Advertisement

ಉಡುಪಿ: ಧಾರಕಾರ ಮಳೆಗೆ ಮುಳುಗಿತು ಕಾರು- ಬೈಕ್ ಗಳು

11:28 AM Jun 04, 2021 | Team Udayavani |

ಉಡುಪಿ: ನಗರದಲ್ಲಿ ಗುರುವಾರ ರಾತ್ರಿಯಿಂದ ಸುರಿದ ಧಾರಾಕಾರ ಮಳೆಯಿಂದಾಗಿ ಹಲವೆಡೆ ಅವಾಂತಗಳು ಸಂಭವಿಸಿದೆ, ನಗರದ ಬಿಗ್ ಬಜಾರ್ ಪಾರ್ಕಿಂಗ್ ಪ್ರದೇಶದಲ್ಲಿ ಮಳೆ ನೀರು ನುಗ್ಗಿ ಹತ್ತಾರು ಬೈಕ್ ಗಳು ಮತ್ತು ಕಾರುಗಳು ನೀರಿನಲ್ಲಿ ಮುಳುಗಿದೆ.

Advertisement

ತಡ ರಾತ್ರಿಯಿಂದ ಸುರಿದ ಭಾರಿ ಮಳೆಯಿಂದಾಗಿ ಬಿಗ್‌ ಬಜಾರ್ ಕಟ್ಟಡದ  ಪಾರ್ಕಿಂಗ್ ಪ್ರದೇಶ ಸಂಪೂರ್ಣ ಜಲಾವೃತಗೊಂಡಿದೆ. ಕಟ್ಟಡದ ನೆಲ ಮಳಿಗೆಗೆ ಮಳೆ ನೀರು ತುಂಬಿಕೊಂಡು ಪರಿಣಾಮ ಪಾರ್ಕಿಂಗ್ ಮಾಡಲಾಗಿದ್ದ ಆರು ಕಾರುಗಳು ಹಾಗೂ ಹತ್ತಕ್ಕೂ ಹೆಚ್ಚು  ಬೈಕುಗಳು ಮುಳುಗಿ ಹೋಗಿವೆ.

ಇದನ್ನೂ ಓದಿ:ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ 1.32 ಲಕ್ಷ ಕೋವಿಡ್ ಪ್ರಕರಣ ಪತ್ತೆ, ಸಾವಿನ ಪ್ರಮಾಣ ಇಳಿಕೆ

ಅಗ್ನಿ ಶಾಮಕ ಸಿಬ್ಬಂದಿಗಳು ಬೆಳಗ್ಗೆಯಿಂದಲೇ ಪಂಪ್ ಗಳ ಮೂಲಕ ನೀರು ಮೆಲಕ್ಕೆತ್ತುವ ಕಾರ್ಯಚರಣೆ ಮಾಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next