Advertisement
ಗ್ರಾಮೀಣ ಒಳರಸ್ತೆಗಳು ಮಾತ್ರವಲ್ಲದೆ ಪೇಟೆಯ ಮುಖ್ಯರಸ್ತೆಗಳಲ್ಲೂ ಮಳೆನೀರು ರಸ್ತೆಯಲ್ಲೇ ಹರಿಯಿತು. ಕಡಬದ ಕಾಲೇಜು ರಸ್ತೆಯಲ್ಲಿ ಉಕ್ಕಿ ಹರಿದ ಮಳೆನೀರಿನಿಂದಾಗಿ ರಸ್ತೆ ತೋಡಿನಂತಾಗಿತ್ತು. ಕಡಬದ ಸಮುದಾಯ ಆಸ್ಪತ್ರೆಯ ಆವರಣದ ವಸತಿಗೃಹಗಳ ಒಳಗೂ ನೀರು ನುಗ್ಗಿದ್ದರಿಂದ ಸಮಸ್ಯೆ ಎದುರಾಯಿತು. ರಸ್ತೆಯ ಪಕ್ಕದ ಚರಂಡಿಗಳಿಂದ ಉಕ್ಕಿದ ನೀರು ಆಸ್ಪತ್ರೆಯ ಆವರಣದೊಳಗೆ ಹರಿದುಬರುತ್ತಿ ರುವುದು ಕಂಡುಬಂತು. ಮರ್ದಾಳ ಪೇಟೆಯ ಮುಖ್ಯರಸ್ತೆ, ಬಲ್ಯ ಸರಕಾರಿ ಶಾಲೆಯ ಸಂಪರ್ಕ ರಸ್ತೆಯಲ್ಲೂ ಮಳೆನೀರು ಉಕ್ಕಿ ಹರಿಯಿತು. ತಗ್ಗು ಪ್ರದೇಶಗಳ ಗದ್ದೆ, ತೋಟಗಳಿಗೂ ಮಳೆನೀರು ನುಗ್ಗಿತ್ತು.
ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ಪರಿಸರದಲ್ಲಿ ಬುಧವಾರ ಸಂಜೆ ಗುಡುಗು ಸಹಿತ ಭಾರೀ ಗಾಳಿ ಮಳೆಯಾಗಿದ್ದು, ನೆಟ್ಟಣ ಸಮೀಪ ಹೆದ್ದಾರಿಗೆ ಮರ ಬಿದ್ದು ಸಂಚಾರಕ್ಕೆ ಅಡ್ಡಿಯುಂಟಾಯಿತು. ಕಡಬ-ಸುಬ್ರಹ್ಮಣ್ಯ ಹೆದ್ದಾರಿಯ ನೆಟ್ಟಣ ಸಮೀಪದ ಮರದ ಡಿಪೋ ಬಳಿ ಹೆದ್ದಾರಿಗೆ ಎರಡೂ ಮೂರು ಮರಗಳು ಬಿದ್ದು ಸಂಚಾರಕ್ಕೆ ಅಡಚಣೆಯಾಯಿತು. ಅರಣ್ಯ ಇಲಾಖೆ ತಂಡ ರಸ್ತೆಗೆ ಬಿದ್ದ ಮರ ತೆರವು ಮಾಡಿದರು. ಘಟನೆಯಲ್ಲಿ ಕೆಲವು ವಿದ್ಯುತ್ ಕಂಬಗಳಿಗೂ ಹಾನಿಯುಂಟಾಗಿದೆ.
ಕಡಬ, ನೆಟ್ಟಣ, ಬಿಳಿನೆಲೆ, ಸುಬ್ರಹ್ಮಣ್ಯ, ಬಳ್ಪ, ಕೊಲ್ಲಮೊಗ್ರು, ಹರಿಹರ ಪಳ್ಳತ್ತಡ್ಕ, ಗುತ್ತಿಗಾರು ಸಹಿತ ವಿವಿಧೆಡೆ ಬುಧವಾರ ಸಂಜೆ ಮಳೆಯಾಗಿತ್ತು.
Related Articles
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಕಡೆಗಳಲ್ಲಿ ಬುಧವಾರ ಮಳೆಯಾಗಿದೆ. ಮಂಗಳೂರು ನಗರದಲ್ಲಿ ಬಿಸಿಲು ಮತ್ತು ಮೋಡದಿಂದ ಕೂಡಿದ ವಾತಾವರಣ ಇತ್ತು. ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಮುಂದಿನ ಮೂರು ದಿನಗಳ ಕಾಲ ಜಿಲ್ಲೆಯ ಕೆಲವು ಕಡೆ ಸಾಧಾರಣ ಮಳೆ ಸುರಿಯುವ ನಿರೀಕ್ಷೆ ಇದೆ. ಮಂಗಳೂರಿನಲ್ಲಿ 32 ಡಿ.ಸೆ. ಗರಿಷ್ಠ ತಾಪಮಾನ ದಾಖಲಾಗಿ ವಾಡಿಕೆಗಿಂತ 0.2 ಡಿ.ಸೆ. ಅಧಿಕ ಮತ್ತು 25 ಡಿ.ಸೆ. ಕನಿಷ್ಠ ತಾಪಮಾನ ದಾಖಲಾಗಿ ವಾಡಿಕೆಗಿಂತ 1.7 ಡಿ.ಸೆ. ಏರಿಕೆ ಕಂಡಿತ್ತು.
Advertisement