Advertisement
ಎರಡನೇ ದಿನ ಜನ ಜಾಗರಣೆ ಕಾರಣವಾಯಿತು. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ 20 ಮಂದಿಯತಂಡ ಹೊಸಕೆರೆಹಳ್ಳಿಗೆ ತೆರಳಿ ರಕ್ಷಣಾ ಕಾರ್ಯ ಕೈಗೊಂಡಿತು. ಇದಕ್ಕೂ ಮುನ್ನ ಸ್ಥಳೀಯ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಮೂವರನ್ನು ರಕ್ಷಿಸಿದರು. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಲಿಲ್ಲ. ಈ ಮಧ್ಯೆ ಸ್ಥಳಕ್ಕೆ ಕಂದಾಯ ಸಚಿವ ಆರ್. ಅಶೋಕ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
Related Articles
Advertisement
ದಕ್ಷಿಣ ಭಾಗದಲ್ಲಿ ವರುಣನ ಆರ್ಭಟ ಜೋರಾಗಿತ್ತು. ರಾಜಕಾಲುವೆ ನೀರು ರಸ್ತೆ ಆವರಿಸಿದ್ದರಿಂದ ಹೊಸಕೆರೆಹಳ್ಳಿಯಲ್ಲಿ ನೂರಾರು ಮನೆಗಳಿಗೆ ನೀರು ನುಗ್ಗಿತು. ಮೈಲಸಂದ್ರ ಕೆರೆ ಉಕ್ಕಿಹರಿದಿದ್ದರಿಂದ ಬೆಂಗಳೂರು-ಮೈಸೂರು ಮುಖ್ಯರಸೆ ¤ ಸಂಚಾರ ಹಲವು ಗಂಟೆ ಕಾಲ ಸ್ಥಗಿತಗೊಂಡಿತ್ತು. ಮೈಲಸಂದ್ರದಿಂದ ಕುಂಬಳಗೋಡುವರೆಗೂ ರಸ್ತೆಗಳು ಜಲಾವೃತಗೊಂಡಿದ್ದವು. ಬಿಎಂಟಿಸಿ ಹಾಗೂ ಕಾಲೇಜು ಸಿಬ್ಬಂದಿಯನ್ನು ಕರೆದೊಯ್ಯುವ ಬಸ್‌ಗಳು, ಕಾರುಗಳು ಸೇರಿದಂತೆ30ಕ್ಕೂ ಅಧಿಕ ವಾಹನಗಳು ಜಲಾವೃತಗೊಂಡು, ಮಾರ್ಗಮಧ್ಯೆಯೇ ಕೆಟ್ಟುನಿಂತವು. ಸ್ಥಳಕ್ಕೆ ಧಾವಿಸಿದ ಪೌರ ರಕ್ಷಣಾ ದಳ ಹಾಗೂ ಅಗ್ನಿಶಾಮಕ ಸಿಬ್ಬಂದಿ, ಬಸ್ ಮತ್ತಿತರ ವಾಹನಗಳ ಚಾಲಕರು, ಸವಾರರನ್ನು ರಕ್ಷಿಸಿದರು. ರಸ್ತೆಗಳಲ್ಲಿ
ಮೂರು ಅಡಿ ನೀರು ನಿಂತಿದ್ದರಿಂದ ವಾಹನಗಳ ಸಂಚಾರ ಕೆಲವೆಡೆ ಸಂಪೂರ್ಣ ಸ್ತಬ್ಧಗೊಂಡಿತ್ತು. ಬಸ್ ಸೇರಿದಂತೆ ವಾಹನಗಳಲ್ಲಿ ನೀರು ನುಗ್ಗಿದ್ದರಿಂದ ಪ್ರಯಾಣಿಕರು ಪರದಾಡಿದರು. ಬನಶಂಕರಿ, ಬಿಇಎಂಎಲ್ ಲೇಔಟ್, ಆರ್.ಆರ್. ನಗರದ ದತ್ತಾತ್ರೇಯ ಲೇಔಟ್, ಮೀನಾಕ್ಷಿ ಕಲ್ಯಾಣ ಮಂಟಪ, ಇಟ್ಟಮಡುಗು ಇತರೆಡೆ ನೀರು ನುಗ್ಗಿತು.
ಎಲ್ಲೆಲ್ಲಿ ಅವಾಂತರ? : ಕೋರಮಂಗಲ 4ನೇ ಬ್ಲಾಕ್, ಸಿಟಿ ಬೆಡ್ ಬಾಸ್ಕ್ರ್ ರಾವ್ ಪಾರ್ಕ್ ಹಾಗೂ ಶ್ರೀಕಂಠೇಶ್ವರ ಪಾರ್ಕ್ ಸುತ್ತಮುತ್ತಲ ರಸ್ತೆಗಳು ಹಾಗೂ ಮನೆಗಳು ಜಲಾವೃತವಾಗಿ ಸವಾರರು ಹಾಗೂ ನಿವಾಸಿಗಳು ಪರಿದಾಡಿದರು. ಬನಶಂಕರಿ 2ನೇ ಹಂತ, ಎಲ್‌ಐಸಿ ಕಾಲೋನಿ 1ನೇ ಕ್ರಾಸ್, ಐಟಿಐ ಲೇಔಟ್, ಸಿಂಡಿಕೇಟ್ ಲೇಔಟ್, ವಿದ್ಯಾಪೀಠ, ಉತ್ತರಹಳ್ಳಿ, ವಿ.ವಿ.ಪುರಂ, ಕೋಣಕುಂಟೆ, ವಿದ್ಯಾಪೀಠ, ಪುಟ್ಟೇನಹಳ್ಳಿ, ಯಲಚೇತನಹಳ್ಳಿ, ಚಿಕ್ಕಕಲ್ಲಸಂದ್ರ, ಜೆ.ಪಿ.ನಗರ, ಕುಮಾರಸ್ವಾಮಿ ಲೇಔಟ್, ಬೆಳ್ಳಂದೂರು, ಮಹದೇವಪುರ, ವಸಂತಪುರ, ಉತ್ತರಹಳ್ಳಿ, ಬೇಗೂರು ನಂದಿಯು ಲೇಔಟ್ ಸೇರಿದಂತೆ ನಗರದ ಹಲವೆಡೆ ರಸ್ತೆಗಳು, ಮನೆಗಳು ಹಾಗೂ ಅಪಾರ್ಟ್‌ಮೆಂಟ್ ಬೇಸ್‌ಮೆಂಟ್‌ಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿತ್ತು.
ಉತ್ಸಾಹಕ್ಕೆ ತಣ್ಣೀರು : “ಕೋವಿಡ್-19′ ಹಾವಳಿಯಿಂದಾಗಿ ಬಹುದಿನಗಳ ನಂತರ ಹಬ್ಬಕ್ಕೆಊರಿಗೆ ಹೊರಟವರ ಉತ್ಸಾಹಕ್ಕೆ ಮಳೆ ಕೆಲಹೊತ್ತು ತಡೆಯೊಡ್ಡಿತು. ಕೆಲಸ ಮುಗಿಸಿ ಹೊರಟವರಿಗೆ ರಸ್ತೆಗಳು ಜಲಾವೃತಗೊಂಡಿದ್ದರಿಂದ ಪರದಾಡುವಂತಾಯಿತು. ತದನಂತರ ಮನೆಗಳಿಗೆ ತೆರಳಿ, ಅಲ್ಲಿಂದ ಮೆಜೆಸ್ಟಿಕ್ ಅಥವಾ ಹತ್ತಿರದ ಬಸ್, ರೈಲು ನಿಲ್ದಾಣ ತಲುಪಲು ಹರಸಾಹಸ ಪಡುವಂತಾಯಿತು.