Advertisement

ಗಾಳಿ- ಮಳೆಗೆ ನೆಲ ಕಚ್ಚಿದ ಅಪಾರ ಪ್ರಮಾಣದ ಬಾಳೆ: ಸಂಕಷ್ಟದಲ್ಲಿ ರೈತರು

09:02 AM May 09, 2021 | Team Udayavani |

ಕೊಪ್ಪಳ: ಕೊಪ್ಪಳ ತಾಲೂಕಿನಲ್ಲಿ ರವಿವಾರ ರಾತ್ರಿ ಸುರಿದ ಮಳೆ ಹಾಗೂ ಭಾರೀ ಗಾಳಿಗೆ ವಿವಿಧೆಡೆ ರೈತರ ಬೆಳೆ ನೆಲ ಕಚ್ಚಿವೆ. ಇದರಿಂದ ರೈತ ತೀವ್ರ ಸಂಕಷ್ಟ ಎದುರಿಸುವ ಪರಿಸ್ಥಿತಿ ಎದುರಾಗಿದೆ.

Advertisement

ತಾಲೂಕಿನ ಮುದ್ದಾಬಳ್ಳಿ, ಹ್ಯಾಟಿ ಸೇರಿದಂತೆ ಕೆಲವು ಗ್ರಾಮದಲ್ಲಿ ರವಿವಾರ ರಾತ್ರಿ ಬಿರುಸಿನ ಗಾಳಿ ಹಾಗೂ ಮಳೆ ಸುರಿದಿದೆ. ಕೋವಿಡ್ ಆರ್ಭಟದ ಮಧ್ಯೆ ರೈತನು ಕಷ್ಟಪಟ್ಟು ಬೆಳೆದಿದ್ದ ಬಾಳೆ, ನುಗ್ಗೆ ಸೇರಿದಂತೆ ಇತರೆ ಬೆಳೆಯು ನೆಲ ಕಚ್ಚಿವೆ.‌

ಒಂದೆಡೆ ಕೋವಿಡ್ ಸಂಕಷ್ಟದಲ್ಲಿ ಬಾಳೆಗೆ ಬೆಲೆ ಇಲ್ಲದ ಪರಿಸ್ಥಿತಿ ಒಂದೆಡೆಯಾದರೆ ಇನ್ನೊಂದೆಡೆ ಮುಂಗಾರು ಪೂರ್ವ ಗಾಳಿ ಮಳೆಗೆ ಬಾಳೆ ಗಿಡಗಳು ನೆಲ ಕಚ್ಚಿವೆ.

ಮುದ್ದಾಬಳ್ಳಿಯ ರೈತ ಮೈಲಾರಪ್ಪ ಹಟ್ಟಿ ಅವರ ಎರಡು ಎಕರೆ ಜಮೀನಿನಲ್ಲಿ ಒಂದು ಎಕರೆ ಭಾಗದಲ್ಲಿ ಬಾಳೆ ನೆಲ ಕಚ್ಚಿದೆ. ಇನ್ನೇನು ಬಾಳೆ‌ ಗೊನೆ‌ ಕಟಾವಿಗೆ ಬಂದಿತ್ತು. ಈ ವೇಳೆ ಬಾಳೆ ನೆಲ ಕಚ್ಚಿದ್ದರಿಂದ ರೈತರಿಗೆ ದಿಕ್ಕೇ ತೋಚದಂತಹ ಸ್ಥಿತಿ ಎದುರಾಗಿದೆ.

Advertisement

ಹ್ಯಾಟಿ ಗ್ರಾಮದಲ್ಲೂ ಸಹ ಹಲವು ರೈತರ ಬಾಳೆಯು ಅಪಾರ ಪ್ರಮಾಣದಲ್ಲಿ ನೆಲ ಕಚ್ಚಿವೆ. ಕೆಲವರ ಮನೆಯ ತಗಡು ಹಾರಿ ಹೋಗಿವೆ. ಇದರಿಂದ ಕುಟುಂಬವು ಸಂಕಷ್ಟ ಎದುರಿಸುತ್ತಿದ್ದಾರೆ. ಕೂಡಲೇ ಶಾಸಕರು, ಸಂಸದರು, ತೋಟಗಾರಿಕೆ ಇಲಾಖೆ ಸೇರಿ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ರೈತರ ಜಮೀನಿಗೆ ಭೇಟಿ ನೀಡಿ ಬೆಳೆ ಹಾನಿ ಪರಿಹಾರ ನೀಡುವಂತೆ ರೈತರು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next