Advertisement

ದಕ್ಷಿಣದಲ್ಲಿ ಹೆಚ್ಚಿದ ವರ್ಷ ಪ್ರಕೋಪ

12:04 AM Jul 15, 2022 | Team Udayavani |

ಹೊಸದಿಲ್ಲಿ:  ಕೇರಳ, ತೆಲಂಗಾಣ, ಆಂಧ್ರ­ಪ್ರದೇಶ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಮಳೆಯ ಅಬ್ಬರ ಹೆಚ್ಚಿದೆ. ಭಾರೀ ಮಳೆಯಿಂದಾಗಿ ಕೇರಳದ ನದಿಗಳು ಉಕ್ಕಿ ಹರಿಯಲಾರಂಭಿಸಿದ್ದು, ಹಲವು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಕಾಸರ­ಗೋಡು, ಕಲ್ಲಿಕೋಟೆ ಮತ್ತು ವಯನಾಡ್‌ ಜಿಲ್ಲೆಯ ವಿವಿಧ ಭಾಗಗಳಲ್ಲಿ ನದಿಗಳು ಉಕ್ಕೇರಿ ಹರಿದಿದೆ ಮತ್ತು ವಿವಿಧೆಡೆ ನೀರಿನಲ್ಲಿ ಸಿಕ್ಕಿ ಹಾಕಿಕೊಂಡಿದ್ದ 427 ಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.

Advertisement

ತೆಲಂಗಾಣದಲ್ಲಿಯೂ ಮಳೆಯ ಆರ್ಭಟ ಹೆಚ್ಚಿದ್ದು, 19,000ಕ್ಕೂ ಅಧಿಕ ಮಂದಿ ತಾತ್ಕಾ­ಲಿಕ ಶಿಬಿರಗಳಲ್ಲಿ  ಆಶ್ರಯ ಪಡೆಯುತ್ತಿದ್ದಾರೆ. ಅಲ್ಲಿ  18ರ ವರೆಗೆ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಸಿದೆ.

ಆಂಧ್ರಪ್ರದೇಶದಲ್ಲೂ ಮಳೆ ಹೆಚ್ಚಾಗಿದ್ದು, ಹಲವು ಅಣೆಕಟ್ಟುಗಳು ತುಂಬುವ ಹಂತದ­ಲ್ಲಿವೆ. ದೌಲೇಶ್ವರ ಅಣೆಕಟ್ಟು ಮತ್ತು ಭದ್ರಾ­ಚಲಂ ಅಣೆಕಟ್ಟಿನಿಂದ ದೊಡ್ಡ ಪ್ರಮಾಣದಲ್ಲಿ ನೀರನ್ನು ಹೊರಬಿಡಲಾಗುತ್ತಿದೆ. ಮಹಾ­ರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಎದುರಾದ ಹಿನ್ನೆಲೆ 29 ಗ್ರಾಮಗಳ 3,000 ಜನರನ್ನು ಬೇರೆ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.

ಗುಜರಾತ್‌ನ ನವ್ಸಾರಿ ಜಿಲ್ಲೆಯಲ್ಲೂ ಗುರುವಾರ ಮಳೆಯಿಂದಾಗಿ ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದವು. 100ಕ್ಕೂ ಅಧಿಕ ಮಂದಿಯನ್ನು ಅಧಿಕಾರಿಗಳು ಸ್ಥಳಾಂತರಗೊಳಿ­ಸಿದ್ದಾರೆ. ವನ್ಸದ ತಾಲೂಕಿನಲ್ಲಿ ಬರೋಬ್ಬರಿ 394 ಮಿ.ಮೀ. ಮಳೆಯಾಗಿದೆ. ತಪಿ ಮತ್ತು ವಡೋ­ದರ ಜಿಲ್ಲೆಯಲ್ಲಿ ನೆರೆಯಲ್ಲಿ ಸಿಲುಕಿದ್ದ 45 ಮಂದಿಯನ್ನು ಎನ್‌ಡಿಆರ್‌ಎಫ್ ತಂಡ  ರಕ್ಷಿಸಿದೆ.

ರಾಜಸ್ಥಾನದ ಹಲವೆಡೆ ಭಾರೀ ಮಳೆ ಸುರಿ­ದಿದೆ. ಜಲಾವರದ ದಗ್‌ ಪ್ರದೇಶದಲ್ಲಿ 140­ಸೆಂ.ಮೀ. ಮಳೆಯಾಗಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next