Advertisement
ಬಂದರು ನಗರಿ ಗಂಗೊಳ್ಳಿಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಬುಧ ವಾರವೂ ನಿರಂತರ ಮಳೆಯಾಗಿದೆ. ಗಂಗೊಳ್ಳಿಯ ಪೇಟೆ ಸೇರಿದಂತೆ ಅನೇಕ ಕಡೆ ಗಳಲ್ಲಿ ಮಳೆ ನೀರು ಹರಿದು ಹೋಗಲು ಸರಿಯಾದ ಚರಂಡಿ ವ್ಯವಸ್ಥೆ ಮಾಡದ ಕಾರಣ ಈಗ ಮಳೆ ನೀರೆಲ್ಲ ರಸ್ತೆಯಲ್ಲೇ ಹರಿದು ಹೋಗುತ್ತಿದೆ. ಅದು ಕೂಡ ಅಲ್ಲಲ್ಲಿ ನಿಂತು, ರಸ್ತೆಯೇ ಹೊಳೆಯಂತೆ ಭಾಸವಾಗುತ್ತಿದೆ. ಗಂಗೊಳ್ಳಿ ಪೇಟೆಯ ಮುಖ್ಯ ರಸ್ತೆ, ಮ್ಯಾಂಗನೀಸ್ ರಸ್ತೆಗಳಲ್ಲಿ ಭಾರೀ ಪ್ರಮಾಣದ ನೀರು ನಿಂತು ವಾಹನ ಸವಾರರಿಗೆ ಸಂಚರಿಸಲು, ಪಾದಚಾರಿಗಳಿಗೆ ನಡೆದಾಡಲು ಕಷ್ಟವಾಗುತ್ತಿದೆ.