ಕೆ.ಆರ್.ನಗರ: ಗುರುವಾರ ರಾತ್ರಿ ಸುರಿದ ಭಾರೀ ಮಳೆಗೆಗೋಡೆ ಕುಸಿದ ರಭಸಕ್ಕೆಹೊಗೆಸೊಪ್ಪಿನ ಬ್ಯಾರನ್‌ನೆಲಕಚ್ಚಿದ್ದು, ಹಸುಸಾವನ್ನಪ್ಪಿರುವ ಘಟನೆಸಾಲಿಗ್ರಾಮ ತಾಲೂಕಿನನರಚನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಪಾಪೇಗೌಡಎಂಬುವವರಿಗೆ ಸೇರಿದ ಬ್ಯಾರನ್‌ನೆಲಕಚ್ಚಿದ್ದು, ಹಸು ಸಾವನ್ನಪ್ಪಿದೆ.ಬ್ಯಾರನ್ ಪಕ್ಕದ ಮನೆಯಲ್ಲಿಯೇ ವಾಸವಿದ್ದಮನೆಯ ಸದಸ್ಯರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಹೊಗೆಸೊಪ್ಪು ಬೇಯಿಸಲು ನಿರ್ಮಾಣ ಮಾಡಿಕೊಂಡಿದ್ದ ಬ್ಯಾರನ್ ಸಂಪೂರ್ಣವಾಗಿ ಬಿದ್ದು ಹೋಗಿದ್ದು, ದನದಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಹಸು ಸ್ಥಳದಲ್ಲಿಯೇಸಾವನ್ನಪ್ಪಿದೆ. ಗೋಡೆ ಕುಸಿದ ರಭಸಕ್ಕೆ ಬ್ಯಾರನ್ ಮನೆಯಪಕ್ಕದಲ್ಲಿದ್ದ ಪಾಪೇಗೌಡರ ವಾಸದ ಮನೆಯ ಅಡುಗೆಕೋಣೆ ಸೇರಿದಂತೆ ಅರ್ಧಗೋಡೆ ಕುಸಿದು ಬಿದ್ದಿದೆ.ಇದರಿಂದಾಗಿ ಸುಮಾರು 10 ಲಕ್ಷ ರೂ. ನಷ್ಟವಾಗಿರುವಬಗ್ಗೆ ಅಂದಾಜಿಸಲಾಗಿದೆ.
ಗ್ರಾಪಂ ಅಧ್ಯಕ್ಷರ ಭೇಟಿ: ಸುದ್ದಿ ತಿಳಿದ ನರಚನಹಳ್ಳಿ ಗ್ರಾಪಂ ಅಧ್ಯಕ್ಷ ವಡ್ಡರಕೊಪ್ಪಲುಮೋಹನ್ ಶನಿವಾರ ಬೆಳಗ್ಗೆ ಸ್ಥಳಕ್ಕೆಭೇಟಿ ನೀಡಿ ಪರಿಶೀಲನೆ ನಡೆಸಿ ಪಾಪೇಗೌಡ ಮತ್ತು ಅವರ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.
ಮೃತಪಟ್ಟ ಹಸುವಿನ ಮರಣೋತ್ತರ ಪರೀಕ್ಷೆ ಬಂದ ನಂತರ ಸರ್ಕಾರದ ವತಿಯಿಂದ ಪರಿಹಾರ ಕೊಡಿಸಲುಪ್ರಯತ್ನಿಸಲಾಗುವುದು ಎಂದ ಅವರು, ಹಸುವಿನ ಮಾಲೀಕರಿಗೆ ವೈಯಕ್ತಿಕವಾಗಿ ಐದು ಸಾವಿರ ರೂ.ಗಳ ಆರ್ಥಿಕ ನೆರವು ನೀಡಿದರು.
ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ತಂಬಾಕು ಮಂಡಳಿ ಅಧಿಕಾರಿಗಳು ಭೇಟಿ ನೀಡಿಪರಿಶೀಲನೆ ನಡೆಸಿದ್ದು, ಸರ್ಕಾರಕ್ಕೆ ವರದಿ ಸಲ್ಲಿಸಲಿದ್ದಾರೆ ಎಂದು ತಿಳಿಸಿದರು.
ಗ್ರಾಪಂ ಸದಸ್ಯ ನವೀನ್, ಮಾಜಿ ಅಧ್ಯಕ್ಷ ಹಳೇಮಿರ್ಲೆಸ್ವಾಮಿ, ಮಾಜಿ ಸದಸ್ಯ ವೆಂಕಟೇಶ್, ಮುಖಂಡ ರಾಚಪ್ಪಾಜಿ ಇದ್ದರು.