Advertisement
ಚಿತ್ರದುರ್ಗ: ಕಳೆದ ಮೂರು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಜಿಟಿಜಿಟಿ ಮಳೆಗೆ ಮನೆಗಳ ಗೋಡೆ ಕುಸಿದು ಮೂರು ಜನ ಮೃತಪಟಿರುವ ಪ್ರತ್ಯೇಕ ಘಟನೆಗಳು ನಾಯಕನಹಟ್ಟಿ ಹಾಗೂ ಅಬ್ಬಿನಹೊಳೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿವೆ.
Related Articles
Advertisement
ಇದನ್ನೂ ಓದಿ:ತಿರುಪತಿ ತಿಮ್ಮಪ್ಪನಿಗೆ ವರುಣನ ದಿಗ್ಭಂಧನ,ಕೊಚ್ಚಿಹೋದ ವಾಹನಗಳು
ಬ್ಯಾಡರಹಳ್ಳಿಯಲ್ಲಿ ಗೋಡೆ ಕುಸಿದು ಮಹಿಳೆ ಸಾವು:
ಇನ್ನೂ ಹಿರಿಯೂರು ತಾಲೂಕಿನ ಬ್ಯಾಡರಹಳ್ಳಿಯಲ್ಲಿ ಮನೆಯ ಗೋಡೆ ಕುಸಿದು ತ್ರಿವೇಣಿ(24 ವ) ಎಂಬ ಮಹಿಳೆ ಮೃತಪಟಿದ್ದಾರೆ.
ಬ್ಯಾಡರಹಳ್ಳಿ ಕೃಷ್ಣಮೂರ್ತಿ ಎಂಬುವವರ ಪತ್ನಿ ತ್ರಿವೇಣಿ ಮಲಗಿದ್ದ ವೇಳೆ ಏಕಾಏಕಿ ಗೋಡೆ ಕುಸಿದು ಸಾವಿಗೀಡಾಗಿದ್ದಾರೆ. ಸ್ಥಳಕ್ಕೆ ಅಬ್ಬಿನಹೊಳೆ ಪಿಎಸ್ಐ ಪರಶುರಾಮ ಲಮಾಣಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಇತ್ತೀಚೆಗೆ ಐಮಂಗಲ ಹೋಬಳಿ ಹೋ.ಚಿ.ಬೋರಯ್ಯನಹಟ್ಟಿಯಲ್ಲಿ ಮನೆ ಗೋಡೆ ಕುಸಿದು ಮೂರು ಜನ ಮೃತಪಟ್ಟ ಘಟನೆ ಮಾಸುವ ಮುನ್ನವೇ ಮತ್ತೆ ಮೂರು ಜನ ಗೋಡೆ ಕುಸಿದು ಮೃತರಾಗಿದ್ದು ಜಿಲ್ಲೆಯಲ್ಲಿ ಮಾಳಿಗೆ ಮನೆಗಳಲ್ಲಿ ವಾಸಿಸುವವರಲ್ಲಿ ಆತಂಕ ಮೂಡಿಸಿದೆ.
ಡಂಗೂರ ಸಾರಲು ಡಿಸಿ ಆದೇಶ
ಜಿಲ್ಲೆಯಲ್ಲಿ ಬೀಳುತ್ತಿರುವ ಮಳೆಯಿಂದ ಕೆಲವು ಭಾಗಗಳಲ್ಲಿ ಮನೆ ಕುಸಿದು ಪ್ರಾಣಹಾನಿ ಪ್ರಕರಣಗಳು ಸಂಭವಿಸುತ್ತಿರುವುದರಿಂದ ತಮ್ಮ ತಾಲ್ಲೂಕು ವ್ಯಾಪ್ತಿಗಳಲ್ಲಿ ಗ್ರಾ.ಲೆಕ್ಕಿಗ ಹಾಗೂ ಪಿ.ಡಿ.ಓ. ಗಳ ಮೂಲಕ ಗ್ರಾಮಗಳಲ್ಲಿ ಡಂಗೂರ ಸಾರಿ ಶಿಥಿಲವಾಗಿರುವ ಮನೆಗಳಲ್ಲಿನ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಕೂಡಲೇ ಕ್ರಮ ಕೈಗೊಳ್ಳುವುದು. ಅಗತ್ಯವಿದ್ದಲ್ಲಿ ಕಾಳಜಿ ಕೇಂದ್ರಗಳನ್ನು ಕೂಡಲೇ ತೆರೆಯುವುದು. ಪರಿಸ್ಥಿತಿಯನ್ನು ಕಾಲ ಕಾಲಕ್ಕೆ ಅವಲೋಕಿಸಿ ಸೂಕ್ತ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ತಹಶೀಲ್ದಾರ್ ಗಳಿಗೆ ಸೂಚಿಸಿದ್ದಾರೆ.