Advertisement
ಕಂಪ್ಲಿ ತಾಲ್ಲೂಕಿನಲ್ಲಿ ತಡೆ ರಾತ್ರಿ ದಾಖಲೆಯ 8.14.ಸೆಂ.ಮೀ.ನಷ್ಟು ಮಳೆಯಾಗಿದೆ. ದೇವಸಮುದ್ರದಲ್ಲಿ ಮಾರೆಮ್ಮನ ಹಳ್ಳ ತುಂಬಿ ಹರಿಯುತ್ತಿದ್ದರೆ, ಉಡುವಿನ ಹಳ್ಳವು ಭರ್ತಿಯಾಗಿದ್ದು, ಜಮೀನುಗಳು ಜಲಾವೃತಗೊಂಡಿವೆ. ರಾಜ್ಯ ಹೆದ್ದಾರಿ 29ರ ದೇವಲಾಪುರದ ಮಾರೆಮ್ಮ ದೇವಸ್ಥಾನದ ಹತ್ತಿರ ರಸ್ತೆಯನ್ನು ಕೊರೆದುಕೊಂಡು ಬೃಹತ್ ಕಿಂಡಿ ಏರ್ಪಟ್ಟಿದ್ದು ರಸ್ತೆ ಅಪಘಾತಕ್ಕೆ ಬಾಯ್ತೆರೆದಿದ್ದು, ಸದ್ಯ ಈ ರಸ್ತೆಯಲ್ಲಿ ಸಂಚಾರ ಸ್ಥಗಿತಗೊಳಿಸಿ, ಪೊಲೀಸ್ ಕಾವಲು ಹಾಕಲಾಗಿದೆ.
Related Articles
Advertisement
ದೇವಲಾಪುರದ ರಾಜನ ಮಟ್ಟಿಯಲ್ಲಿ ಚರಂಡಿ ನೀರು 20ಕ್ಕೂ ಅಧಿಕ ಮನೆಗಳಿಗೆ ನುಗ್ಗಿದೆ.
ತಾಲ್ಲೂಕಿನಲ್ಲಿ ಮೆಟ್ರಿ- ಚಿನ್ನಾಪುರ, ಜವುಕು ಜೀರಿನೂರು, ಸಕ್ಕರೆ ಕಾರ್ಖಾನೆ ಜವುಕು ಗ್ರಾಮಗಳ ಸಂಪರ್ಕ ರಸ್ತೆಗಳು ಜಲಾವೃತಗೊಂಡಿದ್ದು, ದೇವಸಮುದ್ರ, ರಾಮಸಾಗರ, ದೇವಲಾಪುರ, ಜವುಕು, ಜೀರಿಗನೂರು, ಹಂಪಾದೇವನಹಳ್ಳಿ, ಸುಗ್ಗೇನಹಳ್ಳಿಗಳಲ್ಲಿ ಸುಮಾರು 2009ರ ನಂತರ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ದಾಖಲೆಯ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ.