ಹೊಳೆಹೊನ್ನೂರು: ನಿನ್ನೆ ರಾತ್ರಿ ಸುರಿದ ಮಳೆಯಿಂದಾಗಿ ಸಮೀಪದ ಮಲ್ಲಾಪುರದ ಗುಡ್ಡದ ಮಲ್ಲೇಶ್ವರ ದೇವಾಲಯ ಹತ್ತಿರ ಕೆ.ಕೆ. ರಸ್ತೆಯಲ್ಲಿ ಗುಂಡಿಬಿದ್ದಿದ್ದು, ಶುಕ್ರವಾರ ಬೆಳಿಗ್ಗೆಯಿಂದಲೂ ವಾಹನ ಸಂಚಾರಕ್ಕೆ ತೊಂದರೆಯುಂಟಾಗಿದ್ದು, ಮಧ್ಯಾಹ್ನದವರೆಗೂ ಲೋಕೋಪಯೋಗಿ ಇಲಾಖೆಯ ಸಿಬ್ಬಂದಿಯಾಗಲಿ ಅಥವಾ ಆರಕ್ಷಕ ಠಾಣೆಯ ಸಿಬ್ಬಂದಿಯಾಗಲಿ ಇತ್ತ ಸುಳಿಯದೇ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಸಾರ್ವಜನಿಕರ ಆಕ್ರೋಶ ಹೆಚ್ಚಾದಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಬಂದು ಕೇವಲ ಫೋಟೋ ತಗೊಂಡು ಹೋಗಿದ್ದು ಗ್ರಾಮಸ್ಥರ ಅಸಮಾಧಾನಕ್ಕೆ ಕಾರಣವಾಯಿತು.
ಪೊಲೀಸ್ ಇಲಾಖೆ ಇಲ್ಲಿ ಬಂದು ಬ್ಯಾರಿಕೇಡ್ ವ್ಯವಸ್ಥೆ ಕಲ್ಲಿಸಬೇಕು. ಹಾಗೂ ಲೋಕೋಪಯೋಗಿ ಇಲಾಖೆ ತಕ್ಷಣವೇ ಗುಂಡಿಯನ್ನು ಮುಚ್ಚುವ ಕೆಲಸವನ್ನು ತ್ವರಿತ ಗತಿಯಲ್ಲಿ ನಿರ್ವಹಿಸಬೇಕು. ಇಲ್ಲವಾದಲ್ಲಿ ಸಂಚಾರಕ್ಕೆ ತೊಂದರೆಯಾಗುವುದರ ಜೊತೆಗೆ ಪ್ರಯಾಣಿಕರ ಜೀವಕ್ಕೆ ಕುತ್ತು ಬರುವ ಸಾಧ್ಯತೆ ಹೆಚ್ಚಾಗಿದೆ.
ಬಸ್ ಗಳ ಸಂಚಾರ ವ್ಯತ್ಯಾಯವಾಗಿದ್ದು, ಹನುಮಂತಾಪುರ, ಶ್ರೀನಿವಾಸಪುರ ಹಾಗೂ ಮಲ್ಲಾಪುರ ಗ್ರಾಮಕ್ಕೆ ಬಸ್ ಸಂಚಾರ ಸ್ಥಗಿತಗೊಂಡು ಪ್ರಯಾಣಿಕರು ದೇವಸ್ಥಾನ ರಸ್ತೆವರೆಗೂ ಬಂದು ಅಲ್ಲಿಂದ ನಡೆದು ಕೊಂಡು ತಮ್ಮ ಪ್ರಯಾಣ ಮುಂದುವರೆಸಿದ್ದಾರೆ.
ಇದನ್ನೂ ಓದಿ:100 ರೂ. ಹಣ ಡ್ರಾ ಮಾಡಿದ ಕಾರ್ಮಿಕನಿಗೆ ಬಂದಿದ್ದು 2,700 ಕೋಟಿ ರೂ. ಎಸ್ ಎಮ್ ಎಸ್ !
ಬಸ್ ಹೆಚ್ಚುವರಿಯಾಗಿ ಬೇರೆ ಮಾರ್ಗಗಳಲ್ಲಿ ಸಂಚಾರ ಮಾಡುತ್ತಿವೆ. ರಸ್ತೆಯೂ ಗುಂಡಿ ಬಿದ್ದಿರುವುದರಿಂದ ರಾತ್ರಿ ವೇಳೆಯಲ್ಲಿ ಸಂಚಾರಿಸುವ ವಾಹನಗಳಿಗೆ ಅಪಾಯ ಆಗದಂತೆ ಪೊಲೀಸ್ ಇಲಾಖೆ ತಕ್ಷಣವೇ ಬ್ಯಾರಿಕೆಡ್ ಹಾಕಿ ಆಗಬಹುದಾದ ಅನಾಹುತ ತಪ್ಪಿಸಬೇಕೆಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.