Advertisement
ಉತ್ತರಾಖಂಡದಲ್ಲಿ ಮನೆಗಳು ಕುಸಿತಡೆಹ್ರಾಡೂನ್: ಉತ್ತರಾಖಂಡದಲ್ಲಿ ಬುಧ ವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಒಂದೇ ಕುಟುಂಬದ ಮೂವರು ಸೇರಿ 12 ಮಂದಿ ಬಲಿಯಾಗಿದ್ದಾರೆ. 284 ಪ್ರಮುಖ ರಸ್ತೆಗಳಿಗೆ ಸಂಪರ್ಕ ಕಡಿತಗೊಂಡಿದೆ. ಹಲವಾರು ಮನೆ ಗಳು ಕುಸಿದಿದ್ದು, ಅನೇಕ ಪ್ರದೇಶಗಳಲ್ಲಿ ಪ್ರವಾಹ ಸ್ಥಿತಿ ನಿರ್ಮಾಣ ವಾಗಿದೆ. ಬಹು ತೇಕ ಎಲ್ಲ ನದಿಗಳ ನೀರಿನ ಮಟ್ಟ ಏರಿಕೆಯಾಗುತ್ತಿದೆ. ಬುಧವಾರ ರಾತ್ರಿ ಯಿಡೀ ಮಳೆ ಸುರಿದಿದ್ದು, ಹರಿ ದ್ವಾರದಲ್ಲಿ ನದಿ ದಡದ ಸಮೀಪ ಪಾರ್ಕಿಂಗ್ ಮಾಡ ಲಾಗಿದ್ದ 12ಕ್ಕೂ ಅಧಿಕ ವಾಹನಗಳು ಕೊಚ್ಚಿ ಹೋಗಿವೆ. ಕೇದಾರ ನಾಥಕ್ಕೆ ಹೊರಟಿದ್ದ ಸುಮಾರು 450 ಯಾತ್ರಿಗಳು ಗೌರಿಕುಂಡ್-ಕೇದಾರನಾಥ ಟ್ರೆಕಿಂಗ್ ಮಾರ್ಗದಲ್ಲಿನ ಭಿಂಬಾಲಿಯಲ್ಲಿ ಸಿಲುಕಿಕೊಂಡಿದ್ದಾರೆ. ಈ ಮಾರ್ಗದಲ್ಲಿನ 20-25 ಮೀಟರ್‌ನಷ್ಟು ಭಾಗವು ಭಾರೀ ಮಳೆಯಿಂದಾಗಿ ಕೊಚ್ಚಿಹೋಗಿದೆ.
ಜೈಪುರ: ರಾಜಸ್ಥಾನದಲ್ಲೂ ಬಿರುಸಿನ ಮಳೆಯಾಗಿದೆ. ರಾಜಸ್ಥಾನದ ರಾಜಧಾನಿ ಜೈಪುರದ ಮನೆಯೊಂದಕ್ಕೆ ನೀರು ನುಗ್ಗಿದ್ದ ರಿಂದ ಮಹಿಳೆ, ಮಗು ಹಾಗೂ ವ್ಯಕ್ತಿಯೊಬ್ಬ ಮೃತಪಟ್ಟಿದ್ದಾರೆ. ಒಂದು ಗಂಟೆಯ ಕಾರ್ಯಾ ಚರಣೆಯ ಬಳಿಕ ಮೃತದೇಹ ಗಳನ್ನು ಹೊರತೆಗೆಯಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಹಿಮಾಚಲದಲ್ಲಿ 50 ಜನರು ನಾಪತ್ತೆ
ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಮೇಘ ಸ್ಫೋಟ ಸಂಭವಿಸಿದ್ದು, 3 ಮಂದಿ ಸಾವಿ ಗೀಡಾಗಿ, ಸುಮಾರು 50 ಮಂದಿ ನಾಪತ್ತೆ ಯಾಗಿದ್ದಾರೆ. ಕುಲ್ಲುವಿನ ನಿರ್ಮಾಂದ್, ಸೈಂಜ್ ಮತ್ತು ಮಲಾನಾ ಪ್ರದೇಶದಲ್ಲಿ, ಮಂಡಿಯ ಪಧಾರ್ ಪ್ರದೇಶ ದಲ್ಲಿ ಮತ್ತು ಶಿಮ್ಲಾದ ರಾಂಪು ರದಲ್ಲಿ ಮೇಘ ಸ್ಫೋಟ ಉಂಟಾಗಿ, ಹಲವಾರು ಮನೆಗಳು, ಸೇತುವೆಗಳು ಮತ್ತು ರಸ್ತೆಗಳು ಕೊಚ್ಚಿ ಹೋಗಿವೆ. ರಸ್ತೆಗಳ ಸಂಪರ್ಕ ಕಡಿತ ಗೊಂಡಿರುವ ಕಾರಣ, ರಕ್ಷಣಾ ಕಾರ್ಯಾಚರಣೆಯೂ ದೊಡ್ಡ ಸವಾ ಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Related Articles
ಪಾಟ್ನಾ: ಬಿಹಾರದ ವಿವಿಧ ಸ್ಥಳಗಳಲ್ಲೂ ಮಳೆಯಾಗಿದೆ. ಬುಧವಾರದಿಂದ ಗುರುವಾರದ ಅವಧಿಯಲ್ಲಿ 4 ಜಿಲ್ಲೆಗಳಲ್ಲಿ 12 ಮಂದಿ ಅಸುನೀಗಿದ್ದಾರೆ. ಗಯಾದಲ್ಲಿ 5, ಜೆಹನಾಬಾದ್‌ನಲ್ಲಿ 3, ನಲಂದಾ ಮತ್ತು ರೋಹ್‌ತಾಸ್ ಜಿಲ್ಲೆಗಳಲ್ಲಿ ತಲಾ ಇಬ್ಬರು ಅಸುನೀಗಿದ್ದಾರೆ.
Advertisement
ಜಮ್ಮು-ಕಾಶ್ಮೀರದ ಕಿಶ್ತ್ವಾರ್ ನಲ್ಲಿ ಪ್ರವಾಹಶ್ರೀನಗರ: ಜಮ್ಮು-ಕಾಶ್ಮೀರದ ಕಿಶ್ತ್ವಾರ್ ನ ದಚನ್ ಪ್ರದೇಶದಲ್ಲಿಯೂ ಭಾರೀ ಮಳೆ ಯಿಂದಾಗಿ ಪ್ರವಾಹ ಉಂಟಾಗಿದೆ. ಇಲ್ಲಿ ಸಾವು ನೋವು ಉಂಟಾಗದಿದ್ದರೂ ಪ್ರವಾಹದಿಂದಾಗಿ ಸೇತುವೆಗಳು ಮತ್ತು ಕಟ್ಟಡಗಳಿಗೆ ಹಾನಿ ಉಂಟಾಗಿದೆ. ರಜೌರಿ ಜಿಲ್ಲೆಯ ನದಿಗಳು ಉಕ್ಕಿ ಹರಿಯುತ್ತಿದ್ದು, ರಸ್ತೆಗಳು ಜಲಾವೃತಗೊಂಡಿವೆ. ದಿಲ್ಲಿ: ಜನಜೀವನ ಅಸ್ತವ್ಯಸ್ತ
ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ಹೊಸದಿಲ್ಲಿ ಯಲ್ಲಿ ಬುಧವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ 10 ಮಂದಿ ಅಸುನೀಗಿದ್ದಾರೆ. ನೋಯ್ಡಾದಲ್ಲಿ ಇಬ್ಬರು, ಗುರುಗ್ರಾಮದಲ್ಲಿ 3 ಹಾಗೂ ಹೊಸದಿಲ್ಲಿಯಲ್ಲಿ 5, ಒಟ್ಟು 10 ಮಂದಿ ಸಾವಿಗೀಡಾಗಿದ್ದಾರೆ. ಹಲವಾರು ಪ್ರದೇಶಗಳು ಜಲಾವೃತಗೊಂಡ ಪರಿಣಾಮ ಸಾಕಷ್ಟು ಟ್ರಾಫಿಕ್ ಜಾಮ್ ಸಂಭವಿಸಿತ್ತು. ಮಳೆ ಮುಂದುವರಿದ ಕಾರಣ ಗುರುವಾರ ದಿಲ್ಲಿಯ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು. ಗುರುವಾರ ಕೂಡ ರಾಷ್ಟ್ರ ರಾಜಧಾನಿಯ ಹಲವು ಸ್ಥಳಗಳಲ್ಲಿ ನೆರೆ ನೀರು ನಿಂತಿದ್ದರಿಂದ ಸಂಚಾರ ದಟ್ಟಣೆ ಉಂಟಾಗಿತ್ತು. ಸೋಮ ವಾರದ ವರೆಗೆ ದ್ಲಿಲಿಯಲ್ಲಿ ಗುಡುಗು -ಮಿಂಚು ಸಹಿತ ಭಾರೀ ಮಳೆಯಾಗಲಿದೆ ಎಂದೂ ಅಂದಾಜಿಸಲಾಗಿದೆ.