Advertisement

ಧಾರಾಕಾರ ಮಳೆ; ತಗ್ಗುಪ್ರದೇಶಗಳು ಜಲಾವೃತ, ರಸ್ತೆ-ರೈಲು ಸಂಚಾರ ಅಸ್ತವ್ಯಸ್ತ; Photo Gallery

09:12 PM Aug 05, 2020 | mahesh |
ಸೋಮವಾರ ರಾತ್ರಿಯಿಂದೀಚೆಗೆ ಸುರಿದ ಧಾರಾಕಾರ ಮಳೆಯು ವಾಣಿಜ್ಯ ನಗರಿ ಮುಂಬಯಿಯನ್ನು ನಡುಗಿಸಿದೆ. ರಾತ್ರಿ ಬೆಳಗಾಗು ವಷ್ಟರಲ್ಲಿ ಮುಂಬಯಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಲವು ತಗ್ಗುಪ್ರದೇಶಗಳು ಜಲಾವೃತವಾಗಿದ್ದು, ರಸ್ತೆ-ರೈಲು ಸಂಚಾರ ಅಸ್ತವ್ಯಸ್ತವಾಗಿವೆ. ಕೇವಲ 4 ಗಂಟೆಗಳ ಅವಧಿಯಲ್ಲಿ 200 ಮಿ.ಮೀ.ನಷ್ಟು ಮಳೆಯಾಗಿದ್ದು, 2005ರ ಬಳಿಕ ಇದೇ ಮೊದಲ ಬಾರಿಗೆ ಮುಂಬಯಿನಲ್ಲಿ ಇಷ್ಟೊಂದು ಪ್ರಮಾಣದ ಮಳೆಯಾಗಿದೆ. ಮುಂಬಯಿನ 2 ಕೋಟಿ ನಿವಾಸಿಗಳ ಜೀವನಾಡಿಯಾಗಿರುವ ಲೋಕಲ್‌ ರೈಲುಗಳ ಸಂಚಾರ ಸ್ಥಗಿತಗೊಂಡಿದ್ದು, ತುರ್ತು ಸೇವೆ ಹೊರತುಪಡಿಸಿ ಉಳಿದೆಲ್ಲ ಕಚೇರಿಗಳು ಮುಚ್ಚಿವೆ. ಮುಂಬಯಿ ಹಾಗೂ ಸುತ್ತಮುತ್ತಲಿನ ಹಲವು ಜಿಲ್ಲೆಗಳಲ್ಲಿ ರೆಡ್‌ ಅಲರ್ಟ್‌ ಘೋಷಿಸಲಾಗಿದ್ದು, ಬುಧವಾರವೂ ಭಾರೀ ಮಳೆ ಮುಂದುವರಿ ಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
Advertisement

Udayavani is now on Telegram. Click here to join our channel and stay updated with the latest news.

Next