ಹುಣಸೂರು : ಮುಂದುವರಿದ ಮಳೆ ಹಾನಿ, ಗಾವಡಗೆರೆ ಕೆ.ಆರ್.ನಗರ ಮುಖ್ಯರಸ್ತೆಯ ರಸ್ತೆ ಬದಿಯಲ್ಲಿದ್ದ ಬೃಹತ್ ಗಾತ್ರದ ಆಲದ ಮರ ಬಿದ್ದು ವಿದ್ಯುತ್ ಕಂಬಗಳು ಮುರಿದು ಬಿದ್ದು ರಸ್ತೆ ಸಂಚಾರಕ್ಕೆ ಅಡಚಣೆಯಾಗಿತ್ತು.
ಗಾವಡಗೆರೆ ಹೋಬಳಿಯ ಶೀರೇನಹಳ್ಳಿ ಗ್ರಾಮದ ಮುದ್ದೇಗೌಡ ಎಂಬುವರಿಗೆ ಸೇರಿದ ತೋಟದಲ್ಲಿ ಬಿರುಗಾಳಿಗೆ 6 ಕ್ಕೂ ಹೆಚ್ಚು ತೆಂಗಿನ ಮರಗಳು ಧರೆಗುರುಳಿವೆ. ಹಿರೀಕ್ಯಾತನಹಳ್ಳಿ ಗ್ರಾಮದ ಮಹದೇವ್ ಶೆಟ್ಟಿ ಎಂಬವರ ತೋಟದಲ್ಲಿ ತೆಂಗಿನ ಮರಗಳು ಧರೆಗುರುಳಿವೆ. ಇನ್ನು ವಿಪರೀತ ಮಳೆಗೆ ತಂಬಾಕು ನಾಟಿ ಮಾಡಿದ ಹೊಲದಲ್ಲಿ ಗದ್ದೆಯಂತೆ ನೀರು ತುಂಬಿಕೊಂಡು ಅಪಾರ ನಷ್ಟವಾಗಿದೆ. ಹೋಬಳಿಯಾದ್ಯಂತ ಹಲವಾರು ಗ್ರಾಮಗಳಲ್ಲಿ ಮನೆಗಳಿಗೆ ಹಾನಿಯಾಗಿದೆ.
ಹಾನಿ ಸ್ಥಳಕ್ಕೆ ಕಂದಾಯ ತೋಟಗಾರಿಕೆ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅರಣ್ಯ ಇಲಾಖೆ ಸಿಬ್ಬಂದಿಗಳು ಮುಖ್ಯ ರಸ್ತಗೆ ಬಿದಿದ್ದ ಭಾರಿ ಗಾತ್ರದ ಆಲದ ಮರದ ಕೊಂಬೆಗಳನ್ನು ತೆರವು ಗೊಳಿಸಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಸಿದರು.
ಅತೀ ಹೆಚ್ಚು ಹಾನಿಗೊಳಗಾದ ತಾಲೂಕಿನ ಕಳ್ಳಿಕೊಕೊಪ್ಪಲು ಜಾಬಗೆರೆ ಹಿರಿಕ್ಯಾತನಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿ ಮಳೆ ಹಾನಿಯನ್ನು ವೀಕ್ಷಿಸಿ ಶೀಘ್ರವೇ ಲಕಪರಿಹಾರ ವಿತರಿಸುವಂತೆ ಸೂಚಿಸಿದರು.