Advertisement

ಮಳೆಗೆ ಕುಡಿವ ನೀರಿನ ಬೋರ್‌ವೆಲ್‌ ಜಲಾವೃತ

12:51 PM Jun 04, 2022 | Team Udayavani |

ಮುದಗಲ್ಲ: ಮಳೆಗೆ ಸಮೀಪದ ತಲೇಖಾನ ಗ್ರಾಮದ ಸಾರ್ವಜನಿಕರ ಕುಡಿಯುವ ನೀರಿನ ಬೋರ್‌ವೆಲ್‌ ಜಲಾವೃತಗೊಂಡಿದೆ.

Advertisement

ಬುಧವಾರ ರಾತ್ರಿ ಸುರಿದ ಮಳೆಗೆ ನೀರು ಹರಿದು ಬಂದು ತಗ್ಗು ಪ್ರದೇಶಕ್ಕೆ ಸೇರಿದ್ದರಿಂದ ನೀರಿನ ಬೋರ್‌ವೆಲ್‌ ಜಲಾವೃತಗೊಂಡಿದ್ದು, ಯೋಜನೆಯ ಮೋಟಾರ್‌ ಚಾಲನೆಯಾಗುತ್ತಿಲ್ಲ. ಇದರಿಂದ ನೀರಿನ ತೊಂದರೆ ಉಂಟಾಗಿದೆ.

ಅಂಗನವಾಡಿ ಕೇಂದ್ರದ ಮುಂಭಾಗದಲ್ಲಿ ಮಳೆನೀರು ಸಂಗ್ರಹವಾಗಿ ಮಕ್ಕಳಿಗೆ ತೊಂದರೆಯಾಗಿದೆ. ಒಡ್ಡರ್‌ ಓಣಿಯಲ್ಲಿ ಮಳೆನೀರು ನಿಲ್ಲುವುದರಿಂದ ಇಲ್ಲಿನ ನಿವಾಸಿಗಳಿಗೆ ತೊಂದರೆಯಾಗಿದೆ ಎಂದು ಜನರು ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next