Advertisement
ಕಳೆದೆರಡು ದಿನಗಳಿಂದ ಕುಂದಾಪುರ ತಾಲೂಕಿನಾದ್ಯಂತ ಉತ್ತಮ ಮಳೆಯಾಗು ತ್ತಿದ್ದು, ಗುರುವಾರವೂ ಬೆಳಗ್ಗಿನಿಂದ ನಿರಂತರ ವರ್ಷಧಾರೆಯಾಗುತ್ತಿದೆ. ಪರಿಣಾಮ ಪಡುಕೋಣೆ ಸಮೀಪದ ಇತ್ತೀಚೆಗಷ್ಟೇ ನಾಟಿ ಕಾರ್ಯ ಮುಗಿದ ಗದ್ದೆಗಳು ಜಲಾವೃತಗೊಂಡು, ಕೃಷಿಗೆ ಹಾನಿಯಾಗಿವೆ.
ಮರವಂತೆಯ ರಾಷ್ಟ್ರೀಯ ಹೆದ್ದಾರಿ ಬಳಿಯಿಂದ ಪಡುಕೋಣೆ, ನಾಡಾ ಗುಡ್ಡೆಯಂಗಡಿ, ಆಲೂರು, ಮುಳ್ಳಿಕಟ್ಟೆಗೆ ಸಂಪರ್ಕ ಕಲ್ಪಿಸುವ ರಸ್ತೆಯೂ ಜಲಾವೃತ ಗೊಂಡಿವೆ. ವಾಹನಗಳು ಸಂಚರಿಸಲು ಸಾಧ್ಯವಿಲ್ಲದಷ್ಟು ಪ್ರಮಾಣದಲ್ಲಿ ನೀರು ಹರಿಯುತ್ತಿದೆ. ಕೆಲ ಕಾಲ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ಡಿಸಿ, ಶಾಸಕರಿಗೂ ದೂರು
ಪಡುಕೋಣೆಯ ಗದ್ದೆಯ ಕೃಷಿ ಭೂಮಿ ಜಲಾವೃತಗೊಂಡ ಸಂಬಂಧ ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಹಾಗೂ ಬೈಂದೂರು ಶಾಸಕ ಬಿ.ಎಂ. ಸುಕುಮಾರ ಶೆಟ್ಟರಿಗೆ ದೂರು ನೀಡಲಾಗಿದೆ ಎಂದು ಸಂತ್ರಸ್ತರು “ಉದಯವಾಣಿ’ ಗೆ ತಿಳಿಸಿದ್ದಾರೆ.
Related Articles
ಕೋಟೇಶ್ವರ : ಗೋಪಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ಗುರುವಾರ ಕೂಡಾ ಹಲವೆಡೆ ಮನೆಗಳು ಜಲಾವೃತಗೊಂಡಿದ್ದು ಜನಜೀವನ ಅಸ್ತವ್ಯಸ್ತವಾಗಿದೆ.
ಗ್ರಾ.ಪಂ. ವತಿಯಿಂದ ನೀರಿನ ಹೊರ ಹರಿವಿಗೆ ವ್ಯವಸ್ಥೆ ಮಾಡಲಾಗುತ್ತಿದ್ದು ಕಡಲ ಕಿನಾರೆಯ ಪರಿಸರದಲ್ಲಿನ ನಿವಾಸಿಗಳಿಗೆ ನೆರೆ ಹಾವಳಿಯ ಬಾಧೆಯಾಗಬಾರದೆಂಬ ಉದ್ದೇಶದಿಂದ ಜೆಸಿಬಿ ಬಳಸಿ ಸಮುದ್ರಕ್ಕೆ ನೀರನ್ನು ಹರಿಯಬಿಡಲು ಯೋಜನೆ ರೂಪಿಸಲಾಗಿದೆ. ಕಳೆದ 2 ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕೋಟೇಶ್ವರ, ಗೋಪಾಡಿ, ಬೀಜಾಡಿ, ಕೋಡಿ ವಕ್ವಾಡಿ, ಕಾಳಾವರ ಮುಂತಾದೆಡೆ ಒಳಚರಂಡಿ ಅವ್ಯವಸ್ಥೆಯಿಂದಾಗಿ ಅಲ್ಲಲ್ಲಿ ಕೃತಕ ನೆರೆಯಾಗಿದೆ.
Advertisement
ಮರವಂತೆ ಕುರು, ತ್ರಾಸಿ ಪ್ರದೇಶ ಜಲಾವೃತಉಪ್ಪುಂದ: ಕರಾವಳಿ ಪ್ರದೇಶದಲ್ಲಿ ಕಳೆದೆರಡು ದಿನಗಳಿಂದ ಭಾರೀ ಮಲೆಯಿಂದಾಗಿ ಮರವಂತೆಯ ನದಿ ತೀರ ಪ್ರದೇಶಗಳು ಜಲಾವೃತಗೊಂಡಿವೆ.
ಘಟ್ಟ ಪ್ರದೇಶಗಳಲ್ಲಿ ನಿರಂತರ ಮಳೆಯಾಗುತ್ತಿರುವ ಪರಿಣಾಮ ಸೌಪರ್ಣಿಕ ನದಿಯ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ. ಮರವಂತೆಯ ಕೇಶವ ಬೊಬ್ಬರ್ಯ ದೇವಸ್ಥಾನ ಸಮೀಪ ಪ್ರದೇಶಗಳು ನೆರೆಹಾವಳಿಗೆ ಒಳಗಾಗಿವೆ. ಮರವಂತೆ ಕುರು ಪ್ರದೇಶ ಸುತ್ತಮುತ್ತಲಿನ ರಾಮಚಂದ್ರ ಹೆಬ್ಟಾರ್, ಅಚ್ಚುತ್ ಹೆಬ್ಟಾರ್, ಸುರೇಶ ಹೆಬ್ಟಾರ್, ಗಣಪ್ಪ, ತುಂಗ ಹಾಗೂ ಲಕ್ಷ್ಮಣ ಇವರ ಮನೆಗಳ ಅಂಗಳದವರೆಗೂ ನೀರು ನುಗ್ಗಿದ್ದು, ತೋಟಗಳು ಸಂಪೂರ್ಣ ಮುಳುಗಡೆಯಾಗಿವೆ. ತ್ರಾಸಿ ತೀರದ ನದಿ ಪ್ರದೇಶ, ಸಣ್ಣಕೊಂಬರಿಮನೆ, ಕಲ್ಲಮೆಟ್ಲ ಮನೆಗಳ ತೋಟಗಳು ನೀರಿನಿಂದ ಜಲಾವೃತಗೊಂಡಿವೆ. ನಾವುಂದ ನದಿ ತೀರ ಪ್ರದೇಶ, ಸಾಲ್ಬಡದ ಸುತ್ತಮುತ್ತಲಿನ ಪ್ರದೇಶ, ರಸ್ತೆ ಜಲಾವೃತಗೊಂಡಿದೆ. ಪಡುಕೋಣೆ, ಮೆಕ್ಕೆ, ಚುಟ್ಟಿತಾರ ಬಯಲು ಮುಳುಗಡೆಯಾಗಿವೆ. ಕಾರ್ಕಳ: ಭಾರೀ ಮಳೆ; ಕೆಲವೆಡೆ ಹಾನಿ
ಕಾರ್ಕಳ: ಕಾರ್ಕಳ ತಾಲೂಕಿ ನಾದ್ಯಂತ ಕಳೆದ ಎರಡು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಕೆಲವು ಭಾಗದಲ್ಲಿ ಮನೆ ಹಾಗೂ ಕೃಷಿಗೆ ಹಾನಿ ಉಂಟಾಗಿದೆ.
ಬೇಳಂಜೆ ಗ್ರಾಮದ ಅಪ್ಪು ಶೆಟ್ಟಿ ಅವರ ಮನೆಯ ಆವರಣ ಗೋಡೆ ಕುಸಿದಿದ್ದು, 200 ಅಡಿಕೆ ಸಸಿಗೆ ಹಾನಿಯಾಗಿ 10,000 ರೂ. ನಷ್ಟ ಉಂಟಾಗಿದೆ. ಕೂಡ್ಲುವಿನ ರತ್ನಾ ಅವರ ಹಟ್ಟಿ ಹಾಗೂ ಶೌಚಾಲಯಕ್ಕೆ ಹಾನಿಯಾಗಿ 10,000 ರೂ., ಕುಕ್ಕುಂದೂರು ಗ್ರಾಮದ ಮುತ್ತು ಮೇರ ಅವರ ಮನೆಗೆ ಹಾನಿಯಾಗಿ 10,000 ರೂ. ನಷ್ಟ ಸಂಭವಿಸಿದೆ. ರಾತ್ರಿಯಿಡೀ ಭಾರೀ ಮಳೆ
ಬುಧವಾರ ಸಂಜೆಯಿಂದ ಗುರುವಾರ ಬೆಳಗ್ಗಿನ ವರೆಗೂ ನಿರಂತರ ಭಾರೀ ಮಳೆ ಸುರಿದಿದೆ. ಹೊಸ್ಮಾರು, ಮಾಳ, ಬಜಗೋಳಿ, ಈದು, ಕೆರ್ವಾಸೆ ಭಾಗದಲ್ಲಿ ತಗ್ಗು ಪ್ರದೇಶ ಗಳು ಜಲಾವೃತಗೊಂಡಿದ್ದು, ಕೃಷಿ ಭೂಮಿಗೆ ನೀರು ನುಗ್ಗಿದೆ. ಜತೆಗೆ ಕುದುರೆಮುಖ ತಪ್ಪಲು ಭಾಗದಲ್ಲಿ ಭಾರೀ ಮಳೆಯಾದ ಹಿನ್ನೆಲೆಯಲ್ಲಿ ನದಿ, ತೊರೆಗಳು ತುಂಬಿ ಹರಿಯು ತ್ತಿವೆ. ಮಳೆಯಿಂದಾಗಿ ಗುರವಾರದಂದು ತಾಲೂಕಿನ ಕೆಲವು ಭಾಗಗಳ ಸ್ಥಳೀಯ ಸಮಸ್ಯೆಗಳನ್ನು ಗಮನಿಸಿ ಅವಶ್ಯಕವೆನಿಸಿದ್ದಲ್ಲಿ ಶಾಲೆಗಳಿಗೆ ರಜೆ ನೀಡಲು ಸೂಚಿಸಲಾಗಿತ್ತು.