ಅರಂತೋಡು: ಕಳೆದ ಮೂರು ದಿವಸಗಳಿಂದ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಗೆ ಸಂಪಾಜೆ ಗ್ರಾಮದಲ್ಲಿ ಅಲ್ಲಲ್ಲಿ ಬರೆ ಕುಸಿತ ಉಂಟಾಗಿದೆ.
ಗೂನಡ್ಕ ದರ್ಖಾಸಿನ ಗಣೇಶ್ ಭಟ್ ಎಂಬವರ ಮನೆಗೆ ಹಾನಿಯಾಗಿದೆ. ಧರಣಿ ದಯಾನಂದ ಎಂಬವರ ಮನೆ ಜಲಾವೃತವಾಗಿದೆ. ಹಲವು ಮನೆಗಳಿಗೆ ನೀರು ನುಗ್ಗಿದೆ. ಸಂಪಾಜೆ ಜ್ಯೂನಿಯರ್ ಕಾಲೇಜಿನ ಬಳಿ ಬರೆ ಕುಸಿತ ಉಂಟಾಗಿದೆ.
ಸಂಪಾಜೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಬದಿಯಲ್ಲಿ ಅಲ್ಬಸ್ವಲ್ಪ ಬರೆ ಕುಸಿತ ಉಂಟಾಗಿದೆ. ಪಯಸ್ವಿನಿ ನದಿ ಹಾಗು ಇತರ ಹಳ್ಳ ಕೊಳ್ಳಗಳು ತುಂಬಿ ಹರಿದಿದೆ. ಪೇರಡ್ಕ-ದರ್ಕಾಸ್ ಸಂಪರ್ಕ ಕಡಿತಗೊಂಡಿದೆ. ಅಲ್ಲಲ್ಲಿ ತೋಟಗಳಿಗೆ ನೀರು ನುಗ್ಗಿದೆ. ಅಬೂ ಸಾಲಿ, ಜಿ.ಜಿ.ಶಿವಾನಂದ,ಜಿ.ಜಿ. ಹಿಮಕರ, ಚಂದ್ರ ಅವರ ತೋಟಗಳು ಸೇರಿ ಹಲವು ತೋಟಗಳಿಗೆ, ಕೃಷಿ ಭೂಮಿಗೆ ಪ್ರದೇಶಗಳು ಜಲಾವೃತವಾಗಿವೆ.ಕಳೆದ ಕೆಲವು ದಿನಗಳಿಂದ ಭೂ ಕಂಪನ ಆತಂಕ ಸೃಷ್ಠಿಸಿರುವ ಸಂಪಾಜೆಯಲ್ಲಿ ಈಗ ಮಳೆ ಆವಾಂತರ ಸೃಷ್ಠಿಸಿದೆ. ಊರುಬೈಲು ಭಾಗದಲ್ಲಿಯೂ ಬರೆಕುಸಿತ ಉಂಟಾಗಿದ್ದು ಮನೆಗಳಿಗೆ ಹಾನಿಯಾಗಿರುವ ಬಗ್ಗೆ ವರದಿಯಾಗಿದೆ.
ಊರುಬೈಲಿನಲ್ಲಿ ಬರೆ ಕುಸಿತವಾಗಿದೆ ಎಂದು ತಿಳಿದು ಬಂದಿದೆ.