈ ಮೂಲಕ ನಂದಿಬೆಟ್ಟದ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿದೆ. ರಸ್ತೆಗೆ ಅಡ್ಡಲಾಗಿ ಬಂಡೆಗಳು ಉರುಳಿ ಬಿದ್ದಿವೆ. ರಸ್ತೆ ಬಂದ್‌ ಆಗಿದ್ದರಿಂದ ನಂದಿಬೆಟ್ಟಕ್ಕೆ ಬಂದಿರುವ ಪ್ರವಾಸಿಗರನ್ನು ಮುನ್ನೆಚ್ಚರಿಕೆ ಕ್ರಮವಾಗಿ ವಾಪಸ್‌ಕಳುಹಿಸಲಾಗುತ್ತಿದೆ. ಸ್ಥಳಕ್ಕೆ ಧಾವಿಸಿರುವ ಅಧಿಕಾರಿಗಳು ಜೆಸಿಬಿ
ಯಂತ್ರಗಳ ಸಹಾಯದಿಂದಮಣ್ಣು ತೆರವುಗೊ ಳಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಈಗಾಗಲೇ ನಂದಿಗಿರಿಧಾಮದಲ್ಲಿ ಮುಂಗಡವಾಗಿ
ಕೊಠಡಿ ಕಾಯ್ದರಿಸಿಕೊಂಡಿರುವ ಪ್ರಯಾಣಿಕರು ಗಿರಿಧಾಮದಲ್ಲಿಯೇ ಉಳಿದುಕೊಳ್ಳುವಂತಾಗಿದೆ. ಅವರನ್ನು ಸುರಕ್ಷಿತವಾಗಿ ಸ್ಥಳಾಂತರಿ
ಸಲು ಜಿಲ್ಲಾಡಳಿತಕ್ರಮಕೈಗೊಂಡಿದೆ.

ಕೆರೆ-ಕುಂಟೆಗಳು ಭರ್ತಿ: ಜಿಲ್ಲೆಯಲ್ಲಿ ಸುರಿದ ಮಳೆಯಿಂದಒಂದು ಕಡೆ ನಂದಿಗಿರಿಧಾಮದಲ್ಲಿ ಭೂ ಕುಸಿತ ಕಂಡು ಬಂದರೆ ಮತ್ತೂಂದಡೆ
ಗ್ರಾಮೀಣ ಪ್ರದೇಶದಲ್ಲಿ ನಿರ್ಮಿಸಿರುವ ಕೆರೆ- ಕುಂಟೆಗಳು ಭರ್ತಿಯಾ ಗಿವೆ. ಶಿಡ್ಲಘಟ್ಟ ತಾಲೂಕಿನ ಬೆಳ್ಳೂಟಿ ಗ್ರಾಮದಲ್ಲಿ ಮಳೆ ಆರ್ಭಟಕ್ಕೆ ರೇಷ್ಮೆ
ಬೆಳೆಗಾರ ಗೋಪಾಲ್‌ ಎಂಬವರ ಮನೆಗೆ ನೀರು ನುಗ್ಗಿ ರೇಷ್ಮೆ ಹುಳುಗಳು ನೀರು ಪಾಲಾಗಿ ಅಪಾರ ನಷ್ಟ ಸಂಭವಿಸಿದೆ.

Advertisement

ಇದನ್ನೂ ಓದಿ:ಕಾರಾಗೃಹಗಳಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳ ವಿರುದ್ದ ಕಠಿಣ ಕ್ರಮ: ಆರಗ ಜ್ಞಾನೇಂದ್ರ

ಜಕ್ಕಲಮಡುಗು ಜಲಾಶಯ ಭರ್ತಿ:
ಚಿಕ್ಕಬಳ್ಳಾಪುರ ನಗರಕ್ಕೆ ನೀರು ಪೂರೈಕೆ ಮಾಡುವ ಜಕ್ಕಲಮಡುಗು ಜಲಾಶಯ ಭರ್ತಿಯಾಗಿದ್ದು ನಾಗರಿಕರಲ್ಲಿ ಸಂತಸ ಮನೆ ಮಾಡಿದೆ. ಕಳೆದ 3 ವರ್ಷಗಳ ಹಿಂದೆ ಬರಿದಾಗಿದ್ದ ಜಲಾಶಯ ಇದೀಗ ತುಂಬಿರುವುದರಿಂದ ನಗರಸಭಾ ಸದಸ್ಯರು ಸ್ಥಳಕ್ಕೆ ಭೇಟಿ ನೀಡಿ ಮೈದುಂಬಿ ಹರಿಯುತ್ತಿರುವ ಜಲಾಶಯಗಳ ಚಿತ್ರ, ವಿಡಿಯೋಗಳನ್ನು ಜಾಲತಾಣಗಳಲ್ಲಿ ಹರಿದುಬಿಟ್ಟಿದ್ದಾರೆ.

ತಗ್ಗು ಪ್ರದೇಶದಲ್ಲಿ ನೀರು: ರಾತ್ರಿ ಸುರಿದ ಮಳೆಯಿಂದ ಚಿಕ್ಕಬಳ್ಳಾಪುರ ನಗರದ ಜನರ ನೆಮ್ಮದಿ ಕಸಿದಿದೆ. ನಗರದ ವಿವಿಧ ವಾರ್ಡ್‌
ಗಳಲ್ಲಿ ಮಳೆ ನೀರು ಸರಾಗವಾಗಿ ಹರಿಯದೆ ಮನೆಗಳಿಗೆ ನುಗ್ಗಿ ಜನ ಜೀವನ ಅಸ್ತವ್ಯಸ್ತಗೊಳಿಸಿತಲ್ಲದೆ ಮನೆಯಲ್ಲಿದ್ದ ಬೆಲೆ ಬಾಳುವ ವಸ್ತು
ಗಳು ಮತ್ತು ಆಹಾರ ಸಾಮಗ್ರಿ ನೀರಿನ ಪಾಲಾಗಿದೆ. ಇನ್ನೂ ಹಲವಡೆ ಮಳೆ ಆರ್ಭಟಕ್ಕೆ ಮನೆಗಳೂ ಕುಸಿದಿರುವ ಕುರಿತು ವರದಿ ಲಭ್ಯವಾ
ಗಿದೆ. ಆದರೆ, ಪ್ರಾಣಹಾನಿ ಸಂಭವಿಸಿಲ್ಲ. ಮಳೆಯಿಂದ ಆಗಿರುವ ಅನಾಹುತಗಳ ಕುರಿತು ವರದಿ ಸಲ್ಲಿಸಲು ಜಿಲ್ಲಾಧಿಕಾರಿಗಳು ಎಲ್ಲಾ ತಹಶೀಲ್ದಾರ್‌, ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ದಾಖಲೆ ಮಳೆ
ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ ದಾಖಲೆ ಪ್ರಮಾಣದಲ್ಲಿ ಮಳೆಯಾಗಿದೆ.ಕಳೆದ 24 ಗಂಟೆಗಳ ಅವಧಿಯಲ್ಲಿ 4 ಮಿ.ಮೀ ಮಳೆ ನಿರೀಕ್ಷೆ ಮಾಡಲಾಗಿತ್ತು. ಆದರೆ, ಸುಮಾರು 53 ಮಿ.ಮೀ. ಮಳೆಯಾಗಿದೆ. ಜಿಲ್ಲೆಯ ಗೌರಿಬಿದನೂರು ತಾಲೂಕಿನಲ್ಲಿ 75 ಮಿ.ಮೀ., ಚಿಕ್ಕಬಳ್ಳಾಪುರ ತಾಲೂಕಿನಲ್ಲಿ 70 ಮಿ.ಮೀ. ಮಳೆಯಾಗಿದೆ. ಜಿಲ್ಲೆಯ ಗೌರಿಬಿದನೂರು ತಾಲೂಕಿನ ತೊಂಡೆಬಾವಿಯಲ್ಲಿ ದಾಖಲೆ 112 ಮಿ.ಮೀ.ಮಳೆಯಾಗಿದೆ. ಮತ್ತೊಂದೆಡೆ ಮಂಚೇನಹಳ್ಳಿಯಲ್ಲಿ 94 ಮಿ.ಮೀ. ಹಾಗೂ ಚಿಕ್ಕಬಳ್ಳಾಪುರ ತಾಲೂಕಿನ ನಂದಿಯಲ್ಲಿ 91 ಮಿ.ಮೀ. ಮಳೆ ಬಿದ್ದಿದೆ

ಗಿರಿಧಾಮದಲ್ಲೇ ಸಿಲುಕಿದ ಪ್ರವಾಸಿಗರು
ಮಂಗಳವಾರ ರಾತ್ರಿ ನಂದಿಬೆಟ್ಟದ ಪರಿಸರದಲ್ಲಿ ಭಾರೀ ಮಳೆಯಾಗಿದ್ದು, ಮೇಲ್ಭಾಗದಿಂದ ಮಣ್ಣುಕೊಚ್ಚಿಕೊಂಡು ಬಂದಿದೆ. ಮಳೆ ನೀರಿನ ಜತೆ ಮಣ್ಣು, ಬೃಹತ್‌ ಬಂಡೆ, ಮರ ಗಿಡಗಳು ರಸ್ತೆಗೆ ಅಡ್ಡಲಾಗಿ ಬಿದ್ದಿವೆ. ಇನ್ನೂ ವಿದ್ಯುತ್‌ಕಂಬಗಳು ಧರೆಗೆ ಉಳಿದಿರುವಕಾರಣ ನಂದಿಗಿರಿಧಾಮದಲ್ಲಿ
ವಿದ್ಯುತ್‌ ಸಂಪರ್ಕ ಕಡಿತಗೊಂಡಿದೆ. ನಂದಿ ಬೆಟ್ಟದ ಚೆಕ್‌ ಪೋಸ್ಟ್‌ನ ಸ್ವಲ್ಪ ದೂರದಲ್ಲೇ ರಸ್ತೆಗೆ ಅಡ್ಡಲಾಗಿ ಮಣ್ಣು ಶೇಖರಣೆಯಾದ್ದ ರಿಂದ ಗುಡ್ಡಕುಸಿದಿದೆ. ಹೀಗಾಗಿ ಮೊದಲೇ ವಾಸ್ತವ್ಯ ಹೂಡಿದ್ದ ಪ್ರವಾಸಿಗರು ಮೇಲ್ಭಾಗದಲ್ಲಿಯೇ ಸಿಲುಕಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next