Advertisement
ಅಸ್ತವ್ಯಸ್ತ: ಅಪಾರ ಮಳೆಯಿಂದಾಗಿ ಎರ್ನಾಕುಳಂ, ತ್ರಿಶ್ಶೂರ್ ಹಾಗೂ ತಿರುವನಂತಪುರ ಜಿಲ್ಲೆಗಳ ಅಲ್ಲಲ್ಲಿ ಪ್ರವಾಹ ಸ್ಥಿತಿ ಉಂಟಾಗಿದೆ. ಎರ್ನಾಕುಳಂನಲ್ಲಿ ಭಾರೀ ಮಳೆ ಹಾನಿಯಾಗಿದ್ದು, ತಗ್ಗು ಪ್ರದೇಶಗಳಲ್ಲಿದ್ದ ಜನರನ್ನು ಸುರಕ್ಷಿತ ಸ್ಥಳಗಳ ಕಡೆಗೆ ರವಾನಿಸಲಾಗಿದೆ. ಇದೇ ವೇಳೆ, ತ್ರಿಪುರ ರಾಜಧಾನಿ ಅಗರ್ತಲಾದಲ್ಲಿ ಕೂಡ ಧಾರಾಕಾರ ಮಳೆಯಿಂದ ನಗರ ಪ್ರಮುಖ ಸ್ಥಳಗಳಿಗೆ ನೀರು ನುಗ್ಗಿ ಜನರಿಗೆ ತೊಂದರೆಯಾಗಿದೆ.
Related Articles
Advertisement
ಗೂಗಲ್ ಮ್ಯಾಪ್ ನೀಡಿದ ತಪ್ಪು ಮಾಹಿತಿಯನ್ನು ನಂಬಿದ ಕರ್ನಾಟಕದ ಪ್ರವಾಸಿಗರಿದ್ದ ಕಾರೊಂದು ರಭಸವಾಗಿ ಹರಿಯುತ್ತಿದ್ದ ತೊರೆಯೊಂದಕ್ಕೆ ಹೋಗಿ ಬಿದ್ದ ಘಟನೆ ಕೇರಳದ ಕುರುಪ್ಪಂತರ ಕಡವು ಎಂಬಲ್ಲಿ ನಡೆದಿದೆ. ಈ ತಂಡ, ಕರ್ನಾಟಕದಿಂದ ಕೇರಳದ ಮುನ್ನಾರ್ ಮಾರ್ಗವಾಗಿ ಅಳಪ್ಪುಳಕ್ಕೆ ತೆರಳುತ್ತಿತ್ತು. ಆರಂಭದಿಂದಲೂ ಗೂಗಲ್ ಮ್ಯಾಪ್ ನೋಡಿಕೊಂಡೇ ಕಾರು ಚಾಲನೆ ಮಾಡಿಕೊಂಡು ಬರಲಾಗಿದ್ದು, ಕುರುಪ್ಪಂತರ ಕಡವು ಬಳಿ ಬಂದಾಗ ಗೂಗಲ್ ಮ್ಯಾಪ್‌ನಲ್ಲಿ ನೇರವಾಗಿ ಚಲಿಸುವಂತೆ ಸಂದೇಶ ಬಂದಿದೆ. ಅದನ್ನು ನಂಬಿದ ಚಾಲಕ ತಿರುವನ್ನು ಲೆಕ್ಕಿಸದೆ ನೇರವಾಗಿ ನುಗ್ಗಿದಾಗ ಕಾರು ತೊರೆಗೆ ಬಿದ್ದಿದೆ. ತಕ್ಷಣವೇ ಸ್ಥಳೀಯರು ಬಂದು ಕಾರಿನಲ್ಲಿದ್ದವರನ್ನು ರಕ್ಷಿಸಿದ್ದಾರೆ.