Advertisement
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆ.7, 8ರಂದು ಭಾರೀ ಮಳೆಯಾಗುತ್ತದೆ ಎಂದು ಹವಾಮಾನ ಇಲಾಖೆ ಈಗಾಗಲೇ ರೆಡ್ ಅಲರ್ಟ್ ಘೋಷಣೆ ಮಾಡಿತ್ತು. ಇದೇ ಕಾರಣಕ್ಕೆ ಜಿಲ್ಲಾಡಳಿತವು ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿತ್ತು.
Related Articles
Advertisement
ಸುರತ್ಕಲ್ ಭಾರೀ ಮಳೆಸುರತ್ಕಲ್: ಬುಧವಾರ ಸಂಜೆಯ ವೇಳೆ ಭಾರೀ ಗಾಳಿ ಬೀಸಿದ ಕಾರಣ ಸಾರ್ವಜನಿಕರು ಬೆಚ್ಚಿದ ಘಟನೆ ನಡೆಯಿತು. ಮರಗಳನ್ನು ಅರ್ಧಕ್ಕೆ ಭಾಗಿಸುವಷ್ಟು ಗಾಳಿ ಬೀಸಿದರೆ, ಪಾದಚಾರಿಗಳು ಗಾಳಿಗೆ ನಡೆಯಲಾರದೆ ಕಟ್ಟಡಗಳಲ್ಲಿ ಆಶ್ರಯ ಪಡೆದರು. ಎರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ಸುರತ್ಕಲ್ ಬೈಕಂಪಾಡಿ ಸಹಿತ ವಿವಿಧೆಡೆ ತಗ್ಗು ಪ್ರದೇಶಗಳು ಮುಳು ಗಡೆಯಾದರೆ, ಮರ, ಮೆಸ್ಕಾಂ ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ. ಸುರತ್ಕಲ್ ಬಳಿ ಮುಧವಾರ ಸಂಜೆ ಬೀಸಿದ ಗಾಳಿಗೆ ಮರವೊಂದು ಮನೆ ಮೇಲೆ ಬಿದ್ದು ಅಪಾರ ಹಾನಿಯಾಗಿದೆ. ಕಳಪೆ ಕಾಮಗಾರಿಯಿಂದ ರಸ್ತೆ ಹಾನಿಗೀಡಾಗಿದ್ದು, ಟೋಲ್ ನೀಡುವುದಿಲ್ಲ ಎಂದು ಸಾರ್ವಜನಿಕರೊಬ್ಬರು ನಿರಾಕರಿಸಿ ಟೋಲ್ ಕೇಂದ್ರದ ಸಿಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಬೈಕಂಪಾಡಿ: ಕೈಗಾರಿಕಾ ಪ್ರಾಂಗಣಕ್ಕೆ ಹಾನಿ
ಬೈಕಂಪಾಡಿ ಕೈಗಾರಿಕಾ ಪ್ರದೇಶ ಮಂಗಳವಾರ ರಾತ್ರಿ ಮುಳುಗಡೆಯಾಯಿತು. ಹದಿನೈದಕ್ಕೂ ಅಧಿಕ ಕೈಗಾರಿಕಾ ಪ್ರಾಂಗಣಗಳಿಗೆ ಹಾನಿಯಾಗಿವೆ. ಬೈಕಂಪಾಡಿ ಚಿತ್ರಾಪುರದಲ್ಲಿ ಕಡಲಬ್ಬರ ಮುಂದುವರಿದಿದ್ದು, ರಸ್ತೆಗೆ ಹಾನಿಯಾಗಿದೆ. ಪಂಜಿಮೊಗರು ಬಳಿ ಮರ ಬಿದ್ದು ವಿದ್ಯುತ್ ತಂತಿಗಳು ತುಂಡಾಗಿವೆ. ಬೈಕಂಪಾಡಿ ಬರಡ್ ರಸ್ಸೆಲ್ ಶಾಲೆಗೆ ಮಳೆ ನೀರು ನುಗ್ಗಿದೆ. ಭಾರೀ ಮಳೆಗೆ ಹೆದ್ದಾರಿ 66 ಹಾನಿಗೊಂಡಿದ್ದು, ಬೃಹತ್ ಹೊಂಡಗಳಾಗಿ ವಾಹನಗಳು ತೆವಳುತ್ತಾ ಸಾಗುತ್ತಿವೆ.