ಮಹಾನಗರ: ಕರಾವಳಿ ಭಾಗದಲ್ಲಿ ಮಳೆ ಬಿರುಸು ಪಡೆದಿದ್ದು, ಮಂಗಳೂರು ನಗರದಲ್ಲಿ ಗುರುವಾರ ಉತ್ತಮ ಮಳೆಯಾಗಿದೆ.
ಮಂಗಳೂರಿನಲ್ಲಿ ಬುಧವಾರ ತಡ ರಾತ್ರಿಯೇ ಮಳೆ ಆರಂಭಗೊಂಡಿದ್ದು, ಗುರುವಾರವೂ ಮುಂದುವರಿದಿತ್ತು. ಮಧ್ಯಾಹ್ನದವರೆಗೆ ಮಳೆ ಬಿರುಸು ಪಡೆ ದಿದ್ದು, ಬಳಿಕ ತುಸು ಬಿಡುವು ನೀಡಿತ್ತು. ಭಾರೀ ಮಳೆಯ ಪರಿಣಾಮ, ನಗರದ ಕೆಲವೊಂದು ತಗ್ಗು ಪ್ರದೇಶಗಳಲ್ಲಿ ನೀರು ನಿಂತಿತ್ತು. ನಗರದಲ್ಲಿ ಕೆಲವೊಂದು ಕಡೆ ಗಳಲ್ಲಿ ಈಗಾಗಲೇ ಅರ್ಧಂಬರ್ಧ ಕಾಮ ಗಾರಿ ನಡೆದಿದ್ದು, ಇದರಿಂದ ತೊಂದರೆ ಉಂಟಾಗಿತ್ತು. ಮಳೆ ಪರಿಣಾಮ ನಗರದ ಕೆಲವೆಡೆ ಟ್ರಾಫಿಕ್ ಜಾಮ್ ಇತ್ತು.
ಗುರುವಾರ ಬೆಳಗ್ಗೆ ಜಿಲ್ಲಾಡಳಿತದಿಂದ ಶಿಕ್ಷಣ ಸಂಸ್ಥೆಗಳಿಗೆ ರಜೆ ಎಂದು ಘೋಷಿಸುವ ಮೊದಲೇ ಹೆಚ್ಚಿನ ಮಕ್ಕಳು ಶಾಲೆಯನ್ನು ಸೇರಿದ್ದರಿಂದ ಮರಳಿ ಮನೆಗೆ ಮಳೆಯಲ್ಲಿ ಹಿಂದುರುಗಿದ ಘಟನೆ ನಡೆಯಿತು. ಹೊಗೆಬಜಾರ್ ಬಳಿ ಮರದ ಮಿಲ್ ಕುಸಿದ ಘಟನೆ ಬುಧವಾರ ರಾತ್ರಿ ನಡೆದಿದೆ. ಮಿಲ್‌ಗಳಲ್ಲಿರುವ ಯಂತ್ರ ಗಳು, ಮರಗಳಿಗೆ ಹಾನಿಯಾಗಿವೆ. ಗುಜ್ಜರಕೆರೆ ಕೆರೆ ತಡೆಗೋಡೆ ಕುಸಿದಿದೆ.
ಜಪ್ಪಿನಮೊಗರಿನಲ್ಲಿ ರಸ್ತೆಗೆ ಕೃತಕ ನೆರೆ ಆವರಿಸಿದ್ದು, ಸ್ಥಳೀಯ ಮನಪಾ ಸದಸ್ಯೆ ವೀಣಾ ಮಂಗಳ ನೇತೃತ್ವದಲ್ಲಿ ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಮಳೆ ಆರಂಭವಾದ ಕಾರಣ ಪಾಲಿಕೆ ವ್ಯಾಪ್ತಿಯಲ್ಲಿ ಹೊಸ ದಾಗಿ ಕಟ್ಟಡ ಕಾಮಗಾರಿ ಆರಂಭಿಸುವುದನ್ನು ನಿಷೇಧಿಸಲಾಗಿದ್ದು, ಮಳೆಗಾಲ ಮುಗಿದ ಅನಂತರ ಕಾಮಗಾರಿ ಯನ್ನು ಪ್ರಾರಂಭಿಸುವಂತೆ ಪಾಲಿಕೆ ಆಯುಕ್ತರು ಈಗಾಗಲೇ ಸೂಚನೆ ನೀಡಿ ದ್ದಾರೆ. ಅದರಂತೆ ಗುಡ್ಡವನ್ನು ಅಗೆದು ಸಮತಟ್ಟುಗೊಳಿಸುವುದು, ಮಣ್ಣು ಸಾಗಾಟ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ತಗ್ಗು ಪ್ರದೇಶ ವಿರುವಲ್ಲಿ ತಡೆಗೋಡೆ ನಿರ್ಮಿಸಿ ಭದ್ರ ಪಡಿಸುವಂತೆ ಪಾಲಿಕೆ ಸೂಚನೆ ನೀಡಿದೆ.