Advertisement
ಕಳೆದ ಹಲವು ದಿನಗಳಿಂದ ಕುಣಿಗಲ್ ತಾಲೂಕು ಸೇರಿದಂತೆ ಇದರ ಅಕ್ಕಪಕ್ಕದ ತಾಲೂಕುಗಳಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು ಈ ನಿಟ್ಟಿನಲ್ಲಿ ಮಾರ್ಕೋನಹಳ್ಳಿ ಜಲಾಶಯಕ್ಕೆ 3200 ಕ್ಕೂ ಅಧಿಕ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ, ಜಲಾಶಯದ ಸುರಕ್ಷತೆಯ ದೃಷ್ಠಿಯಿಂದ್ದಾಗಿ ಇಷ್ಟೇ ಪ್ರಮಾಣದ ನೀರನ್ನು ಹೊರ ಬಿಡಲಾಗುತ್ತಿದೆ ಹೀಗಾಗಿ ಇದರ ಅಚ್ಚುಕಟ್ಟು ಪ್ರದೇಶವಾದ ಮಾರ್ಕೋನಹಳ್ಳಿ, ಹನುಮಾಪುರ, ಕೆ.ಟಿ.ಪಾಳ್ಯ, ಬೆಟ್ಟಹಳ್ಳಿ, ಪಡುವಗೆರೆ, ಕೊಡವತ್ತಿ, ಕೀಲಾರ, ಅಂಚೀಪುರ, ದೊಡ್ಡಕಲ್ಲಹಳ್ಳಿ, ಎಡವಾಣಿ, ಕಗ್ಗಲ್ಲೀಪುರ, ಶ್ಯಾನುಭೋಗನಹಳ್ಳಿ, ವಳಗೆರೆಪುರ ಹಾಗೂ ಕಾಡಶೆಟ್ಟಿಹಳ್ಳಿ ಗ್ರಾಮಸ್ಥರು ಜಲಾಶಯ ಬಳಿ ತೆರಳದಂತೆ ತಹಶೀಲ್ದಾರ್ ಮಹಬಲೇಶ್ವರ ಮನವಿ ಮಾಡಿದ್ದಾರೆ,
Related Articles
Advertisement
ಮಳೆ ವಿವರ : ತಾಲೂಕಿನಾಧ್ಯಂತ ವ್ಯಾಪಕವಾಗಿ ಮಳೆಯಾಗುತ್ತಿದ್ದು ಕಳೆದ 24 ಗಂಟೆಗಳಲ್ಲಿ ಕುಣಿಗಲ್ ಪಟ್ಟಣದಲ್ಲಿ 94.05 ಮೀ.ಮೀ, ಹುಲಿಯೂರುದುರ್ಗ 65 ಮೀ.ಮೀ, ಸಂತೇಪೇಟೆ 63.8 ಮೀ.ಮೀ, ಅಮೃತೂರು 79.4 ಮೀ.ಮೀ, ಕೆ.ಹೊನ್ನಮಾಚನಹಳ್ಳಿ 81.2 ಮೀ.ಮೀ, ನಿಡಸಾಲೆ 41.2 ರಷ್ಟು ಮಳೆಯಾಗಿದೆ.