Advertisement

ಭಾರೀ ಮಳೆ: ಕುಸಿದ ಮನೆ, ಶಾಲಾ ಕಾಂಪೌಂಡ್‌

08:54 PM Oct 09, 2019 | Lakshmi GovindaRaju |

ಹನೂರು: ಕಳೆದ 2-3 ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಮನೆಗಳು, ಸ್ಮಶಾನದ ಸುತ್ತುಗೋಡೆ ಕುಸಿದಿರುವ ಘಟನೆ ಸಮೀದ ಬಂಡಳ್ಳಿ ಗ್ರಾಮದಲ್ಲಿ ಜರುಗಿದೆ. ತಾಲೂಕಿನ ಬಂಡಳ್ಳಿ ಗ್ರಾಮದ ರಾಚಮ್ಮ ಮತ್ತು ನಂಜುಂಡಾಚಾರಿ ಅವರ ಮನೆಯ ಗೋಡೆಗಳು ಕುಸಿದಿದೆ. ಅದೃಷ್ಟವಶಾತ್‌ ಯಾವುದೇ ಹಾನಿ ಸಂಭವಿಸಿಲ್ಲ.

Advertisement

ಘಟನೆಯಿಂದಾಗಿ ವಾಸವಿದ್ದ ಒಂದು ಮನೆಯು ಕುಸಿದು ಬಿದ್ದಿದ್ದು ಕುಟುಂಬ ಬೀದಿಗೆ ಬಂದಂತಾಗಿದೆ. ಆದ್ದದರಿಂದ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಅಗತ್ಯ ಕ್ರಮವಹಿಸುವಂತೆ ನಿರಾಶ್ರಿತರು ಆಗ್ರಹಿಸಿದ್ದಾರೆ. ಬಂಡಳ್ಳಿ – ತೋಮಿಯರ್‌ಪಾಳ್ಯ ರಸ್ತೆಯಲ್ಲಿರುವ ಸ್ಮಶಾನದ ಸುತ್ತುಗೋಡೆಯು ಕುಸಿದುಬಿದ್ದಿದೆ.

ಶಾಗ್ಯದಲ್ಲಿ ಶಾಲಾ ಕಾಂಪೌಂಡ್‌ ಕುಸಿತ: ತಾಲೂಕಿನ ಶಾಗ್ಯ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸುತ್ತುಗೋಡೆ ಕುಸಿದುಬಿದ್ದಿದೆ. ಶಾಲೆಗೆ ರಜೆ ಇದ್ದರಿಮದ ಅದೃಷ್ಟವಶಾತ್‌ ಯಾವುದೇ ಹಾನಿ ಸಂಭವಿಸಿಲ್ಲ. ಅಲ್ಲದೆ ಮಳೆಯ ನೀರು ಸರಾಗವಾಗಿ ಹರಿಯಲು ಸಾಧ್ಯವಾಗದೆ ಶಾಲಾ ಆವರಣ ಕೆರೆಯಂತಾಗಿದೆ. ಕೆಲ ಶಾಲಾ ಕೊಠಡಿಗಳಿಗೂ ಮಳೆಯ ನೀರು ನುಗ್ಗಿದೆ.

ಕಂದಾಯ ಇಲಾಖಾ ಅಧಿಕಾರಿಗಳು ಭೇಟಿ: ಘಟನೆಯ ಬಗ್ಗೆ ಮಾಹಿತಿ ತಿಳಿದ ತಹಶೀಲ್ದಾರ್‌ ನಾಗರಾಜು ಮತ್ತು ಅಧಿಕಾರಿಗಳ ತಂಡ ಹಾನಿಗೀಡಾದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದೇ ವೇಳೆ ಮನೆ ಗೋಡೆ ಕುಸಿದಿರುವವರಿಗೆ ಸರ್ಕಾರದ ವತಿಯಿಂದ ಪರಿಹಾರ ಕಲ್ಪಿಸಲು ಅಗತ್ಯ ಕ್ರಮವಹಿಸುವ ಭರವಸೆ ನೀಡಿದರು. ರಾಜಸ್ವ ನಿರೀಕ್ಷಕ ಬಿ.ಪಿ.ಮಾದೇಶ್‌, ಗ್ರಾಮ ಲೆಕ್ಕಾಧಿಕಾರಿ ವಿಷ್ಣು, ತಾಪಂ ಪ್ರಭಾರ ಇಒ ನಿಂಗರಾಜು, ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ರಾಜು ಲಮಾಣಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next