Advertisement

ಬೆಳ್ತಂಗಡಿ, ಬಂಟ್ವಾಳ: ಧಾರಾಕಾರ ಮಳೆ

02:50 PM Oct 05, 2018 | Team Udayavani |

ಬೆಳ್ತಂಗಡಿ: ಬೆಳ್ತಂಗಡಿ ನಗರ ಸೇರಿದಂತೆ ತಾಲೂಕಿನ ಬಹುತೇಕ ಕಡೆಗಳಲ್ಲಿ ಗುರುವಾರ ಧಾರಾಕಾರ ಮಳೆಯಾಗಿದೆ. ಮಧ್ಯಾಹ್ನ ಆರಂಭಗೊಂಡ ಮಳೆ ಸಂಜೆವರೆಗೂ ಮುಂದುವರಿದಿದ್ದು, ನಗರದಲ್ಲಿ ಸಂಪೂರ್ಣ ಮೋಡದಿಂದ ಆವರಿಸಿ ಕತ್ತಲ ವಾತಾವರಣವಿತ್ತು. ಮಳೆಯ ಜತೆಗೆ ಸಿಡಿಲಿನ ಆರ್ಭಟವೂ ಇತ್ತು. ದುರಸ್ತಿಯ ಹಿನ್ನೆಲೆಯಲ್ಲಿ ವಿದ್ಯುತ್‌ ಕೂಡ ಕಡಿತಗೊಂಡಿದ್ದ ಹಿನ್ನೆಲೆಯಲ್ಲಿ ಮೋಡದ ಪರಿಣಾಮ ಅಂಗಡಿ ಮುಂಗಟ್ಟುಗಳಲ್ಲೂ ಕತ್ತಲೆ ಆವರಿಸಿತ್ತು.

Advertisement

ಬಂಟ್ವಾಳ ಭಾರೀ ಮಳೆ
ಬಂಟ್ವಾಳ ಅ.4: ಗುರುವಾರ ಸಂಜೆ ಗುಡುಗು ಸಹಿತ ಭಾರೀ ಮಳೆಯಾಗಿದ್ದು ಬಿ.ಸಿ.ರೋಡ್‌ನ‌ಲ್ಲಿ ಹಲವು ಅಂಗಡಿಗಳಿಗೆ ನೀರು ನುಗ್ಗಿದೆ. ಬಸ್‌ ನಿಲ್ದಾಣ ಸನಿಹದ ಬಟ್ಟೆ ವ್ಯಾಪಾರ ಅಂಗಡಿ, ಸ್ವೀಟ್‌ ಮಳಿಗೆ, ಚಪ್ಪಲಿ ಅಂಗಡಿ, ದಿನಸಿ ಮಳಿಗೆಯ ಒಳಗೆ ನೀರು ಹರಿದು ಬಂದಿದೆ. ಬಿರುಗಾಳಿ ಮತ್ತು ಬಲವಾಗಿ ಬೀಸಿದ ಮಳೆಯಿಂದ ಅಂಗಡಿಮುಂಗಟ್ಟುಗಳ ಒಳಗೆ ನೀರು ರಾಚಿಕೊಂಡಿತ್ತು.

ಮಳೆ ಆರಂಭ ಸಂದರ್ಭದಲ್ಲಿ ಹೋಗಿದ್ದ ವಿದ್ಯುತ್‌ ಅನಂತರ ಪುನರ್‌ ಸಂಪರ್ಕವಾಗಿಲ್ಲ.
ಲ್ಯಾಂಡ್‌ಲೈನ್‌ ಫೋನ್‌ ಕೂಡಾ ಸಂಪರ್ಕ ರಹಿತವಾಗಿದ್ದು ಮಳೆಯಿಂದ ಒಟ್ಟಾರೆ ಅವಾಂತರಗಳು ಸೃಷ್ಟಿಯಾಗಿದ್ದವು. ವಿವಿಧ ಕಡೆಗಳಲ್ಲಿ ಸಿಡಿಲು ಹೊಡೆದು ಹಾನಿ ಆಗಿರುವ ಬಗ್ಗೆ ವದಂತಿ ಆಗಿತ್ತು ನಿರ್ದಿಷ್ಟವಾಗಿ ಎಲ್ಲಿಂದಲೂ ವರದಿ ಆಗಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next